ಪೂರ್ವಾಂಚಲ ಎಕ್ಸ್​ಪ್ರೆಸ್​ ವೇ ಪೂರ್ವಾಂಚಲ ಪ್ರಾಂತ್ಯದ ಅಭಿವೃದ್ಧಿ ವಾಹಕ ಎಂದು ಕರೆಸಿಕೊಳ್ಳುತ್ತಿದೆ! | Purvanchal Expressway is deemed as Development Carrier of underdeveloped Eastern Uttar Pradesh


ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರದಂದು ಪೂರ್ವಾಂಚಲ ಎಕ್ಸ್ ಪ್ರೆಸ್ ದಾರಿಯುನ್ನು ದೇಶಕ್ಕೆ ಸಮರ್ಪಿಸಿದ್ದು ನಿಮಗೆ ಗೊತ್ತಿದೆ. ರೂ. 22,496 ಕೋಟಿ ವೆಚ್ಚದ ಈ ಮೂಲಸೌಕರ್ಯ ಯೋಜನೆಯು ಉತ್ತರ ಪ್ರದೇಶ ಸರ್ಕಾರ ಪೂರ್ತಿಗೊಳಿಸಿರುವ ಅತಿದೊಡ್ಡ ಪ್ರಾಜೆಕ್ಟ್ ಆಗಿದೆ ಮತ್ತು ಈ ಯೋಜನೆಯನ್ನು ಅಭಿವೃದ್ಧಿ ಕಾಣದ ಪೂರ್ವಾಂಚಲ್ ಪ್ರಾಂತ್ಯದ ಅಭಿವೃದ್ಧಿ ವಾಹಕ ಎಂದು ಉಲ್ಲೇಖಿಸಲಾಗುತ್ತಿದೆ. ಪೂರ್ವಾಂಚಲ ಎಕ್ಸ್​ಪ್ರೆಸ್​ ದಾರಿಯು ಲಖನೌ ಜಿಲ್ಲೆ ಲಖನೌ-ಸುಲ್ತಾನ್ಪುರ ರಸ್ತೆಯಲ್ಲಿರುವ ಚಾಂದ್ಸರೈ ಎಂಬ ಸ್ಥಳದಿಂದ ಅರಂಭಗೊಂಡು ಘಾಜಿಪುರ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೈದಾರಿಯನಲ್ಲಿ ಕೊನೆಗೊಳ್ಳುತ್ತದೆ. ಈ ಎಕ್ಸ್​ಪ್ರೆಸ್ ವೇ ಸದ್ಯಕ್ಕೆ 6 ಪಥಗಳನ್ನು ಹೊಂದಿದ್ದು ಅದನ್ನು 8 ಪಥಗಳಿಗೆ ವಿಸ್ತರಿಸಬಹುದಾಗಿದೆ.

341-ಕಿಮೀ ಉದ್ದದ ಪೂರ್ವಾಂಚಲ್ ಎಕ್ಸ್​ಪ್ರೆಸ್​ ವೇ ಲಖನೌ ಮತ್ತು ಬಿಹಾರನಲ್ಲಿರುವ ಬಕ್ಸರ್ ನಡುವಿನ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ 4 ಗಂಟೆಗಳಿಗೆ ಇಳಿಸಲಿದೆ. ಹಾಗೆಯೇ ಈ ರಸ್ತೆ ಒಮ್ಮೆ ಸಾರ್ವಜನಿಕರ ಸೇವೆಗೂ ಲಭ್ಯವಾಗಲಾರಂಭಿಸಿದ ನಂತರ ಲಖನೌ ಮತ್ತು ಘಾಜಿಪುರ ನಡುವಿನ ಪ್ರಯಾಣ ಸಮಯವವು 6 ಗಂಟೆಗಳಿಂದ ಮೂರೂವರೆ ಗಂಟೆಗಿಳಿಯಲಿದೆ.

ಸದರಿ ರಸ್ತೆಯು ಎನ್ ಸಿ ಆರ್ ಮತ್ತು ಪೂರ್ವ ಉತ್ತರ ಪ್ರದೇಶ ಮತ್ತು ಹೆಚ್ಚುಕಡಿಮೆ ಬಿಹಾರದ ಗಡಿವರೆಗೆ ನೇರ ಸಂಪರ್ಕ ಕಲ್ಪಿಸಲಿದೆ. ನಿಮಗೆ ಗೊತ್ತಿರುವ ಹಾಗೆ ಯಮುನಾ ಎಕ್ಸ್ ಪ್ರೆಸ್ ವೇ ನೋಯ್ಡಾ ಮತ್ತು ಆಗ್ರಾ ನಡುವೆ ಸಂಪರ್ಕ ಕಲ್ಪಿಸಿದರೆ, ಲಖನೌ-ಆಗ್ರಾ ಎಕ್ಸ್​ಪ್ರೆಸ್ ವೇ ರಾಜ್ಯದ ರಾಜಧಾನಿವರೆಗೆ ಹೋಗುತ್ತದೆ.

ಹಾಗೆಯೇ, ಪೂರ್ವಾಂಚಲ ಎಕ್ಸ್​ಪ್ರೆಸ್ ವೇ ಯುಪಿ-ಬಿಹಾರ ಗಡಿ ಪ್ರದೇಶಕ್ಕೆ 18 ಕಿಮೀ ದೂರದಲ್ಲಿ ಅಂತ್ಯಗೊಳ್ಳುತ್ತದೆ.

ಪೂರ್ವಾಂಚಲ ಎಕ್ಸ್​ಪ್ರೆಸ್ ವೇ; ಲಖನೌ, ಬಾರಾಬಂಕಿ, ಅಮೇಥಿ, ಅಯೋಧ್ಯೆ, ಸುಲ್ತಾನಪುರ, ಅಂಬೇಡ್ಕರ್ ನಗರ, ಆಜಂಗಢ್, ಮಾವು ಮತ್ತು ಘಾಜಿಪುರ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ.

ಪೂರ್ವಾಂಚಲ ಎಕ್ಸ್​ಪ್ರೆಸ್ ವೇ 18 ಫ್ಲೈ ಓವರ್, 7 ರೇಲ್ವೇ ಓವರ್ ಬ್ರಿಜ್, 7 ಉದ್ದನೆಯ ಬ್ರಿಜ್, 104 ಸಣ್ಣ ಪ್ರಮಾಣದ ಬ್ರಿಜ್, 13 ಇಂಟರ್ ಚೇಂಜ್ಗಳು ಮತ್ತು 271 ಅಂಡರ್ ಪಾಸ್ ಗಳ ಮೂಲಕ ಹಾದು ಹೋಗಿದೆ.

ಇದನ್ನು ಓದಿ:  ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಸೂಲಿಗಿಳಿದು ತಗಲಾಕ್ಕೊಂಡ ಹೊಯ್ಸಳ ಸಿಬ್ಬಂದಿ; ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *