ನವದೆಹಲಿ: ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರನ್ನ ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪುಲ್ವಾಮಾದ ಟ್ರಾಲ್​​ನಲ್ಲಿರುವ ಮುಖ್ಯ ಬಸ್​ ನಿಲ್ದಾಣದ ಬಳಿ ಗ್ರೆನೇಡ್ ಎಸೆದು ಉಗ್ರರು ಎಸ್ಕೇಪ್ ಆಗಿದ್ದಾರೆ. ಪರಿಣಾಮ 6 ರಿಂದ 7 ಮಂದಿ ನಾಗರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗ್ರೆನೇಡ್​ ದಾಳಿ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದೆ.

ಇನ್ನು ಗಾಯಗೊಂಡವ್ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಉಗ್ರರ ಶೋಧಕ್ಕಾಗಿ ಸೇನೆ ಕಾರ್ಯಾಚರಣೆಯನ್ನ ಶುರುಮಾಡಿದೆ ಅಂತಾ ವರದಿಗಳು ತಿಳಿಸಿವೆ.

The post ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್ ಅಟ್ಯಾಕ್.. 7 ನಾಗರಿಕರಿಗೆ ಗಾಯ appeared first on News First Kannada.

Source: newsfirstlive.com

Source link