ಬೆಂಗಳೂರು: ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ತಳಿಯ ಕುರಿತು ಕೊರೊನಾ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಕೆಲವೊಂದು ಅಂಶಗಳನ್ನು ಶಿಫಾರಸು ಮಾಡಿದೆ.
ತಜ್ಞರು ನೀಡಿರುವ ಸಲಹೆಗಳೇನು?
- ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದರೆ, ಕಡ್ಡಾಯವಾಗಿ ಜೆನೊಮಿಕ್ಸ್ ಸಿಕ್ವೇನ್ಸ್ ಒಳಪಡಿಸಬೇಕು.
- ಕಳೆದ 14 ದಿನಗಳ ಹಿಂದೆ ಬಂದಂತಹ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ.
- ಬೌರಿಂಗ್ ಆಸ್ಪತ್ರೆಯನ್ನು ಒಮಿಕ್ರಾನ್ ಟ್ರೀಟ್ಮೆಂಟ್ಗೆ ಮೀಸಲಿಡಬೇಕು
- ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ರೋಗ ಲಕ್ಷಣಗಳ ಉಳ್ಳಂತಹ ಪ್ರಯಾಣಿಕರನ್ನ ಪ್ರತ್ಯೇಕವಾಗಿ ಚಿಕಿತ್ಸೆ.
- ಸರ್ಕಾರಿ ಸೌಲಭ್ಯ ಪಡೆಯಲು ವ್ಯಾಕ್ಸಿನ್ ಕಡ್ಡಾಯ ಮಾಡಿ. ವಿದ್ಯುತ್, ನೀರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ಸಂಬಳ, ಪಿಂಚಣಿ ಇದನ್ನ ಪಡೆಯಲು ವ್ಯಾಕ್ಸಿನ್ ಕಡ್ಡಾಯ ಮಾಡಿ.
- ಸಾರ್ವಜನಿಕ ಸ್ಥಳಗಳ ಬಳಕೆ ವೇಳೆ ಎರಡು ಡೋಸ್ ಕಡ್ಡಾಯ ಮಾಡಿ.
- ಮೆಟ್ರೋ, ಟ್ರೈನ್, ಸಾರ್ವಜನಿಕ ಸೌಲಭ್ಯ ಬಳಕೆಗೆ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ಗಳ ಬಳಕೆ, ಪಡಿತರ ಬಳಕೆಗೆ ವ್ಯಾಕ್ಸಿನ್ ಕಡ್ಡಾಯ
- ಜನಸಂದಣಿ, ಜನದಟ್ಟಣೆ ಇರುವ ಪ್ರದೇಶದಲ್ಲಿ ಱಂಡಮ್ ಟೆಸ್ಟಿಂಗ್ ಕಡ್ಡಾಯ ಮಾಡಿ.
- ವಾರಕ್ಕೆ ಕನಿಷ್ಟ 5% ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು.
- ನಿರಂತರವಾಗಿ ಶಿಕ್ಷಕರು ಹಾಗೂ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು.
- ಸಾರ್ವಜನಿಕ ಸಭೆ ಸಮಾರಂಭಗಳಿಗೆ ಸಂಖ್ಯೆ ನಿಗದಿ ಮಾಡಿ.
- 500 ಕ್ಕಿಂತ ಕಡಿಮೆ ಮಂದಿಗೆ ಮಾತ್ರ ಅವಕಾಶ ಕೊಡಿ.
- ಒಳಾಂಗಣ ಕಾರ್ಯಕ್ರಮಗಳಿಗೆ 200 ಮಂದಿಗೆ ಮಾತ್ರ ಅವಕಾಶ ಕೊಡಿ.
- ಮಾಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಲಾಡ್ಜ್ಗಳಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸುವಂತೆ ಸಲಹೆ.
- ಸೋಷಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಿ.
- ಲಾಕ್ಡೌನ್, ಒಮಿಕ್ರಾನ್ ಸಾವು ಕುರಿತಾದ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಿ.
- ಶಾಲಾ ಕಾಲೇಜುಗಳನ್ನು ಪ್ಯಾನಿಕ್ ಆಗಿ ತಕ್ಷಣ ಮುಚ್ಚುವ ಅಗತ್ಯವಿಲ್ಲ.
- ಆನ್ ಲೈನ್ ಆಫ್ ಲೈನ್ ಎರಡೂ ರೀತಿಯ ತರಗತಿಗಳನ್ನು ಕೋವಿಡ್ ಮುನ್ನೆಚ್ಚರಿಕೆ ಮೂಲಕ ನಡೆಸಿ