ಪುಷ್ಪ-1 ಸಕ್ಸಸ್​​ ಬಳಿಕ ಸಂಭಾವನೆ ಹೆಚ್ಚಿಸಿಕೊಂಡ ಅಲ್ಲು ಅರ್ಜುನ್​​.. ಒಂದು ಸಿನಿಮಾಗೆ ಎಷ್ಟು..?


ಟಾಲಿವುಡ್ ಐಕಾನಿಕ್​ ಸ್ಟಾರ್ ಅಲ್ಲು ಅರ್ಜುನ್​ ಅವರು ‘ಪುಷ್ಪ-1’ ಸಿನಿಮಾ ನಂತರ ಈಗ ಪ್ಯಾನ್​ ಇಂಡಿಯಾ​ ಸ್ಟಾರ್​ ಆಗಿ ಬೆಳೆದು ನಿಂತಿದ್ದಾರೆ. ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ-1’ ಚಿತ್ರ ಬ್ಲಾಕ್​ಬಸ್ಟರ್​ ಹಿಟ್​ ಆಗಿದ್ದು, ವಲ್ಡ್​ ವೈಡ್​ ಬಾಕ್ಸಾಫೀಸ್​ನಲ್ಲಿ ಬರೋಬ್ಬರಿ 350ಕ್ಕೂ ಹೆಚ್ಚು ಕೋಟಿ ರೂಪಾಯಿ ಬಾಚಿಕೊಂಡಿದೆ. ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಸಿನಿ ಕರಿಯರ್​ಗೆ ಈ ಚಿತ್ರ ದೊಡ್ಡಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, ಇವರ ಫ್ಯಾನ್​ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ.

‘ಪುಷ್ಪ-1’ ಬಿಗ್​ ಸಕ್ಸಸ್​ ನಂತರ ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನು ಭಾರಿ ಮೊತ್ತಕ್ಕೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಟಾಲಿವುಡ್​ ಅಂಗಳದಲ್ಲಿ ಕೇಳಿಬಂದಿದೆ. ಪುಷ್ಪ ಸಿನಿಮಾಗೂ ಮುನ್ನ ರಿಲೀಸ್​ ಆದ ‘ಅಲ ವೈಕುಂಠಪುರಮುಲೋ’ ಸಿನಿಮಾದಲ್ಲಿ ನಟಿಸಲು ಅಲ್ಲು ಅರ್ಜುನ್​ 20 ರಿಂದ 25 ಕೋಟಿ ಸಂಭಾವನೆಯನ್ನು ಪಡೆದಿದ್ದರಂತೆ.

‘ಅಲ ವೈಕುಂಠಪುರಮುಲೋ’ ಸಿನಿಮಾದ ಸಕ್ಸಸ್ ನಂತರ ಪುಷ್ಪ ಸಿನಿಮಾದಲ್ಲಿ ಅಭಿನಯಿಸಲು ಅಲ್ಲು ಅರ್ಜುನ್ 32 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದರು. ಸದ್ಯ ಪುಷ್ಪ ಚಿತ್ರ ಕೂಡ ಸೂಪರ್​ ಹಿಟ್​ ಆಗಿದ್ದು, ಅಲ್ಲು ಅರ್ಜುನ್​ ತಮ್ಮ ಸಂಭಾವನೆ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *