ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ; ಹಾಗಾದರೆ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ | How to watch Puneeth Namana Program on November 16th here is the details


ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ; ಹಾಗಾದರೆ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಪುನೀತ್​ ರಾಜ್​ಕುಮಾರ್​

ನಟ ಪುನೀತ್ ರಾಜ್​ಕುಮಾರ್ ಅವರಿಗೆ ಚಿತ್ರರಂಗದ ವತಿಯಿಂದ ನಮನ ಸಲ್ಲಿಸುವ ಸಲುವಾಗಿ ‘ಪುನೀತ ನಮನ’ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 1,500 ಜನರು ಸೇರಿ ನಮನ ಸಲ್ಲಿಸುವ ಯೋಜನೆ ರೂಪಿಸಲಾಗಿದೆ. ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರುವ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾದರೆ ಸಾರ್ವಜನಿಕರಿಗೆ ಇದರ ವೀಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ನಿರ್ಮಾಪಕ ಸಾ.ರಾ.ಗೋವಿಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಲ್ಲಿ ಪುನೀತ್ ನಮನ ಕಾರ್ಯಕ್ರಮದ ಲೈವ್ ಪ್ರಸಾರವಾಗಲಿದೆ. ಅದನ್ನು ವೀಕ್ಷಣೆ ಮಾಡುವ ಮುಖಾಂತರ ಸಹಕಾರ ನೀಡಬೇಕು ಎಂದು ಸಾರಾ ಗೋವಿಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ರೂಪುರೇಷೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿಳಿಸಲು ಇಂದು ಅವರನ್ನು ಸಾ.ರಾ ಗೋವಿಂದು ಹಾಗೂ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಎನ್​.ಎಂ ಸುರೇಶ್ ಭೇಟಿಯಾಗಿದ್ದಾರೆ. ನಂತರ ಗೋವಿಂದು, ಮಾಧ್ಯಮದವರೊಂದಿಗೆ ಮಾತನಾಡಿದರು. ನವೆಂಬರ್ 16ರಂದು ಪುನೀತ ನಮನ ಕಾರ್ಯಕ್ರಮದ ರೂಪರೇಷೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುವಂತೆ ಸಿಎಂ ತಿಳಿಸಿದ್ದಾರೆ. ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಮಾಧ್ಯಮಗಳಲ್ಲಿ ಲೈವ್ ಪ್ರಸಾರವಿರುತ್ತದೆ. ಅದನ್ನು ವೀಕ್ಷಿಸಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಾ.ರಾ ಗೋವಿಂದು ತಿಳಿಸಿದ್ದಾರೆ.

ನಿನ್ನೆ (ನವೆಂಬರ್ 12) ಪುನೀತ್ ನಮನ ಕಾರ್ಯಕ್ರಮದ ರೂಪುರೇಷೆಯನ್ನು ಸಾ.ರಾ ಗೋವಿಂದು ತಿಳಿಸಿದ್ದರು. ವೇದಿಕೆ ಮೇಲೆ ಯಾವುದೇ ಮನರಂಜನೆ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ. ನಾಗೇಂದ್ರ ಪ್ರಸಾದ್ ಅವರ ವಿಶೇಷ ಗೀತೆ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ಪುನೀತ್ ನಡೆದು ಬಂದ ದಾರಿ ಬಗ್ಗೆ ಒಂದು ವಿಡಿಯೋ ಪ್ರಸಾರ ಮಾಡಲಾಗುತ್ತದೆ. ‘ಪುನೀತ್ ನಮನ’ ಕಾರ್ಯಕ್ರಮದ ದಿನ ಕರ್ನಾಟಕದಲ್ಲಿ ಚಿತ್ರೋದ್ಯಮ‌ ಬಂದ್ ಮಾಡಲಾಗುತ್ತದೆ. ಮಧ್ಯಾಹ್ನ 3 ಘಂಟೆ ನಂತರ ಕಾರ್ಯಕ್ರಮ ಆರಂಭ ಆಗಲಿದ್ದು, ಮೈಸೂರು ರಾಜ ಮನೆತನದ ಯದುವೀರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್ ಅವರಿಂದ ಪುನೀತ್ ರಾಜ್​ಕುಮಾರ್​ ಹಾಡುಗಳನ್ನ ಹಾಡಿಸಲಾಗುತ್ತದೆ’ ಎಂದು ಸಾರಾ ಗೋವಿಂದ್​ ಮಾಹಿತಿ ನೀಡಿದ್ದರು.

ಇದನ್ನೂ ಓದಿ:

Puneeth Rajkumar: ಪುನೀತ್- ಪ್ರೇಮ್ ಕಾಂಬಿನೇಷನ್​ನಲ್ಲಿ ಐತಿಹಾಸಿಕ ಚಿತ್ರ ಮೂಡಿಬರಬೇಕಿತ್ತು, ಆದರೆ..

Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​

TV9 Kannada


Leave a Reply

Your email address will not be published. Required fields are marked *