ಪುಲ್ವಾಮಾದಲ್ಲಿ 5 ಲಷ್ಕರ್ ಉಗ್ರರು ಉಡೀಸ್.. ಓರ್ವ ಯೋಧ ಹುತಾತ್ಮ

ಪುಲ್ವಾಮಾದಲ್ಲಿ 5 ಲಷ್ಕರ್ ಉಗ್ರರು ಉಡೀಸ್.. ಓರ್ವ ಯೋಧ ಹುತಾತ್ಮ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಭಾರತೀಯ ಸೇನೆ ನಡೆಸಿದ ಎನ್​​ಕೌಂಟರ್​​ನಲ್ಲಿ ಐವರು ಲಷ್ಕರ್ ಉಗ್ರರನ್ನ ಹೊಡೆದುರುಳಿಸಿದೆ. ಈ ವಿಚಾರವನ್ನು ಖುದ್ದು ಕಾಶ್ಮೀರದ ಐಜಿಪಿ ವಿಜಯ್​​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಪುಲ್ವಾಮ ಜಿಲ್ಲೆಯ ಹಂಜಿನ್ ರಾಜ್ ಪೊರಾ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ವಿಜಯ್​​ ಕುಮಾರ್​​ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ, ಲಷ್ಕರ್ ಉಗ್ರರ ಮೇಲೆ ದಾಳಿ ಮಾಡಿತು. ಪೊಲೀಸರು ಮತ್ತು ಭಾರತೀಯ ಸೇನೆ ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಎಲ್​​ಇಟಿ ಉಗ್ರರು ಹತರಾಗಿದ್ದಾರೆ. ಇನ್ನೂ ಎನ್​​ಕೌಂಟರ್ ಮುಂದುವರಿದಿದೆ ಎಂದರು.

ಇನ್ನು ಎನ್​​ಕೌಂಟರ್​​ ಆಗಿರುವ ಐವರು ಉಗ್ರರಲ್ಲಿ ಓರ್ವ ಪಾಕಿಸ್ತಾನದವ ಎಂದು ತಿಳಿದುಬಂದಿದೆ.

The post ಪುಲ್ವಾಮಾದಲ್ಲಿ 5 ಲಷ್ಕರ್ ಉಗ್ರರು ಉಡೀಸ್.. ಓರ್ವ ಯೋಧ ಹುತಾತ್ಮ appeared first on News First Kannada.

Source: newsfirstlive.com

Source link