ಪೂಜಾರ ಶತಕ ಸಿಡಿಸಿ 2 ವರ್ಷ.. ಡೇಂಜರ್ ಝೋನ್​ನಲ್ಲಿ ಟೆಸ್ಟ್​ ಸ್ಪೆಷಲಿಸ್ಟ್ ಕೆರಿಯರ್

ಪೂಜಾರ ಶತಕ ಸಿಡಿಸಿ 2 ವರ್ಷ.. ಡೇಂಜರ್ ಝೋನ್​ನಲ್ಲಿ ಟೆಸ್ಟ್​ ಸ್ಪೆಷಲಿಸ್ಟ್ ಕೆರಿಯರ್

ಆತ ಟೀಮ್ ಇಂಡಿಯಾ ಟೆಸ್ಟ್​ ತಂಡದ ಆಪತ್ಬಾಂಧವ.. ತಾಳ್ಮೆ ಅನ್ನೋದು ಆತನ ಶಕ್ತಿ. ಆತ ಕ್ರೀಸ್​ನಲ್ಲಿ ನೆಲೆಯೂರಿದ್ರೆ, ಎದುರಾಳಿಯ ಬೆಂಕಿ, ಬಿರುಗಾಳಿ ವೇಗಿಗಳು ಸಹ ತಣ್ಣಗಾಗಿ ಬಿಡ್ತಾರೆ. ರಾಹುಲ್ ದ್ರಾವಿಡ್ ಬಳಿಕ ಟೀಮ್ ಇಂಡಿಯಾದ ತಡೆಗೋಡೆಯಾಗಿದ್ದ ಆ ಆಪತ್ಬಾಂಧವನೇ, ಇದೀಗ ಅಪ್ಪತ್ತಿಗೆ ಸಿಲುಕಿದ್ದಾನೆ.. ಅದ್ಯಾಕೆ ಅಂತೀರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಚೇತೇಶ್ವರ ಪೂಜಾರ, ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್​ಮ್ಯಾನ್​. ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದಾಗ ತಡೆಗೋಡೆಯಂತೆ ನಿಲ್ಲೋದು ಪೂಜಾರ ಸ್ಪೆಷಾಲಿಟಿ. ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡದೇ ಎದುರಾಳಿಗಳಿಗೆ ನಡುಕ ಹುಟ್ಟಿಸುವ ಕಲೆ ಪೂಜಾರಾಗೆ ಮಾತ್ರ ಗೊತ್ತು. ಒಮ್ಮೆ ಕ್ರೀಸ್​​ನಲ್ಲಿ ನೆಲೆಯೂರಿದರೆ ದಿನಗಟ್ಟಲೇ ಬ್ಯಾಟಿಂಗ್ ಮಾಡುವ ಗತ್ತು, ತಾಕತ್ತು ಪೂಜಾರಾಗಿದೆ. ಹೀಗಾಗಿಯೇ ಟಾಪ್ ಆರ್ಡರ್ ಬ್ಯಾಟ್ಸ್​ಮ್ಯಾನ್​​ಗಳು​ ಬೇಗ ವಿಕೆಟ್ ಕೈಚೆಲ್ಲಿದರೂ, ಟೀಮ್ ಇಂಡಿಯಾ ಮಿಡಲ್ ಆರ್ಡರ್​ಗೆ ನೋ ಟೆನ್ಶನ್. ಯಾಕಂದ್ರೆ ಪೂಜಾರ ಇರುವಾಗ ನಮಗ್ಯಾಕೆ ಭಯ ಎಂಬ ನಂಬಿಕೆ. ಇಷ್ಟು ನಂಬಿಕೆ ಗಿಟ್ಟಿಸಿಕೊಂಡಿದ್ದ ಟೆಸ್ಟ್​ ಸ್ಪೆಷ್ಟಲಿಸ್ಟ್​ ಬ್ಯಾಟ್ಸ್​ಮ್ಯಾನ್​​ ಪೂಜಾರಾ ಈಗ ಆಪತ್ತಿಗೆ ಸಿಲುಕಿದ್ದಾರೆ.

