ಪುಷ್ಪ ರಗಡ್​ ಲುಕ್​​ನಲ್ಲಿ ರವೀಂದ್ರ ಜಡೇಜಾ ಫುಲ್​ ಮಿಂಚಿಂಗ್


ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ ದಿ ರೈಸ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ‘ಪುಷ್ಪ-1’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಹ ಚಿತ್ರ ಬಾಕ್ಸಾಫೀಸ್​ನಲ್ಲಿ ಕಮಾಲ್​ ಮಾಡಿ ಸುಮಾರು 250 ರಿಂದ 300 ಕೋಟಿ ರೂಪಾಯಿ ವರೆಗೂ ಕಲೆಕ್ಷನ್​ ಮಾಡಿದೆ. ‘ಪುಷ್ಪ -1’ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆದ ಮೇಲೂ ಕೂಡ ಈ ಚಿತ್ರದ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಸಾಧಾರಣ ಪ್ರೇಕ್ಷಕರಿಂದು ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಪುಷ್ಪ -1’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅದರಂತೇ ಟೀಂ ಇಂಡಿಯಾ ಕ್ರಿಕೆಟ್​ ತಂಡದ ಆಟಗಾರ ರವೀಂದ್ರ ಜಡೇಜಾ ಅವರು ಕೂಡ ‘ಪುಷ್ಪ’ ಸಿನಿಮಾವನ್ನು ಮೆಚ್ಚಿಕೊಂಡು ಕಳೆದ ಕೆಲ ದಿನಗಳ ಹಿಂದೆ ಪುಷ್ಪ ಚಿತ್ರದ ಚನಪ್ರಿಯ ಡೈಲಾಗ್​ ಆದ ಪುಷ್ಪ… ಪುಷ್ಪರಾಜ್…, ನೀ ಯವ್ವ ತಗ್ಗೆದೇ ಲೇ..ಎಂಬ ಡೈಲಾಗ್​ನ್ನ ರೀಲ್ಸ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದರು. ಇನ್ನು ಅಲ್ಲು ಅರ್ಜುನ್​ ಅವರು ಕೂಡ ಜಡೇಜಾ ಮಾಡಿದ ರೀಲ್ಸ್​ಗೆ ಕಮೆಂಟ್​ ಮಾಡಿದ್ದರು. ಜಡೇಜಾ ಅವರ ಈ ರೀಲ್ಸ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿತ್ತು.

ಇನ್ನು ಈ ಬಾರಿ ರವೀಂದ್ರ ಜಡೇಜಾ, ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡ ರಗಡ್​ ಲುಕ್​ನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಯಾವ ರೀತಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದರೋ ಅದೇ ರೀತಿ ರೆಡಿಯಾಗಿ ಜಡೇಜಾ ಫೋಟೋ ಕ್ಲಕಿಸಿಕೊಂಡು ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ಚಿತ್ರದ ಮತ್ತೊಂದು ಫೇಮಸ್​ ಡೈಲಾಗ್​ ” ಪುಷ್ಪ ಅಂಟೆ ಫ್ಲವರ್​ ಅನುಕುಂಟಾವಾ .. ಪುಷ್ಪ ಅಂಟೆ ಫೈರೂ ‘ ಅಂತ ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *