ಪೆಟ್ರೋಲ್​​ಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಜನರಿಗೆ ಟೀ, ಬನ್ ನೀಡಿದ ಶ್ರೀಲಂಕಾದ ಮಾಜಿ ಕ್ರಿಕೆಟಿಗ | Sri Lanka Ex Cricketer Roshan Mahanama Serves Tea Buns To People Waiting In Petrol Queues


ಪೆಟ್ರೋಲ್​​ಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಜನರಿಗೆ ಟೀ, ಬನ್ ನೀಡಿದ ಶ್ರೀಲಂಕಾದ ಮಾಜಿ ಕ್ರಿಕೆಟಿಗ

ರೋಷನ್ ಮಹಾನಾಮ

ವಾರ್ಡ್ ಪ್ಲೇಸ್ ಮತ್ತು ವಿಜೆರಾಮ ಮಾವತಾ ಸುತ್ತಲಿನ ಪೆಟ್ರೋಲ್ ಬಂಕ್ ಮುಂದಿ ಸರದಿಯಲ್ಲಿದ್ದ ಜನರಿಗೆ ಕಮ್ಯೂನಿಟಿ ಮೀಲ್ ಶೇರ್ ತಂಡದೊಂದಿಗೆ ಟೀ ಮತ್ತು ಬನ್‌ಗಳನ್ನು ಇಂದು ಸಂಜೆ ಬಡಿಸಿದೆವು…

ದೆಹಲಿ: ಶ್ರೀಲಂಕಾವು (Srilanka) ಆಹಾರ, ಇಂಧನ, ಔಷಧಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ಮಾಜಿ ಕ್ರಿಕೆಟಿಗ ರೋಷನ್ ಮಹಾನಾಮ (Roshan Mahanama) ಅವರು ಕೊಲಂಬೊದ ಪೆಟ್ರೋಲ್ ಬಂಕ್‌ನಲ್ಲಿ (Petrol Bunk) ಉದ್ದನೆಯ ಸರದಿ ಸಾಲಿನಲ್ಲಿ ಕಾಯುತ್ತಿರುವವರಿಗೆ ಚಹಾ ಮತ್ತು ಬನ್ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶ್ರೀಲಂಕಾ ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು, ದೇಶಕ್ಕೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಡಾಲರ್‌ಗಳನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. “ವಾರ್ಡ್ ಪ್ಲೇಸ್ ಮತ್ತು ವಿಜೆರಾಮ ಮಾವತಾ ಸುತ್ತಲಿನ ಪೆಟ್ರೋಲ್ ಬಂಕ್ ಮುಂದಿ ಸರದಿಯಲ್ಲಿದ್ದ ಜನರಿಗೆ ಕಮ್ಯೂನಿಟಿ ಮೀಲ್ ಶೇರ್ ತಂಡದೊಂದಿಗೆ ಟೀ ಮತ್ತು ಬನ್‌ಗಳನ್ನು ಇಂದು ಸಂಜೆ ಬಡಿಸಿದೆವು. “ಸರದಿ ಸಾಲುಗಳು ದಿನದಿಂದ ದಿನಕ್ಕೆ ಉದ್ದವಾಗುತ್ತಿವೆ. ಸರದಿಯಲ್ಲಿ ನಿಂತುಕೊಂಡಿರುವ ಜನರಿಗೆ ಅನೇಕ ಆರೋಗ್ಯ ತೊಂದರೆಗಳೂ ಇವೆ” ಎಂದು ಮಾಜಿ ಕ್ರಿಕೆಟಿಗ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಧನ ಕೇಂದ್ರಗಳ ಕಾವಲಿಗಾಗಿ ಶ್ರೀಲಂಕಾ ಸಶಸ್ತ್ರ ಪೋಲೀಸ್ ಮತ್ತು ಪಡೆಗಳನ್ನು ನಿಯೋಜಿಸಿದೆ. ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಬಡ ರಾಷ್ಟ್ರದಲ್ಲಿ ಖಾಲಿಯಾಗುತ್ತಿರುವ ಇಂಧನ ದಾಸ್ತಾನುಗಳನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಸರ್ಕಾರವು ಎರಡು ವಾರಗಳ ಕಾಲ ರಾಜ್ಯ ಸಂಸ್ಥೆಗಳು ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿತು.

ದಯವಿಟ್ಟು, ಇಂಧನ ಸರದಿ ಸಾಲಿನಲ್ಲಿ ಪರಸ್ಪರ ನೋಡಿಕೊಳ್ಳಿ. ಸಾಕಷ್ಟು ದ್ರವ ಮತ್ತು ಆಹಾರವನ್ನು ತನ್ನಿ ಮತ್ತು ನಿಮಗೆ ಆರೋಗ್ಯ ಸಮಸ್ಯೆಯಾದರೆ ದಯವಿಟ್ಟು ನಿಮ್ಮ ಪಕ್ಕದಲ್ಲಿರುವ ಹತ್ತಿರದ ವ್ಯಕ್ತಿಯನ್ನು ಸಂಪರ್ಕಿಸಿ ಮತ್ತು ಬೆಂಬಲವನ್ನು ಕೇಳಿ ಅಥವಾ 1990 ಗೆ ಕರೆ ಮಾಡಿ. ಈ ಕಷ್ಟದ ಸಮಯದಲ್ಲಿ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳಬೇಕು, ”ಎಂದು ಕ್ರಿಕೆಟಿಗ ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published.