ಇಸ್ಲಾಮಾಬಾದ್: ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಮಹಿಳಾ ಪರ ನಾಯಕಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಪುರುಷರೇನು ರೋಬೋಟ್ ಗಳಲ್ಲ, ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಮಹಿಳೆಯರು ತೊಡುವ ಉಡುಗೆಗಳೇ ಕಾರಣ ಎಂದು ಇಮ್ರಾನ್ ಖಾನ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಮಹಿಳೆಯರು ಮೈಮೇಲೆ ಕಡಿಮೆ ಬಟ್ಟೆ ಧರಿಸಿದರೆ ಅದು ಪುರುಷನ ಮೇಲೆ ಪ್ರಭಾವ ಬೀರುತ್ತದೆ. ಯಾಕೆಂದರೆ ಪುರುಷರೇನೂ ರೋಬೋಟ್ ಗಳಲ್ಲ. ಮಹಿಳೆಯರು ತುಂಡು ಬಟ್ಟೆ ತೊಟ್ಟರೆ ಪುರುಷರಿಗೆ ಸಹಜವಾಗಿಯೇ ಪ್ರಚೋದನೆ ಆಗುತ್ತದೆ. ಇದು ಕಾಮನ್ ಸೆನ್ಸ್. ಪ್ರಚೋದನೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್‍ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮೇಲೆ ದಾಳಿ- ಇಮ್ರಾನ್ ಖಾನ್‍ಗೆ ವಿಶ್ವಸಂಸ್ಥೆ ಎಚ್ಚರಿಕೆ

ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇಮ್ರಾನ್ ಖಾನ್ ಹೇಳಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್ ಟ್ವೀಟ್ ಮಾಡಿ ಇಮ್ರಾನ್ ಖಾನ್‍ಗೆ ಅನಾರೋಗ್ಯವಿದೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.

ಪಾಕಿಸ್ತಾನ ಪ್ರಧಾನಮಂತ್ರಿ ಕಚೇರಿಯ ಡಿಜಿಟಲ್ ಮೀಡಿಯಾ ವಿಭಾಗದ ಡಾ. ಅರ್ಸಲ್ ಖಲೀದ್ ಪ್ರತಿಕ್ರಿಯಿಸಿ, ಸಂದರ್ಶನದ ಆಯ್ದ ವಿಡಿಯೋವನ್ನು ಮಾತ್ರ ವೈರಲ್ ಮಾಡಿ ಟೀಕಿಸಲಾಗುತ್ತಿದೆ ಎಂದು ಹೇಳಿ ಇಮ್ರಾನ್ ವಿರುದ್ಧ ಕೇಳಿ ಬಂದ ಆರೋಪವನ್ನು ತಿರಸ್ಕರಿಸಿದ್ದಾರೆ.

The post ಪುರುಷರು ರೋಬೋಟ್‍ಗಳಲ್ಲ, ಮಹಿಳೆಯರು ತುಂಡುಡುಗೆ ಧರಿಸುವುದರಿಂದಲೇ ರೇಪ್ – ಇಮ್ರಾನ್ ಖಾನ್ appeared first on Public TV.

Source: publictv.in

Source link