ತುಮಕೂರು: ಸ್ನೂಪಿಂಗ್ ಪ್ರಪಂಚದಲ್ಲಿ ದೊಡ್ಡ ಪ್ರಮಾಣದಲ್ಲಿ ಫೋನ್​ ಟ್ಯಾಪ್​ ನಡೆದಿದೆ ಅಂತ ಮಾಜಿ ಸಿಎಂ ಡಾ.ಜಿ.ಪರಮೇಶ್ವರ್​ ಹೇಳಿಕೆ ನೀಡಿದ್ದಾರೆ. ಪೆಗಸಸ್ ಮೂಲಕ ಫೋನ್​ ಟ್ಯಾಪ್ ಆಗಿದೆ ಎನ್ನಲಾದ ಪಟ್ಟಿಯಲ್ಲಿ ಜಿ. ಪರಮೇಶ್ವರ್ ಅವರ ಫೋನ್ ನಂಬರ್​ ಕೂಡ ಇದೆ​ ಎಂದು ಸ್ವತಂತ್ರ ಸುದ್ದಿಸಂಸ್ಥೆಯೊಂದು ಹೇಳಿದೆ.

ಪೆಗಾಸಸ್ ಸ್ಪೈವೇರ್ ಮೂಲಕ ಸ್ನೂಪಿಂಗ್ ಬಗ್ಗೆ ಮಾತನಾಡಿದ ಡಾ.ಜಿ.ಪರಮೇಶ್ವರ್.. ಪತ್ರಕರ್ತರು, ಹಿರಿಯ ಮುಖಂಡರು, ಸರ್ಕಾರಿ ಅಧಿಕಾರಿಗಳ ಮಾಹಿತಿ ಸೋರಿಕೆ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ಯಾರು ಮಾಡಿದ್ದಾರೆ ಏನ್ ಮಾಡಿದ್ದಾರೆ ಗೊತ್ತಿಲ್ಲ. 50 ಸಾವಿರ ಪೋನ್ ಟ್ಯಾಪ್ ಆಗಿದೆ ಅಂತಾ ಹೇಳ್ತಾ ಇದ್ದಾರೆ. ಭಾರತದಲ್ಲಿ ಪತ್ರಕರ್ತರು, ರಾಜಕಾರಣಿಗಳು ಬ್ಯೂರೋ ಕ್ರಾಟ್ಸ್ ಪೋನ್ ಟ್ಯಾಪ್ ಆಗಿದೆ. ಕೇಂದ್ರ ಸರ್ಕಾರ ಯಾಕ್ ಸುಮ್ಮನಿದೆ ಅಂತ ಗೊತ್ತಿಲ್ಲ. ಇಷ್ಟೆಲ್ಲಾ ನಡೆದ ಮೇಲೂ ಕೇಂದ್ರ ಸರ್ಕಾರ ಯಾವ ಸ್ಪಷ್ಟನೆಯನ್ನೂ ಕೊಟ್ಟಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು, ತನಿಖೆಯಿಂದ ಯಾವುದಕ್ಕೋಸ್ಕರ ಟ್ಯಾಪಿಂಗ್ ನಡೆಸಿದ್ದಾರೆ ತಿಳಿಯಬೇಕು ಅಂತ ಪ್ರತಿಕ್ರಿಯೆ ನೀಡಿದ್ದಾರೆ.

The post ಪೆಗಸಸ್ ಬೇಹುಗಾರಿಕೆ; ಕೇಂದ್ರ ಸರ್ಕಾರದ ಸ್ಪಷ್ಟನೆ ನೀಡಬೇಕಿದೆ ಎಂದ ಜಿ. ಪರಮೇಶ್ವರ್ appeared first on News First Kannada.

Source: newsfirstlive.com

Source link