ನವದೆಹಲಿ: ಇಸ್ರೇಲಿನ ಸ್ಪೈವೇರ್ ಪೆಗಾಸಸ್’ ತಂತ್ರಾಂಶ ಬಳಸಿಕೊಂಡು ಭಾರತದ ಕೆಲವು ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಪ್ರಮುಖ ಪತ್ರಕರ್ತರ ಫೋನ್​​ ಟ್ಯಾಪ್​​ ಮಾಡಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಪತ್ರಕರ್ತರು, ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು, ಕಾನೂನು ತಜ್ಞರು, ಉದ್ಯಮಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಸುಮಾರು 300 ಭಾರತೀಯರ ಮೊಬೈಲ್‌ ಹ್ಯಾಕ್​​ ಮಾಡಲಾಗಿದೆ. ಇದಕ್ಕಾಗಿ ಪೆಗಾಸಸ್ ತಂತ್ರಾಂಶ ಬಳಕೆ ಮಾಡಲಾಗಿದೆ.

ಇನ್ನು, ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಮಾಹಿತಿಯು ಸೋರಿಕೆಯಾದೆ ಎಂದು ದತ್ತಾಂಶ ವರದಿಯಲ್ಲಿ ಕಂಡುಬಂದಿದೆ. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದೆ.

The post ಪೆಗಾಸಸ್​​ ಮೂಲಕ ಭಾರತದ ಪತ್ರಕರ್ತರು, ರಾಜಕಾರಣಿಗಳ ಫೋನ್​​ ಕದ್ದಾಲಿಕೆ; ಕೇಂದ್ರ ಹೇಳಿದ್ದೇನು? appeared first on News First Kannada.

Source: newsfirstlive.com

Source link