ನವದೆಹಲಿ: 2019 ರ ಮಧ್ಯಂತರದಲ್ಲಿ ಕಾಂಗ್ರೆಸ್-ಜೆಡಿಎಸ್​ ಸರ್ಕಾರ ಬೀಳಿಸಲು ಕಾಣದ ಕೈಗಳು ಪೆಗಸಸ್ ಮೂಲಕ ರಾಜ್ಯದ ನಾಯಕರ ಫೋನ್ ಟ್ಯಾಪ್ ಮಾಡಿರುವ ಸಾಧ್ಯತೆ ಇದೆ ಎಂದು ಸ್ವತಂತ್ರ ಸುದ್ದಿಸಂಸ್ಥೆಯೊಂದು ವರದಿ ಮಾಡಿದ ಬೆನ್ನಲ್ಲೇ ಇಂದು ದೆಹಲಿಯ AICC ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ.. ಮೋದಿ ಸರ್ಕಾರ ಆಪರೇಷನ್ ಕಮಲದ ಮೂಲಕ ಲೋಕತಂತ್ರವನ್ನ ಹಾಳುಮಾಡುತ್ತಿದ್ದಾರೆ. ಸರ್ಕಾರ ಬೀಳಿಸಲು ಸ್ಪೈ ಕೆಲಸವನ್ನ ಮೋದಿ ಸರ್ಕಾರ ಮಾಡಿದೆ. ಕರ್ನಾಟಕದ ಸಮ್ಮಿಶ್ರ ಸರ್ಕಾರ ಬೀಳಿಸಲು ಮೋದಿ ಸರ್ಕಾರ ಪ್ರಜಾತಂತ್ರದ ಹತ್ಯೆ ಮಾಡಿದ್ದಾರೆ. ಮೋದಿ ಸರ್ಕಾರ ದೇಶ ದ್ರೋಹ ಮಾಡಿದೆ, ಪೆಗಸಸ್ ದುರುಪಯೋಗ ಮಾಡಿಕೊಂಡು ಕರ್ನಾಟಕದಲ್ಲಿದ್ದ ಸರ್ಕಾರ ಬೀಳಿಸಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಬಿಳಿಸಲು ಪೆಗಸಸ್ ಬಳಕೆ ಮಾಡಿಕೊಂಡಿದೆ..

ಮದ್ಯಪ್ರದೇಶ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ಸರ್ಕಾರ ಬಿಳಿಸಲು ಪೆಗಸಸ್ ಬಳಕೆ ಮಾಡಿಕೊಂಡಿದೆ. ಅಮಿತ್ ಶಾ ಅವರ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ.. ಹಾಗಾಗಿಯೇ ಸಂಸತನಲ್ಲಿ ಈ ಬಗ್ಗೆ ಅವರು ಮಾತಾಡುತ್ತಿಲ್ಲ ಎಂದಿದ್ದಾರೆ.

ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ.. ಪೆಗಾಸಸ್ ಪ್ರಕರಣದಲ್ಲಿ ಹಲವರ ಹೆಸರು ಕೇಳಿಬಂದಿತ್ತು.. ಕೆಲವ್ಯಕ್ತಿಗಳ ಹೆಸರು ಹಾಳು ಮಾಡಲು ಇದನ್ನ ಬಳಕೆ ಮಾಡಿದ್ದರು ಅಂದುಕೊಂಡಿದ್ದೆವು. ಆದರೆ ಇವತ್ತು ಗೊತ್ತಾಗಿದೆ, ರಾಜಕೀಯ ನಾಯಕರ ಫೋನ್ ಗಳನ್ನು ಟ್ಯಾಪ್ ಮಾಡಲಾಗಿದೆ. ಕರ್ನಾಟಕ ಸಮ್ಮಿಶ್ರ ಸರ್ಕಾರ ಬೀಳಿಸಲು ಮೋದಿ ಮತ್ತು ಶಾ ಕಾರಣರಾಗಿದ್ದಾರೆ. ಡೆಮಾಕ್ರಸಿ ಮುಗಿಸಿ ಡಿಕ್ಟೇಟರ್ ಶಿಪ್ ಮಾಡಲು ಮುಂದಾಗಿದ್ದಾರೆ.. ಸದ್ಯ ಕರ್ನಾಟಕದ ವಿಚಾರ ಬೆಳಕಿಗೆ ಬಂದಿದೆ.

ನಾಳೆಯಿಂದ ಈ ಬಗ್ಗೆ ಹೋರಾಟ ಮಾಡುತ್ತೇವೆ..

