ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ 45 ಸಾವಿರ ಕೋಟಿ ರೂಪಾಯಿ ಹೊರೆ | Central Government Excise Duty Cut On Petrol And Diesel Cost Rs 45000 Crore To Exchequer


ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ 45 ಸಾವಿರ ಕೋಟಿ ರೂಪಾಯಿ ಹೊರೆ

ಸಾಂದರ್ಭಿಕ ಚಿತ್ರ

ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದರಿಂದ ಕೇಂದ್ರ ಸರ್ಕಾರವು 45,000 ಕೋಟಿ ರೂಪಾಯಿ ಭರಿಸಬೇಕಾಗುತ್ತದೆ. ಕೇಂದ್ರದ ವಿತ್ತೀಯ ಕೊರತೆ ಶೇಕಡಾ 0.3ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿದೇಶೀ ಬ್ರೋಕರೇಜ್ ಗುರುವಾರ ತಿಳಿಸಿದೆ. ಒಟ್ಟಾರೆ ಬಳಕೆ ವಿಚಾರ ಅಂತ ನೋಡಿದರೆ, ಈಗಿನ ಅಚ್ಚರಿಯ ನಿರ್ಧಾರವು ಪೆಟ್ರೋಲ್​ ಬಂಕ್​ಗಳಲ್ಲಿ​ ಗ್ರಾಹಕರು ಹೆಚ್ಚು ಪಾವತಿಸಿ, ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದ ತಿಂಗಳುಗಳ ನಂತರ ಬಂದಿದೆ. ಈ ಆಶ್ಚರ್ಯಕರ ಕ್ರಮದಿಂದ ಆಗುವ ವೆಚ್ಚವು ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 1 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ 0.45 ರಷ್ಟಾಗುತ್ತದೆ ಎಂದು ಜಪಾನಿನ ಬ್ರೋಕರೇಜ್ ನೋಮುರಾ ಅರ್ಥಶಾಸ್ತ್ರಜ್ಞರು ವರದಿಯೊಂದರಲ್ಲಿ ತಿಳಿಸಿದ್ದಾರೆ. FY22ರ ಉಳಿದ ತಿಂಗಳಿಗೆ ವೆಚ್ಚವು 45,000 ಕೋಟಿ ರೂಪಾಯಿಗಳಿಗೆ ಬರಲಿದೆ. ಇದು ವಿತ್ತೀಯ ಕೊರತೆ ಗುರಿಯ ಮೇಲ್ಮುಖ ಪರಿಶೀಲನೆಗೆ ಕಾರಣ ಆಗುತ್ತದೆ. ವಿತ್ತೀಯ ಕೊರತೆಯು ಮುಂಚಿನ ಶೇ 6.2ಕ್ಕೆ ವಿರುದ್ಧವಾಗಿ ಈಗ ಶೇ 6.5ಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಎಂದು ಬ್ರೋಕರೇಜ್ ಹೇಳಿದೆ. ಇಷ್ಟಾದರೂ ಈ ಮಟ್ಟವು ಬಜೆಟ್ ವೇಳೆ ಅಂದಾಜಿಸಿದ್ದ ಶೇ 6.8ರ ಗುರಿಗಿಂತ ಕಡಿಮೆ ಇರುತ್ತದೆ ಎಂದು ಒತ್ತಿಹೇಳಿದೆ.

ದೀಪಾವಳಿಯ ಮುನ್ನಾ ದಿನದ ಬುಧವಾರದಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದೆ. ತೈಲ ಬೆಲೆಯಲ್ಲಿನ ತೀಕ್ಷ್ಣ ಕುಸಿತದ ನಂತರ ಕೂಡ 2020ರಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 13 ರೂಪಾಯಿ ಮತ್ತು ಡೀಸೆಲ್‌ಗೆ 16 ರೂಪಾಯಿಗಳಷ್ಟು ಮಾಡಿದ್ದ ಸುಂಕದ ಹೆಚ್ಚಳವನ್ನು ಈ ಕ್ರಮವು ಭಾಗಶಃ ಕಡಿಮೆ ಆಗಿಸುತ್ತದೆ. ಕಚ್ಚಾ ತೈಲ ದರಗಳು ಏರಿಕೆಯಾಗಿ, ರೀಟೇಲ್ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಬಂದ ವೇಳೆಯಲ್ಲಿ ಈ ತೀರ್ಮಾನವು ಬಂದಿದೆ, ಎಂದು ಹೇಳಲಾಗಿದೆ.

