ಪೆಗಸಸ್ ಗೂಢಚರ್ಯೆ; ತನ್ನ ವಿರುದ್ಧದ ಆರೋಪ ತಳ್ಳಿಹಾಕಿದ NSO ಕಂಪನಿ ಹೇಳಿದ್ದಿದು..

ಪೆಗಸಸ್ ಗೂಢಚರ್ಯೆ; ತನ್ನ ವಿರುದ್ಧದ ಆರೋಪ ತಳ್ಳಿಹಾಕಿದ NSO ಕಂಪನಿ ಹೇಳಿದ್ದಿದು..

ನವದೆಹಲಿ: ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಗುರಿಯಾಗಿರುವ ಪೆಗಸಸ್ ಗೂಢಚರ್ಯೆ ವಿಚಾರವಾಗಿ ಪೆಗಸಸ್ ಸಿಸ್ಟಮ್ ತಯಾರಿಸಿದೆ ಎನ್ನಲಾದ NSO ಪ್ರತಿಕ್ರಿಯೆ ನೀಡಿದ್ದು ನಮಗೂ ಈ ಆರೋಪಕ್ಕೂ ಸಂಬಂಧವೇ ಇಲ್ಲ ಎಂದಿದೆ.

ಇಲ್ಲಿವರೆಗೆ ನಡೆದಿದ್ದೇ ಸಾಕು.. ಮಾಧ್ಯಮಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು.. ಲೀಕ್ ಆಗಿದೆ ಎನ್ನಲಾದ ಲಿಸ್ಟ್ ಟಾರ್ಗೆಟ್​ಗಳ ಲಿಸ್ಟ್ ಅಲ್ಲ.. ಅಥವಾ ಸಂಭಾವ್ಯ ಟಾರ್ಗೆಟ್ ಕೂಡ ಅಲ್ಲ. ಲಿಸ್ಟ್​ನಲ್ಲಿರುವ ನಂಬರ್​ಗಳು ಎನ್​ಎಸ್ಓ ಗ್ರೂಪ್​ಗೆ ಸಂಬಂಧಿಸಿದವಲ್ಲ.. ಹೀಗೆ ಸಂಬಂಧ ಕಲ್ಪಿಸುತ್ತಿರುವುದು ತಪ್ಪು ಮಾಹಿತಿ.

ಎನ್​ಎಸ್​ಓ ತಾಂತ್ರಿಕ ಸಂಸ್ಥೆಯಾಗಿದೆ.. ನಾವು ಸಿಸ್ಟಮ್​ಗಳನ್ನು ಆಪರೇಟ್ ಮಾಡುವುದಿಲ್ಲ. ಅಥವಾ ಗ್ರಾಹಕರ ಡೇಟಾವನ್ನ ನಾವು ಆ್ಯಕ್ಸಿಸ್ ಮಾಡುವುದಿಲ್ಲ. ಎನ್​ಎಸ್​ಓ ತಾಂತ್ರಿಕತೆಯ ದುರ್ಬಳಕೆಯಾಗಿದ್ದರೆ ಅದನ್ನು ತನಿಖೆ ನಡೆಸುತ್ತದೆ. ನಾವು ಅದನ್ನೇ ಮಾಡುತ್ತಾ ಬಂದಿದ್ದೇವೆ.. ಅಗತ್ಯ ಬಿದ್ದರೆ ಅಂತ ಸಿಸ್ಟಮ್​ನ್ನು ನಾವು ನಿಲ್ಲಿಸುತ್ತೇವೆ. ಎನ್​ಎಸ್​ಓ ಜೀವಗಳನ್ನು ಉಳಿಸುತ್ತದೆ.. ಭಯೋತ್ಪಾದಕ ದಾಳಿ, ಸೆಕ್ಸ್, ಡ್ರಗ್​ ಟ್ರಾಫಿಕ್​ಗಳನ್ನು ಪತ್ತೆಹಚ್ಚಲು, ನಾಪತ್ತೆಯಾದ ಅಥವಾ ಕಿಡ್ನಾಪ್ ಆದ ಮಕ್ಕಳನ್ನು ಪತ್ತೆಹಚ್ಚುವಲ್ಲಿ, ಕುಸಿದುಬಿದ್ದ ಕಟ್ಟಡಗಳ ಕೆಳಗೆ ಬದುಕುಳಿದವರನ್ನ ಪತ್ತೆಹಚ್ಚಲು, ಡ್ರೋನ್​ಗಳ ಮೂಲಕ ನಡೆಯುವ ದಾಳಿಗಳನ್ನು ತಡೆಗಟ್ಟಲು ಸರ್ಕಾರಗಳಿಗೆ ನೆರವಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

The post ಪೆಗಸಸ್ ಗೂಢಚರ್ಯೆ; ತನ್ನ ವಿರುದ್ಧದ ಆರೋಪ ತಳ್ಳಿಹಾಕಿದ NSO ಕಂಪನಿ ಹೇಳಿದ್ದಿದು.. appeared first on News First Kannada.

Source: newsfirstlive.com

Source link