ಮಾನವ ಹಕ್ಕುಗಳ ಗ್ರೂಪ್ ಆಮ್ನೆಸ್ಟಿ ಇಂಟರ್​ನ್ಯಾಷನಲ್ ಇದೀಗ ಪೆಗಸಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಇತ್ತೀಚೆಗೆ ಲೀಕ್ ಆದ ಫೋನ್ ನಂಬರ್​ಗಳ ಲಿಸ್ಟ್​ನ್ನು ನಾವು ಟಾರ್ಗೆಟ್ ಆದ ನಂಬರ್​ಗಳು ಎಂದು ಯಾವತ್ತೂ ಹೇಳಿಯೇ ಇಲ್ಲ ಎಂದಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್​​ಗಳು ಎಷ್ಟು ಸೇಫ್​​..? ಏನಿದು ಪೆಗಸಸ್ ವೈರಸ್​​?

ಆಮ್ನೆಸ್ಟಿ ಇಂಟರ್​ನ್ಯಾಷನಲ್​ನ ಸೈಬರ್​ಸೆಕ್ಯುರಟಿ ಪತ್ರಕರ್ತ ಕಿಮ್ ಜೆಟ್ಟರ್ ಮಾಧ್ಯಮ ಹೇಳಿಕೆ ನೀಡಿದ್ದು.. ಆಮ್ನೆಸ್ಟಿ ಮತ್ತು ಅದರ ತನಿಖಾ ಪತ್ರಕರ್ತರು ಮತ್ತು ಮೀಡಿಯಾ ಔಟ್​ಲೆಟ್​​ಗಳು ಸ್ಪಷ್ಟ ಭಾಷೆಯಲ್ಲಿ ಲಿಸ್ಟ್​ನಲ್ಲಿನ ನಂಬರ್​ಗಳು ಕೇವಲ ಆಸಕ್ತಿಯುಳ್ಳ ನಂಬರ್​ಗಳು ಎಂದು ಹೇಳಿದೆ.

ಇದನ್ನೂ ಓದಿ: #Breaking ಕೈ-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಲು ಪೆಗಸಸ್ ಕಣ್ಗಾವಲೇ ಕಾರಣ..?

ಅಂದರೆ ಈ ಲಿಸ್ಟ್​​ನಲ್ಲಿನ ನಂಬರ್​ಗಳನ್ನು ಎನ್​ಎಸ್​ಓ ಕ್ಲೈಂಟ್​​ಗಳು ಸ್ಪೈ ಮಾಡಬಹುದು ಅಂತಷ್ಟೇ ಹೇಳಲಾಗಿದೆ.. ಲಿಸ್ಟ್​ನಲ್ಲಿರುವ ನಂಬರ್​ಗಳು ಸ್ಪೈ ಆಗಿದೆ ಎಂದು ಹೇಳಿಲ್ಲ.. ಆದರೂ ಲಿಸ್ಟ್​ನಲ್ಲಿರುವ ತುಂಬಾ ಸಣ್ಣಸಂಖ್ಯೆಯ ಜನರನ್ನಷ್ಟೇ ಸ್ಪೈ ಮಾಡಲಾಗಿದೆ ಎಂದು ಆಮ್ನೆಸ್ಟಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಪೆಗಸಸ್ ಗೂಢಚರ್ಯೆ; ತನ್ನ ವಿರುದ್ಧದ ಆರೋಪ ತಳ್ಳಿಹಾಕಿದ NSO ಕಂಪನಿ ಹೇಳಿದ್ದಿದು..

The post ಪೆಗಸಸ್; ಲಿಸ್ಟ್​ನಲ್ಲಿರುವ ನಂಬರ್​ಗಳು ಟಾರ್ಗೆಟ್ ಆಗಿದ್ದವು ಎಂದು ನಾವು ಹೇಳೇ ಇಲ್ಲ-ಉಲ್ಟಾ ಹೊಡೆದ ಆಮ್ನೆಸ್ಟಿ appeared first on News First Kannada.

Source: newsfirstlive.com

Source link