ಪೆಟ್ರೋಲ್, ಡೀಸೆಲ್​ ಅಬಕಾರಿ ಸುಂಕದಿಂದ FY21ರಲ್ಲಿ ಕೇಂದ್ರಕ್ಕೆ 3.7 ಲಕ್ಷ ಕೋಟಿ ರೂ., ರಾಜ್ಯಗಳಿಗೆ 20 ಸಾವಿರ ಕೋಟಿ ಸಂಗ್ರಹ | Central Government Mop up Rs 3.7 Lakh Crore By Petrol And Diesel Excise In FY21 And State Government Gets Rs 20000 Crore


ಪೆಟ್ರೋಲ್, ಡೀಸೆಲ್​ ಅಬಕಾರಿ ಸುಂಕದಿಂದ FY21ರಲ್ಲಿ ಕೇಂದ್ರಕ್ಕೆ 3.7 ಲಕ್ಷ ಕೋಟಿ ರೂ., ರಾಜ್ಯಗಳಿಗೆ 20 ಸಾವಿರ ಕೋಟಿ ಸಂಗ್ರಹ

ಸಾಂದರ್ಭಿಕ ಚಿತ್ರ

2020-21ರ ಸಾಂಕ್ರಾಮಿಕ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾದ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರದ ಆದಾಯವು 3.72 ಲಕ್ಷ ಕೋಟಿ ರೂಪಾಯಿಗೆ ದ್ವಿಗುಣಗೊಂಡಿದೆ. ಅದರಲ್ಲಿ ರಾಜ್ಯಗಳಿಗೆ 20,000 ಕೋಟಿ ರೂಪಾಯಿಗಿಂತ ಕಡಿಮೆ ನೀಡಲಾಗಿದೆ ಎಂದು ಸರ್ಕಾರವು ಮಂಗಳವಾರ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕದಿಂದ ಸಂಗ್ರಹಣೆ 2019-20ರಲ್ಲಿ ಆದ 1.78 ಲಕ್ಷ ಕೋಟಿ ರೂಪಾಯಿಗಳಿಂದ 2020-21 ರಲ್ಲಿ 3.72 ಲಕ್ಷ ಕೋಟಿಗೆ ಏರಿಕೆಯಾಗಿದೆ (ಏಪ್ರಿಲ್ 2020 ರಿಂದ ಮಾರ್ಚ್ 2021) ಎಂದಿದ್ದಾರೆ.

ಸಂಗ್ರಹಣೆಯಲ್ಲಿ ಹೆಚ್ಚಳವು ಮುಖ್ಯವಾಗಿ ಇಂಧನಗಳ ಮೇಲಿನ ತೆರಿಗೆಯ ಹೆಚ್ಚಳದಿಂದಾಗಿ ಬಂದಿದೆ. ಪೆಟ್ರೋಲ್ ಮೇಲಿನ ಒಟ್ಟು ಅಬಕಾರಿ ಸುಂಕ 2019ರಲ್ಲಿ ಲೀಟರ್‌ಗೆ 19.98 ರೂಪಾಯಿ ಮತ್ತು ಡೀಸೆಲ್ ಮೇಲೆ 15.83 ರೂಪಾಯಿ ಇತ್ತು. ಸರ್ಕಾರವು ಕಳೆದ ವರ್ಷ ಎರಡು ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.98 ರೂ.ಗೆ ಮತ್ತು ಡೀಸೆಲ್ ಮೇಲೆ 31.83 ರೂಪಾಯಿಗೆ ಹೆಚ್ಚಳ ಮಾಡಿದೆ. ಈ ವರ್ಷದ ಬಜೆಟ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.90 ರೂಪಾಯಿ ಮತ್ತು ಡೀಸೆಲ್ ಮೇಲೆ 31.80 ರೂಪಾಯಿ ಸುಂಕ ಮಾಡಲಾಗಿದೆ.

ರೀಟೇಲ್ ಬೆಲೆಗಳು ದೇಶಾದ್ಯಂತ ದಾಖಲೆಯ ಎತ್ತರಕ್ಕೆ ಜಿಗಿದ ನಂತರ ಈ ತಿಂಗಳು ಪೆಟ್ರೋಲ್ ಮೇಲೆ ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಕಡಿತಗೊಳಿಸಲಾಯಿತು. “FY 2020-21ರಲ್ಲಿ ಕೇಂದ್ರ ಅಬಕಾರಿ ಸುಂಕದ ಅಡಿಯಲ್ಲಿ ಸಂಗ್ರಹಿಸಲಾದ ನಿಧಿಯಿಂದ ರಾಜ್ಯ ಸರ್ಕಾರಗಳಿಗೆ ವಿತರಿಸಲಾದ ಒಟ್ಟು ತೆರಿಗೆ ಮೊತ್ತವು 19,972 ಕೋಟಿ ರೂಪಾಯಿಗಳು,” ಎಂದು ಚೌಧರಿ ಹೇಳಿದ್ದಾರೆ. ಸದ್ಯಕ್ಕೆ ಪೆಟ್ರೋಲ್ ಮೇಲಿನ ಒಟ್ಟು ಅಬಕಾರಿ ಪ್ರಮಾಣವು ಲೀಟರ್‌ಗೆ 27.90 ರೂಪಾಯಿ ಮತ್ತು ಡೀಸೆಲ್‌ನ ಮೇಲೆ 21.80 ರೂಪಾಯಿ ಆಗಿದ್ದರೆ, ರಾಜ್ಯಗಳು ಮೂಲ ಅಬಕಾರಿ ಸುಂಕದಿಂದ ಮಾತ್ರ ಪಾಲನ್ನು ಪಡೆಯಲು ಅರ್ಹವಾಗಿವೆ.

