‘ಪುಷ್ಪ 2’ ಚಿತ್ರಕ್ಕೆ ಆರಂಭದಲ್ಲೇ ವಿಘ್ನ; ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ? | Pushpa 2 Shooting may delayed due to Producer strike


ಸದ್ಯ ಟಾಲಿವುಡ್​ನಲ್ಲಿ ನಿರ್ಮಾಪಕರ ಸಂಘದವರು ಮುಷ್ಕರ ಆರಂಭಿಸಿದ್ದಾರೆ. ಕೆಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಸಿನಿಮಾ ರಿಲೀಸ್ ದಿನಾಂಕ ಕೂಡ ಮುಂದಕ್ಕೆ ತಳ್ಳಲ್ಪಡಲಿದೆ.

‘ಪುಷ್ಪ 2’ ಚಿತ್ರಕ್ಕೆ ಆರಂಭದಲ್ಲೇ ವಿಘ್ನ; ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ?

ಅಲ್ಲು ಅರ್ಜುನ್

‘ಪುಷ್ಪ’ ಚಿತ್ರ (Pushpa Movie) ತೆರೆಗೆ ಬಂದು 8 ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಆದರೆ, ಈ ವರೆಗೆ ಎರಡನೇ ಪಾರ್ಟ್​ಗೆ ಶೂಟಿಂಗ್ ಆರಂಭ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ ತಿಂಗಳಲ್ಲೇ ಈ ಸಿನಿಮಾದ ಶೂಟಿಂಗ್ ಆರಂಭಗೊಂಡಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಆರಂಭ ಆಗೋದು ವಿಳಂಬ ಆಯಿತು. ಈಗ ‘ಪುಷ್ಪ 2’ ಚಿತ್ರಕ್ಕೆ ಆರಂಭದಲ್ಲೇ ಕಂಟಕ ಎದುರಾಗಿದೆ. ಸಿನಿಮಾದ ಶೂಟಿಂಗ್ ಮತ್ತಷ್ಟು ವಿಳಂಬ ಆಗುವ ಸೂಚನೆ ಸಿಕ್ಕಿದೆ.

ಸದ್ಯ ಟಾಲಿವುಡ್​ನಲ್ಲಿ ನಿರ್ಮಾಪಕರ ಸಂಘದವರು ಮುಷ್ಕರ ಆರಂಭಿಸಿದ್ದಾರೆ. ಕೆಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೆ ಶೂಟಿಂಗ್ ನಡೆಸಬಾರದು ಎಂಬ ಆದೇಶ ಹೊರಡಿಸಲಾಗಿದೆ. ಈ ಕಾರಣಕ್ಕೆ ‘ಪುಷ್ಪ 2’ ಚಿತ್ರದ ಕೆಲಸ ವಿಳಂಬ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಸಿನಿಮಾ ರಿಲೀಸ್ ದಿನಾಂಕ ಕೂಡ ಮುಂದಕ್ಕೆ ತಳ್ಳಲ್ಪಡಲಿದೆ.

‘ಪುಷ್ಪ 2’ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಆಗಸ್ಟ್ ಅಂತ್ಯಕ್ಕೆ ಈ ಮುಷ್ಕರ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಸೆಪ್ಟೆಂಬರ್​ನಿಂದ ಚಿತ್ರದ ಶೂಟಿಂಗ್ ಆರಂಭಗೊಳ್ಳಬಹುದು ಎನ್ನಲಾಗುತ್ತಿದೆ. 2023ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇತ್ತು. ಆದರೆ, ಇದು ಸಾಧ್ಯವಾಗೋದು ಅನುಮಾನ ಎಂದೇ ಹೇಳಲಾಗುತ್ತಿದೆ.

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ, ಫಹಾದ್​ ಫಾಸಿಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುಕುಮಾರ್​​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಕಲೆಕ್ಷನ್​ಅನ್ನು ಮೀರಿ ‘ಪುಷ್ಪ 2’ ಚಿತ್ರ ಗಳಿಕೆ ಮಾಡಲಿದೆ ಎನ್ನಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *