”ಪುಷ್ಪ” ಐಟಂ ಸಾಂಗ್​​ನಲ್ಲಿ ಸೊಂಟ ಬಳುಕಿಸೋಕೆ ಸಮಂತಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?


”ಪುಷ್ಪ” ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ಕನ್ನಡದ ಕುವರಿ ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಗೊತ್ತೇ ಇದೆ. ಸುಕುಮಾರ್​ ನಿರ್ದೇಶನ, ದೇವಿಶ್ರೀ ಪ್ರಸಾದ್​ ಮ್ಯೂಸಿಕ್​ ಹೀಗೆ ತೆರೆಮೇಲೆ ಹಾಗೂ ತೆರೆಹಿಂದಿನ ದೊಡ್ಡ ಸ್ಟಾರ್​ಗಳ ದಂಡೇ ಇದೆ ”ಪುಷ್ಪ” ಸಿನಿಮಾದಲ್ಲಿ. ಇದರ ಜೊತೆಗೆ ”ಪುಷ್ಫ” ಸಿನಿಮಾದ ಐಟಂ ಹಾಡೊಂದರಲ್ಲಿ ಟಾಲಿವುಡ್​ ಲೇಡಿ ಸ್ಟಾರ್​ ಸಮಂತ ಸೊಂಟ ಬಳುಕಿಸೋಕೆ ಸಿದ್ಧವಾಗಿರೋದು ಗೊತ್ತೇ ಇದೆ.

ಗೊತ್ತಿಲ್ಲದ ಮತ್ತು ಅಚ್ಚರಿಯ ವಿಚಾರ ಏನಂದ್ರೆ, ಸಮಂತ ”ಪುಷ್ಫ” ಸಿನಿಮಾದ ಐಟಂ ಸಾಂಗ್​ ಒಂದರಲ್ಲಿ ಸೊಂಟ ಬಳುಕಿಸೋಕೆ ಸಿದ್ದವಾಗಿರುವ ಹಾಡಿಗೆ ತೆಗೆದುಕೊಂಡಿರುವ ಸಂಭಾವನೆ ಬಗ್ಗೆ. ಹೌದು ”ಪುಷ್ಪ” ಸಿನಿಮಾದ ಐಟಂ ಸಾಂಗ್​ಗೆ ಸಮಂತಾ ಬರೋಬ್ಬರಿ ಒಂದೂವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಡೈವೋರ್ಸ್​ ಗೊಂದಲದಿಂದ ಹೊರ ಬಂದಿರುವ ಸಮಂತಾಗೆ ”ಪುಷ್ಪ” ಸಿನಿಮಾ ಒಂದು ಬಿಗ್​ ಆಫರ್​ ನೀಡಿದೆ. ಈ ಹಿಂದೆ ಸುಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದಿದ್ದ ”ರಂಗಸ್ಥಳಂ” ಸಿನಿಮಾದಲ್ಲಿ ಸಮಂತ ನಾಯಕಿಯಾಗಿದ್ದು, ಆ ಸಿನಿಮಾದ ಐ ಟಂ ಸಾಂಗ್​ನಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ಈಗ ಅದೇ ಪದ್ದತಿಯನ್ನು ನಿರ್ದೇಶಕ ಸುಕುಮಾರ್​ ಮುಂದುವರೆಸಿದ್ದು, ಸಮಂತ ”ಪುಷ್ಪ” ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪುಷ್ಫ ಸಿನಿಮಾ ಡಿಸೆಂಬರ್​ ತಿಂಗಳ 17 ನೇ ತಾರೀಖು ವಿಶ್ವಾದ್ಯಂತ ತೆರೆಗಪ್ಪಳಿಸಲು ಸಿಧ್ಧವಾಗಿದೆ.

ಇದನ್ನೂ ಓದಿ: ಪ್ಯಾನ್​ ಇಂಡಿಯಾ ‘ಪುಷ್ಪ’ದಲ್ಲಿ ಐಟಂ ಸಾಂಗ್​ಗೆ ಸೊಂಟ ಬಳುಕಿಸ್ತಾರಾ ಸಮಂತಾ?

News First Live Kannada


Leave a Reply

Your email address will not be published. Required fields are marked *