ತೆರಿಗೆಯ ಒಟ್ಟು ಪಾಲಿನಲ್ಲಿ ಪೆಟ್ರೋಲ್ ಮೇಲಿನ ಮೂಲ ಅಬಕಾರಿ ಸುಂಕವು ಲೀಟರ್‌ಗೆ 1.40 ರೂಪಾಯಿ ಇದೆ. ಇದರ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 11 ರೂಜ್ಞಆಯಿ ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಸೆಸ್ 13 ರೂ., ಇದರ ಮೇಲೆ ರೂ. 2.50 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಲಾಗುತ್ತದೆ. ಅದೇ ರೀತಿ ಡೀಸೆಲ್ ಮೇಲೆ ಮೂಲ ಅಬಕಾರಿ ಸುಂಕ 1.80 ರೂ., ಪ್ರತಿ ಲೀಟರ್‌ಗೆ ರೂ. 8 ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಸೆಸ್‌ನಂತೆ ವಿಧಿಸಲಾಗುತ್ತದೆ. ಪ್ರತಿ ಲೀಟರ್‌ಗೆ ರೂ. 4 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಸಹ ವಿಧಿಸಲಾಗುತ್ತದೆ.

“ಹಣಕಾಸು ಆಯೋಗವು ಕಾಲಕಾಲಕ್ಕೆ ನಿಗದಿಪಡಿಸಿದ ಸೂತ್ರದ ಆಧಾರದ ಮೇಲೆ ಮೂಲ ಅಬಕಾರಿ ಸುಂಕದ ಅಂಶದಿಂದ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗಿದೆ. ಸದ್ಯಕ್ಕೆ, ಮೂಲ ಅಬಕಾರಿ ಸುಂಕದ ದರವು ಪ್ರತಿ ಲೀಟರ್‌ ಪೆಟ್ರೋಲ್‌ಗೆ ರೂ 1.40 ಮತ್ತು ಡೀಸೆಲ್ ಮೇಲೆ ರೂ. 1.80 ಆಗಿದೆ,” ಅವರು ಹೇಳಿದ್ದಾರೆ. 2016-17ರಲ್ಲಿ ಇಂಧನದಿಂದ ಒಟ್ಟು ಅಬಕಾರಿ ಸಂಗ್ರಹವು 2.22 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ನಂತರದ ವರ್ಷದಲ್ಲಿ ಇದು 2.25 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು. ಆದರೆ 2018-19ರಲ್ಲಿ ರೂ.2.13 ಲಕ್ಷ ಕೋಟಿಗೆ ಕುಸಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ಪ್ರಸ್ತುತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದ ಅಡಿಯಲ್ಲಿ ಇಲ್ಲ. ಮತ್ತು ಕೇಂದ್ರವು ವಿಧಿಸುವ ಅಬಕಾರಿ ಸುಂಕದ ಮೇಲೆ ರಾಜ್ಯಗಳು ವ್ಯಾಟ್ ಅನ್ನು ವಿಧಿಸುತ್ತವೆ.

“ಎಪ್ರಿಲ್ 2016ರಿಂದ ಮಾರ್ಚ್ 2021ರವರೆಗೆ ವಿವಿಧ ರಾಜ್ಯಗಳಲ್ಲಿ ಇಂಧನದ ಮೇಲಿನ ವ್ಯಾಟ್ ಅಡಿಯಲ್ಲಿ ಸಂಗ್ರಹಿಸಲಾದ ಒಟ್ಟು ತೆರಿಗೆ ಮೊತ್ತವು 9.57 ಲಕ್ಷ ಕೋಟಿ ರೂಪಾಯಿಗಳು,” ಎಂದು ಅವರು ಹೇಳಿದ್ದಾರೆ. ಸಚಿವರ ಉತ್ತರದ ಪ್ರಕಾರ, ಇದೇ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸಿದ ಮೊತ್ತ 12.11 ಲಕ್ಷ ಕೋಟಿ ರೂಪಾಯಿ.

ಇದನ್ನೂ ಓದಿ: GST: ಸದ್ಯ ಪೆಟ್ರೋಲ್ ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

TV9 Kannada


Leave a Reply

Your email address will not be published. Required fields are marked *