‘ಜೆಂಟಲ್​ಮನ್’​ ಸಿನಿಮಾದ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್​ಪಾಂಡೆ ಸದ್ಯ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದೊಂದು ಐದು ಕಥೆಗಳನ್ನ ಆಧಾರಿತ ಸಿನಿಮಾವಾಗಿದ್ದು, ಇದೀಗ ಅದೇ ಸಿನಿಮಾದ ಮೊದಲ ಕ್ಯಾರೆಕ್ಟರ್​ ಪೋಸ್ಟರ್​​ ಬಿಡುಗಡೆಯಾಗಿದೆ. ಐದು ಕಥೆಗಳ ಸಿನಿಮಾ ಆಗಿರುವ ಕಾರಣಕ್ಕೋ ಏನೋ, ಸಿನಿಮಾಗೆ ‘ಪೆಂಟಗನ್’​ ಅಂತಾನೇ ಹೆಸರಿಡಲಾಗಿದೆ. ಹೆಸರಿನಂತೆಯೇ ಬಿಡುಗಡೆಯಾದ ಮೊದಲ ಕ್ಯಾರೆಕ್ಟರ್​ ಪೋಸ್ಟರ್​​ ಸಖತ್​ ಥ್ರಿಲ್ಲಿಂಗ್​ ಆಗಿದೆ.

ಐದು ಕಥೆಗಳಲ್ಲಿ ಒಂದು ಕಥೆಗೆ ಡೆಬ್ಯೂ ಡೈರೆಕ್ಟರ್​ ಕಿರಣ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಈ ಕಥೆಯ ಮೊದಲ ಕ್ಯಾರೆಕ್ಟರ್​​ ಇಂದು ರಿವೀಲ್​​ ಆಗಿದೆ. ನಿರ್ಮಾಪಕ ಗುರು ದೇಶ್​ಪಾಂಡೆ ಪತ್ನಿ ಪ್ರೀತಿಕಾ ದೇಶ್​ಪಾಂಡೆ ಈ ಕಥೆಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಪ್ರೀತಿ ಅವರ ಪೋಸ್ಟರ್​​ ಲಾಂಚ್​ ಆಗಿದೆ. ಪ್ರೀತಿಕಾ ದೇಶ್​ಪಾಂಡೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್​​ಡೇ ಪ್ರಯುಕ್ತ ಈ ಪೋಸ್ಟರ್​ ರಿವೀಲ್​ ಆಗಿದೆ.

ಕಳೆದ 15 ವರ್ಷಗಳಿಂದ ಪರಿಯ ಸಿನಿಮಾಗಳ ಕೆಲಸಗಳಲ್ಲಿ ಬೆನ್ನೆಲುಬಾಗಿರುವ ಪ್ರೀತಿ ದೇಶ್​ಪಾಂಡೆ, ಚಾನ್ಸ್​ ಸಿಕ್ಕಿದ್ದರೂ ಕೂಡ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಮತ್ತೆ ಸಿಕ್ಕಂತ ಅವಕಾಶವನ್ನ ಬಿಡದೇ, ಕಿರಣ್​ ಕುಮಾರ್​ ಕಥೆಯಿಂದ ಪ್ರೇರಿತರಾಗಿ ನಟಿಸೋದಕ್ಕೆ ಒಪ್ಪಿಕೊಂಡಿದ್ದಾರೆ. ಪೆಂಟಗನ್​ ಮೂಲಕ ತಮ್ಮ ಸಿನಿ ಜರ್ನಿಯನ್ನ ಆರಂಭಿಸಿದ್ದಾರೆ. ‘ಜಿ ಸಿನಿಮಾಸ್’​​ ಹೆಸರಿನಲ್ಲಿ ಗುರು ದೇಶ್​ಪಾಂಡೆ ಸಿನಿಮಾ ನಿರ್ಮಾಣ ಮಾಡ್ತಿದ್ದು, ಐದು ನಿರ್ದೇಶಕರು ಈ ಪೆಂಟಗನ್​​ ಸಿನಿಮಾದ ಭಾಗವಾಗಲಿದ್ದಾರೆ. ಸಂಗೀತ ನಿರ್ದೇಶಕ ಮಣೆಕಾಂತ್​ ಕದ್ರಿ ಈ ಆ್ಯಂಥಾಲಜಿ ಸಿನಿಮಾಗೆ ಸಂಗೀತದ ಕಂಪು ತುಂಬಲಿದ್ದಾರೆ.

The post ‘ಪೆಂಟಗನ್’​ ಕಥೆಯಿಂದ ಪ್ರೀತಿಗೆ ಸ್ಫೂರ್ತಿ; ಥ್ರಿಲ್ಲರ್​ ಲುಕ್​ನಲ್ಲಿ ಗುರು ದೇಶ್​ಪಾಂಡೆ ಪತ್ನಿ appeared first on News First Kannada.

Source: newsfirstlive.com

Source link