‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್​? ರಶ್ಮಿಕಾ, ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಹೊಸ ಗುಸುಗುಸು | Gossip: Samantha likely to do an item dance in Allu Arjun Rashmika Mandanna starrer Pushpa movie


‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್​? ರಶ್ಮಿಕಾ, ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಹೊಸ ಗುಸುಗುಸು

ಸಮಂತಾ, ರಶ್ಮಿಕಾ ಮಂದಣ್ಣ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪುಷ್ಪ’ (Pushpa Movie) ಕೂಡ ಮುಂಚೂಣಿಯಲ್ಲಿದೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್​ (Allu Arjun) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಡಿ.17ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಪುಷ್ಪ’ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬುದು ಕೂಡ ಗೊತ್ತಾಗಿದೆ. ಆದರೆ ಒಂದು ವಿಚಾರವನ್ನು ಮಾತ್ರ ಚಿತ್ರತಂಡ ಗುಟ್ಟಾಗಿಯೇ ಉಳಿಸಿದೆ. ‘ಪುಷ್ಪ’ ಚಿತ್ರದಲ್ಲಿ ಒಂದು ಐಟಂ ಸಾಂಗ್​ ಇರಲಿದೆ. ಆ ಹಾಡಿನಲ್ಲಿ ಯಾವ ನಟಿ ಡ್ಯಾನ್ಸ್​ ಮಾಡುತ್ತಾರೆ ಎಂಬುದು ಎಲ್ಲಿಯೂ ಬಹಿರಂಗ ಆಗಿಲ್ಲ. ಟಾಲಿವುಡ್​ ಅಂಗಳದಿಂದ ಹೊಸ ಗಾಸಿಪ್​ ಹಬ್ಬಿದ್ದು, ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಸಮಂತಾ (Samantha) ಹೆಜ್ಜೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.

ನಾಗ ಚೈನತ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಸಮಂತಾ ಆಯ್ಕೆಗಳು ಬದಲಾಗಿವೆ. ಸಿನಿಮಾ ವಿಚಾರದಲ್ಲಿ ಅವರು ಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂಬ ಗಾಸಿಪ್​ ಕೇಳಿಬಂದಿದೆ. ಈ ಬಗ್ಗೆ ನಿರ್ದೇಶಕ ಸುಕುಮಾರ್​ ಅವರಾಗಲಿ, ಸಮಂತಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಕುಮಾರ್ ಮತ್ತು ಸಮಂತಾ ನಡುವೆ ಉತ್ತಮ ಒಡನಾಟ ಇದೆ. ಈ ಹಿಂದೆ ಸುಕುಮಾರ್​ ನಿರ್ದೇಶನ ಮಾಡಿದ್ದ ‘ರಂಗಸ್ಥಲಂ’ ಸಿನಿಮಾದಲ್ಲಿ ಸಮಂತಾ ಹೀರೋಯಿನ್​ ಆಗಿದ್ದರು. ಈಗ ‘ಪುಷ್ಪ’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡುವಂತೆ ಸುಕುಮಾರ್​ ಕೇಳಿಕೊಂಡರೆ ಸಮಂತಾ ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂಬುದು ಗಾಸಿಪ್​ ಮಂದಿಯ ವಾದ.

ಈ ಮೊದಲು ಇದೇ ಹಾಡಿಗಾಗಿ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಮತ್ತು ತೆಲುಗು ಬೆಡಗಿ ಪೂಜಾ ಹೆಗ್ಡೆ ಅವರಿಗೆ ಆಫರ್​ ನೀಡಲಾಗಿತ್ತು ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಯಾವುದರ ಬಗ್ಗೆಯೂ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಒಂದು ಮೂಲದ ಪ್ರಕಾರ ಬಾಲಿವುಡ್ ನಟಿ​ಯೊಬ್ಬರು ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಅಂತೆ-ಕಂತೆಗಳಿಗೆ ‘ಪುಷ್ಪ’ ಚಿತ್ರತಂಡದವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಸಿನಿಮಾ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್​ ಮಾತ್ರ ಬಿಡುಗಡೆ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಮತ್ತು ಟೀಸರ್​ಗಳು ಭಾರಿ ಹೈಪ್ ಸೃಷ್ಟಿ ಮಾಡಿವೆ.

ಇದನ್ನೂ ಓದಿ:

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

TV9 Kannada


Leave a Reply

Your email address will not be published.