ಬೆಂಗಳೂರು: ಪೆಟ್ರೋಲ್ ಬಂಕ್ಗೆ ನುಗ್ಗಿ ಹಾಡು ಹಗಲೇ ದರೋಡೆಗೆ ಯತ್ನಿಸಿದ ಘಟನೆ ನಗರದ ಮೈಸೂರು ರಸ್ತೆಯಲ್ಲಿನ ರಚನ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಅಡ್ರೆಸ್ ಕೇಳೋ ನೆಪದಲ್ಲಿ ಬಂಕ್ಗೆ ಆಗಮಿಸಿದ ದುಷ್ಕರ್ಮಿಗಳು ಬಂಕ್ನಲ್ಲಿ ಜನ ಖಾಲಿಯಾಗುವವರೆಗೆ ಕಾಲಹರಣ ಮಾಡಿದ್ದಾರೆ. ಜನ ಖಾಲಿಯಾಗುತ್ತದ್ದಂತೆ ಕ್ಯಾಶೀಯರ್ ಮೇಳೆ ಏಕಾಏಕಿ ದಾಳಿ ನಡೆಸಿ ಕ್ಯಾಶ್ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಬ್ಯಾಗ್ ನೀಡೆದೆ ಇದ್ದಾಗ ಆತನ ಮೇಲೆ ಲಾಂಗ್ ಬೀಸಿ ಹಲ್ಲೆ ನಡೆಸಿದ್ದಾರೆ.
ಲಾಂಗ್ನಿಂದ ಹೊಡೆದರು ಸಿಬ್ಬಂದಿ ಮಾತ್ರ ಬ್ಯಾಗ್ ನೀಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ರಸ್ತೆಗೆ ಬಿದ್ದ ಕ್ಯಾಶಿಯರ್ ಕಲ್ಲಿನಿಂದ ಹೊಡೆದಾಗ ದುಷ್ಕರ್ಮಿಗಳು ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲು.