ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್​​​ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಹೆಸರು ಪ್ರಸ್ತಾಪಿಸದೆ, ರನ್​​​ ಗಳಿಸಲು ಯತ್ನಿಸದ ಆಟಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ವಿರಾಟ್ ಕೊಹ್ಲಿ, ರನ್ ಗಳಿಸುವುದು ಹೇಗೆ ಎಂಬುವುದನ್ನ ಅರ್ಥಮಾಡಿಕೊಳ್ಳಲು ಉತ್ತಮ ಯೋಜನೆನ್ನ ರೂಪಿಸಬೇಕಾಗಿದೆ. ನಾವು ಆಟದ ವೇಗದೊಂದಿಗೆ ಸಿಂಕ್ ಆಗಿರಬೇಕು. ಬೌಲರ್‌ಗಳನ್ನ ಒತ್ತಡಕ್ಕೆ ಸಿಲುಕಿಸುವಲ್ಲಿ ನಾವು ಧೈರ್ಯಶಾಲಿಯಾಗಿರಬೇಕು. ಹಾಗಾಗಿ ನಮ್ಮ ತಂಡವನ್ನ ಬಲಪಡಿಸಲು ಅಗತ್ಯದ ಕುರಿತು ಚರ್ಚಿಸುತ್ತೇವೆ. ಈ ಹಿಂದೆ ಅನುಸರಿಸಿದ ಕೆಲ ಮಾದರಿಗಳನ್ನು ಅನುಸರಿಸುವುದಿಲ್ಲ. ಇದಕ್ಕಾಗಿ ವರ್ಷಗಟ್ಟಲೆ ಕಾಯುವುದಿಲ್ಲ. ನಮ್ಮ ವೈಟ್ ಬಾಲ್ ತಂಡದ ಹುಡುಗರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ಬದಲಾವಣೆಗಳು ಬೇಕಿವೆ ಎಂದು ಪರೋಕ್ಷ ರನ್​​ ಗಳಿಕೆಗೆ ಪರದಾಡಿದ ಪೂಜಾರ ವಿರುದ್ಧ, ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

The post ಪೂಜಾರ ವಿರುದ್ಧ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಸಮಾಧಾನ ಯಾಕೆ..? appeared first on News First Kannada.

Source: newsfirstlive.com

Source link