‘ಪುಷ್ಪ’ ಶ್ರೀವಲ್ಲಿ ಹಾಡಿಗೆ ‘ಬ್ಯಾಟಿಂಗ್​​ ಸ್ಟೆಪ್ಸ್​​’ ಹಾಕಿದ ಸುರೇಶ್​ ರೈನಾ


ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಸುರೇಶ್ ರೈನಾ ಅವರು ‘ಪುಷ್ಪ-1’ ಚಿತ್ರದ ಶ್ರೀವಲಿ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಟಾಲಿವುಡ್​ ಐಕಾನಿಕ್​ ಸ್ಟಾರ್​ ಅಲ್ಲು ಅರ್ಜುನ್​ ಆಭಿನಯದ ‘ಪುಷ್ಪ -1’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಚಿತ್ರಪ್ರೇಮಿಗಳಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಸೇರಿದಂತೆ ಕ್ರಿಕೆಟ್​ ಆಟಗಾರರು ಕೂಡ ಅಲ್ಲು ಅರ್ಜುನ್​ ಅಭಿನಯಕ್ಕೆ ಫಿದಾ ಆಗಿ ‘ಪುಷ್ಪ-1’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ಕ್ರಿಕೆಟ್​ ಆಟಗಾರ ಡೇವಿಡ್ ವಾರ್ನರ್ ಅವರು ‘ಪುಷ್ಪ-1’ ಚಿತ್ರದ ‘ಶ್ರೀವಲ್ಲಿ’ ಕನ್ನಡ ವರ್ಷನ್​ ಹಾಡಿಗೆ ಅಲ್ಲು ಅರ್ಜುನ್​ ಅವರನ್ನು ಅನುಕರಿಸಿ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್​ಗೆ ಹೆಜ್ಜೆ ಹಾಕಿದ್ದರು. ಇದೀಗ ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಸುರೇಶ್ ರೈನಾ ಹಾಗೂ ಅವರ ಮನೆಯವರು ಅಲ್ಲು ಅರ್ಜುನ್​ ಅವರನ್ನು ಅನುಕರಿಸಿ ಅವರಂತೇ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನು ಈ ವಿಡಿಯೋವನ್ನು ಸುರೇಶ್ ರೈನಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ” ಈ ಹಾಡಿಗೆ ಹೆಜ್ಜೆ ಹಾಕದೇ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಈಗ ನಾನು ಈ ಹಾಡಿಗೆ ಹೆಜ್ಜೆ ಹಾಕಲು ಪ್ರಯತ್ನಿಸಿದ್ದೇನೆ. ಎಂತಹ ಅದ್ಭುತವಾದ ಪರ್ಫಾರ್ಮೆನ್ಸ್ ಬ್ರದರ್. ನಿಮಗೆ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲ್ಲಿ ಅಂತ ಬಯಸುತ್ತೇನೆ!” ಎಂದು ಬರೆದು ಸುರೇಶ್​ ರೈನಾ ಅಲ್ಲು ಅರ್ಜುನ್​ ಅವರನ್ನು ಟ್ಯಾಗ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

News First Live Kannada


Leave a Reply

Your email address will not be published. Required fields are marked *