ಇದರ ಜೊತೆಗೆ ಮದ್ಯಪ್ರದೇಶ, ಅರುಣಾಚಲ ಪ್ರದೇಶ್, ಗೋವಾ, ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಪೈ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾಳೆ ರಾಜ್ಯ ಮತ್ತು ಲೋಕ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ನಾಳೆಯಿಂದ ಈ ಬಗ್ಗೆ ಹೋರಾಟ ಮಾಡುತ್ತೇವೆ. ಅಧಿಕಾರದಲ್ಲಿ ಮೋದಿ ಸರ್ಕಾರ ಇರಲು ಯೋಗ್ಯರಲ್ಲ, ಅವರೆ ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಮೇಲೆ ತನಿಖೆಯಾಗಬೇಕು. ಫ್ರೆಂಚ್ ಸರ್ಕಾರ ಇಗಾಗಲೇ ತನಿಖೆ ಆರಂಭಿಸಿದೆ. ಅದರಂತೆ ದೇಶದಲ್ಲೂ ತನಿಖೆಯಾಗಬೇಕು ಎಂದಿದ್ದಾರೆ.

ಬೆಡ್ ರೂಂ, ಕಿಚನ್ ಮತ್ತು ಬಾತ್ ರೂಂ ಮಾಹಿತಿಯನ್ನೂ ಗುಪ್ತವಾಗಿ ಇಡಲಾಗುತ್ತಿಲ್ಲ

ಕೆ ಸಿ ವೇಣುಗೋಪಾಲ್ ಮಾತನಾಡಿ.. 2018- 19 ರಲ್ಲಿ ಸರ್ಕಾರ ಬಿಳಿಸಲು ಕುತಂತ್ರ ನಡೆದಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ಫೋನ್ ಕದ್ದಾಲಿಕೆ ಮಾಡಲಾಗಿದೆ. ಪರಮೇಶ್ವರ್ ಪರ್ಸನಲ್ ನಂಬರ್ ಸಹ ಟ್ಯಾಪ್ ಮಾಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ನಂಬರ ಸಹ ಟ್ಯಾಪ್ ಮಾಡಲಾಗಿದೆ. ದೇಶದಲ್ಲಿ ಪ್ರೈವಸಿ ಅನ್ನೋದೇ ಇಲ್ಲ. ಈಗ ಬೆಡ್ ರೂಂ, ಕಿಚನ್ ಮತ್ತು ಬಾತ್ ರೂಂ ಮಾಹಿತಿಯನ್ನೂ ಗುಪ್ತವಾಗಿ ಇಡಲಾಗುತ್ತಿಲ್ಲ. ಈ ಬಗ್ಗೆ ಮಾತನಾಡಲು ಕೇಂದ್ರ ಬಹಿರಂಗವಾಗಿ ಚರ್ಚೆಗೆ ಬರಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್​ನಿಂದ ತನಿಖೆಯಾಗಬೇಕು. 17 ಜನರ ತೀಪ್ರು ನೀಡಿರೋ ಆಗಿನ ನ್ಯಾಯಾಧೀಶರು ಈಗ ರಾಜ್ಯಸಭಾ ಮೆಂಬರ್.. ಇದರಿಂದಲೇ ಗೊತ್ತಾಗಲಿದೆ ಯಾವ ರೀತಿ ಪರಿಸ್ಥಿತಿ ಇದೆ ಎಂದು. ಹಾಗಾಗಿ ಪಾರದರ್ಶಕವಾಗಿ ಈಗ ಇದರ ಬಗ್ಗೆ ತನಿಖೆಯಾಗಬೇಕು. ಗುರುವಾರ ಎಲ್ಲಾ ರಾಜ್ಯದ ಕಾಂಗ್ರೆಸ್ ನಾಯಕರು ಆಯಾ ರಾಜ್ಯದಲ್ಲಿ ರಾಜಭವನದ ಪರೇಡ್ ಮಾಡಲಿದ್ದಾರೆ. ಈ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

The post ಪೆಗಸಸ್ ಬೇಹುಗಾರಿಕೆ; ನಾಳೆಯಿಂದ ಕೇಂದ್ರದ ವಿರುದ್ಧ ಹೋರಾಟ ಮಾಡುತ್ತೇವೆಂದ ಕೈ ನಾಯಕರು appeared first on News First Kannada.

Source: newsfirstlive.com

Source link