ಇಂಥಹದ್ದೊಂದು ಚರ್ಚೆಗೆ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯದಲ್ಲಿನ ಮೊದಲ ಇನ್ನಿಂಗ್ಸ್. ಬರೋಬ್ಬರಿ 36 ಎಸೆತಗಳಿಗೆ ಖಾತೆ ತೆರೆದ ಪೂಜಾರ ಒಟ್ಟು 54 ಎಸೆತಗಳನ್ನ ಎದುರಿಸಿ ಕೇವಲ 8 ರನ್ ಮಾತ್ರ​ ಗಳಿಸಿದ್ದರು. 54 ಎಸೆತದಲ್ಲಿ ಒಂದೇ ಒಂದು ಸಿಂಗಲ್​ ರನ್​ ಕೂಡ ಬರಲಿಲ್ಲ. ಅಟ್​ಲಿಸ್ಟ್ ಸ್ಟ್ರೈಕ್​ರೊಟೇಟ್ ಮಾಡೋಕೂ ಪೂಜಾರರಿಂದ ಸಾಧ್ಯವಾಗಿರಲಿಲ್ಲ. ಇದೇ ಈಗ ಟೀಮ್ ಇಂಡಿಯಾಕ್ಕೂ ಹಾಗೂ ಪೂಜಾರರನ್ನೂ ಆಪತ್ತಿಗೆ ದೂಡುತ್ತಿದೆ.

ಪೂಜಾರಾಗೆ ಮುಳುವಾಗುತ್ತಾ ಅತಿ ರಕ್ಷಣಾತ್ಮಕ ಆಟ..?
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ ಅತಿ ರಕ್ಷಣಾತ್ಮಕ ಆಟದ ಬಳಿಕ ಹುಟ್ಟಿಕೊಂಡ ಚರ್ಚೆಯೇ ಟೆಸ್ಟ್​ ಸ್ಪೆಷಲಿಸ್ಟ್​ ಕರಿಯರ್​ ಅಂತ್ಯಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ ಅನ್ನೋದು. ಇದಕ್ಕೆ ಕಾರಣ ಜಸ್ಟ್ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಮಾತ್ರವೇ ಆಗಿಲ್ಲ. ಕಳೆದೊಂದು ವರ್ಷದಿಂದ ಪೂಜಾರ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ಬರೋಬ್ಬರಿ 196 ಎಸೆತಗಳಿಗೆ ಅರ್ಧಶತಕ ಗಳಿಸಿದ್ದು. ಅದ್ರಲ್ಲೂ ರನ್​ ಗಳಿಕೆಗೆ ವೇಗ ನೀಡುವ ಸಂದರ್ಭದಲ್ಲೂ ರನ್​​ಗಳಿಕೆಯ ಗೋಜಿಗೆ ಹೋಗದ ಪೂಜಾರ, ನಿರಂತರ ಫ್ಲಾಪ್ ಆಗುತ್ತಿರುವುದು, ಟಾಪ್ ಆರ್ಡರ್​​ನ ಶಕ್ತಿ ಕುಂದಿಸಿದೆ.

ಪೂಜಾರ ಶತಕ ಸಿಡಿಸಿ ಆಯ್ತು 2 ವರ್ಷ 5 ತಿಂಗಳು..!
2018-19ರ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪೂಜಾರ ಕಾಂಗರೂ ನಾಡಲ್ಲಿ ಕಮಾಲ್ ಮಾಡಿದ್ರು. 4 ಪಂದ್ಯಗಳಿಂದ 521 ರನ್ ಸಿಡಿಸಿದ್ದ ಟೆಸ್ಟ್​ ಸರಣಿಯ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇದೇ ಪ್ರವಾಸದ ಅಂತಿಮ ಟೆಸ್ಟ್​ನಲ್ಲಿ ಶತಕ ಸಿಡಿಸಿದ್ದ ಪೂಜಾರ ಬಳಿಕ ಒಂದೇ ಒಂದು ಶತಕ ದಾಖಲಿಸಲು ವಿಫಲರಾಗಿದ್ದಾರೆ. ಅಂದ್ರೆ ಸರಿಸುಮಾರು 2 ವರ್ಷ 5 ತಿಂಗಳಿಂದ ಶತಕದ ಬರ ಎದುರಿಸ್ತಿದ್ದಾರೆ.

ಸತತ 6 ಟೆಸ್ಟ್ ಸರಣಿಗಳಿಂದ ಪೂಜಾರ ಫ್ಲಾಪ್
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸಂಪೂರ್ಣ ಫ್ಲಾಫ್ ಆಗಿದ್ದಾರೆ ಅನ್ನೋದಕ್ಕೆ ಸಾಕ್ಷಿ, ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಡೆದ ಆರು ಟೆಸ್ಟ್​ ಸರಣಿಗಳಾಗಿವೆ. ಈ ಆರು ಸರಣಿಗಳ ಪೈಕಿ ಒಂದೇ ಒಂದು ಸರಣಿಯಲ್ಲೂ ಪೂಜಾರ ಮ್ಯಾಚ್ ಇನ್ನಿಂಗ್ಸ್​ ಪರ್ಫಾಮೆನ್ಸ್ ನೀಡಿಲ್ಲ. ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ​, ಸತತ ಆರು ಟೆಸ್ಟ್​ ಸರಣಿಗಳಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಇದು ಟೀಮ್ ಇಂಡಿಯಾ ಕಳವಳಕ್ಕೆ ಕಾರಣವಾಗ್ತಿದೆ.