H1FY21ರಲ್ಲಿ ಬಜೆಟ್‌ನ ಶೇಕಡಾ 15ರಷ್ಟು ಅಧಿಕ ಖರ್ಚಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಇದುವರೆಗೆ ಸರ್ಕಾರವು “ಮಿತವಾಗಿ” ಖರ್ಚು ಮಾಡಿರುವುದು H1FY22ನಲ್ಲಿನ ಹಣಕಾಸಿನ ಕೊರತೆಯನ್ನು ಬಜೆಟ್ ಗುರಿಯ ಶೇ 35ಕ್ಕೆ ಮಿತಿಗೊಳಿಸಲು ಸಹಾಯ ಮಾಡಿದೆ ಎಂದು ಬ್ರೋಕರೇಜ್ ಹೇಳಿದೆ. ತೆರಿಗೆ ಕಡಿತಗಳು ನೇರ ಪರಿಣಾಮಗಳಿಂದಾಗಿ ಶೇ 0.14 ಪಾಯಿಂಟ್‌ಗಳಿಂದ CPI ಹಣದುಬ್ಬರವನ್ನು ಕಡಿಮೆ ಮಾಡಬೇಕು ಮತ್ತು ಒಂದು ವೇಳೆ ಪರೋಕ್ಷ ಪರಿಣಾಮಗಳನ್ನು ಒಳಗೊಂಡಿದ್ದರೆ ಶೇ 0.3 ಶೇಕಡಾ ಪಾಯಿಂಟ್‌ಗಳವರೆಗೆ ಆಗಬೇಕು.

ಆದರೂ ಹೆಚ್ಚಿದ ಇನ್‌ಪುಟ್ ವೆಚ್ಚಗಳು, ಪುನಃ ಆರಂಭಿಸಬೇಕಾದ ಒತ್ತಡ ಮತ್ತು ಈಗಿನ ಇಂಧನ ಬಿಕ್ಕಟ್ಟಿನಿಂದ ಸಾಧ್ಯತೆಗಳನ್ನು ತೆರೆದಿಡುತ್ತಿದೆ ಎಂದು ಅದು ಹೇಳಿದೆ. ರಾಜಕೀಯವಾಗಿ, ಹೆಚ್ಚಿನ ಹಣದುಬ್ಬರವು ಮತದಾರರ ಮನಸ್ಸಿನಲ್ಲಿರುವ ಆತಂಕಗಳಲ್ಲಿ ಒಂದಾಗಿದೆ. ಈ ಕ್ರಮಗಳು ಮತದಾರರ ಅಸಮಾಧಾನವನ್ನು ದೂರವಿರಿಸಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ. ಈ ಕ್ರಮದ ಮುಂದಿನ ಸಮಯದಲ್ಲಿ ಬಳಕೆಗೆ ಸಹಾಯ ಮಾಡುತ್ತದೆ ಎಂದು ಬ್ರೋಕರೇಜ್ ಹೇಳಿದೆ. FY22ಕ್ಕಾಗಿ ಅದರ ನೈಜ GDP ಬೆಳವಣಿಗೆ ಶೇ 9.2ರಷ್ಟು ಉಳಿಸಿಕೊಂಡಿದೆ. ಇದು ಸ್ವಲ್ಪ ಪ್ರಮಾಣದಲ್ಲಿ ವಿತ್ತೀಯ ನೀತಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಆದರೆ ಮುಂದುವರಿದ ಬೆಳವಣಿಗೆಯ ಚೇತರಿಕೆ ಮಧ್ಯೆ ಹಣದುಬ್ಬರದ ಒತ್ತಡಗಳು ವಿಸ್ತರಿಸುವುದರಿಂದ ಕೇಂದ್ರೀಯ ಬ್ಯಾಂಕ್ ಸಾಮಾನ್ಯ ಸ್ಥಿತಿಗೆ ತರುವುದಕ್ಕೆ ಮಾಡುವ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಮ್ಮ ನಿಯಂತ್ರಣದಲ್ಲಿಲ್ಲ, ಆದರೂ ಪ್ರಧಾನಿ ಮೋದಿ ಕಡಿಮೆ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

Excise Duty Cut On Petrol, Diesel: ಪೆಟ್ರೋಲ್, ಡೀಸೆಲ್ ಅಬಕಾರಿ ಕಡಿತ ಸುಂಕವನ್ನು ಸಾಧ್ಯವಾಗಿಸಿದ ಮೋದಿ ಸರ್ಕಾರದ ಆರ್ಥಿಕ ಶಿಸ್ತು

TV9 Kannada


Leave a Reply

Your email address will not be published. Required fields are marked *