2019ರ ಸಿಡ್ನಿ ಟೆಸ್ಟ್ ಬಳಿಕ ಪೂಜಾರ
2019ರಿಂದ 18 ಟೆಸ್ಟ್​ ಪಂದ್ಯಗಳನ್ನಾಡಿರುವ ಪೂಜಾರ, 28.48ರ ಸರಾಸರಿಯಲ್ಲಿ 826 ರನ್​​ ಗಳಿದ್ದಾರೆ. ಈ ಪೈಕಿ 81 ರನ್​, ಪೂಜಾರರ ಬೆಸ್ಟ್ ಸ್ಕೋರ್ ಆಗಿದೆ.

ಇಂಗ್ಲೆಂಡ್ ಪ್ರವಾಸವೇ ಆಗುತ್ತಾ ಕೊನೆ..?
ಒಂದೆಡೆ ಸತತ ವೈಫಲ್ಯ, ಮತ್ತೊಂದೆಡೆ ಸ್ಲೋ ಇನ್ನಿಂಗ್ಸ್, ಇನ್ನೊಂದೆಡೆ ಇಂಗ್ಲೆಂಡ್​ ಪಿಚ್​ನ ಚಾಲೆಂಜ್. ಈ ಎಲ್ಲಾ ಅಗ್ನಿಪರೀಕ್ಷೆಯ ನಡುವೆ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಪೂಜಾರ, ಬ್ಯಾಟಿಂಗ್ ಖದರ್ ತೋರಿಸಬೇಕಿದೆ. ಅಕಸ್ಮಾತ್ ಇಂಗ್ಲೆಂಡ್​ ಸರಣಿಯಲ್ಲೂ ಕಂಪ್ಲೀಟ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ದಾದ್ರೆ, ಪೂಜಾರ ಸ್ಥಾನಕ್ಕೆ ಕುತ್ತು ಬರೋದು ಗ್ಯಾರಂಟಿ. ಈಗಾಗಲೇ ಟೀಮ್ ಇಂಡಿಯಾದ ಪ್ರತಿಯೊಂದು ಸ್ಥಾನಕ್ಕೆ ಪೈಪೋಟಿ ನಡೀತಿದೆ. ಇಂಥಹ ಸಂದರ್ಭದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ್ರೆ, ಟೆಸ್ಟ್​ ತಂಡದಿಂದ ಪೂಜಾರ ರೆಸ್ಟ್ ಪಡೆಯೋದನ್ನ ಅಲ್ಲೆಗೆಳೆಯುವಂತಿಲ್ಲ.

ಒಟ್ಟಿನಲ್ಲಿ ಚೇತೇಶ್ವರ್ ಪೂಜಾರ ಓರ್ವ ಕ್ಲಾಸ್ ಪ್ಲೇಯರ್​ ಅನ್ನೋದ್ರಲ್ಲಿ, ಎರಡು ಮಾತಿಲ್ಲ. ಫಾರ್ಮ್ ಈಸ್ ಟೆಂಪರರಿ, ಕ್ಲಾಸ್ ಈಸ್ ಪರ್ಮನೆಂಟ್ ಅಂತಾರೆ. ಹಾಗಾಗಿ ಈ ಕ್ಲಾಸ್ ಬ್ಯಾಟ್ಸ್​ಮ್ಯಾನ್ ಪೂಜಾರ, ಆದಷ್ಟು ಬೇಗ ಫಾರ್ಮ್​ಗೆ ಮರಳಲಿ ಅನ್ನೋದೇ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

The post ಪೂಜಾರ ಶತಕ ಸಿಡಿಸಿ 2 ವರ್ಷ.. ಡೇಂಜರ್ ಝೋನ್​ನಲ್ಲಿ ಟೆಸ್ಟ್​ ಸ್ಪೆಷಲಿಸ್ಟ್ ಕೆರಿಯರ್ appeared first on News First Kannada.

Source: newsfirstlive.com

Source link