ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಬ್ಸಿಡಿ ನೀಡಲು ನಮ್ಮ ಸರ್ಕಾರ ₹ 1,500 ಕೋಟಿ ಖರ್ಚು ಮಾಡಿದೆ: ಮಮತಾ ಬ್ಯಾನರ್ಜಿ | West Bengal spent Rs1,500 crore in the last three years to subsidise petrol and diesel prices says Mamata Banerjee


ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಬ್ಸಿಡಿ ನೀಡಲು ನಮ್ಮ ಸರ್ಕಾರ  ₹ 1,500 ಕೋಟಿ ಖರ್ಚು ಮಾಡಿದೆ: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಬ್ಸಿಡಿ ನೀಡಲು ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ₹ 1,500 ಕೋಟಿ ಖರ್ಚು ಮಾಡಿದೆ ಎಂದು ಹೇಳಿದ್ದಾರೆ. ಬುಧವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಮೋದಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಇಂಧನ ಬೆಲೆಗಳನ್ನು ಟೀಕಿಸಿದ್ದರು. “ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಇಂದಿನ ಸಂವಾದವು ಸಂಪೂರ್ಣವಾಗಿ ಏಕಪಕ್ಷೀಯ ಮತ್ತು ತಪ್ಪುದಾರಿಗೆಳೆಯುವಂತಿದೆ. ಅವರು ಹಂಚಿಕೊಂಡ ಸಂಗತಿಗಳು ತಪ್ಪಾಗಿದೆ. ನಾವು ಕಳೆದ ಮೂರು ವರ್ಷಗಳಿಂದ ಪ್ರತಿ ಲೀಟರ್ ಪೆಟ್ರೋಲ್ (petrol) ಮತ್ತು ಡೀಸೆಲ್‌ಗೆ (diesel)ರೂ 1 ಸಬ್ಸಿಡಿ ನೀಡುತ್ತಿದ್ದೇವೆ. ನಾವು ಇದಕ್ಕಾಗಿ  ₹1,500 ಕೋಟಿ ರೂ ವ್ಯಯಿಸಿದ್ದೇವೆ ಎಂದು ಬ್ಯಾನರ್ಜಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶವಿಲ್ಲ ಮತ್ತು ಆದ್ದರಿಂದ ಅವರು ಪ್ರಧಾನಿ ಹೇಳಿಕೆಯನ್ನು ಎದುರಿಸಲು ಸಾಧ್ಯವಿಲ್ಲ. ಕೊವಿಡ್-19 ಪರಿಶೀಲನಾ ಸಭೆಯಲ್ಲಿ ಪ್ರಧಾನಿಯವರು ಇಂಧನ ಬೆಲೆ ಏರಿಕೆಯ ಬಗ್ಗೆ ಮಾತನಾಡಬಾರದಿತ್ತು. ಆದರೆ ಅದು ಅವರ ಕಾರ್ಯಸೂಚಿಯಾಗಿತ್ತು ಎಂದು ಮಮತಾ ಹೇಳಿದ್ದಾರೆ.  ಇತರ ವಿರೋಧ ಪಕ್ಷಗಳು ಕೂಡ ಮೋದಿಯವರು ತಮ್ಮ ಸಭೆಯ ಸಮಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಕಾರ್ಯವನ್ನು ರಾಜ್ಯಗಳ ತಲೆ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೇಂದ್ರವು ರಾಜ್ಯಕ್ಕೆ ₹ 26,500 ಕೋಟಿ ಬಾಕಿ ಉಳಿಸಿಕೊಂಡಿದೆ. ರಾಜ್ಯವನ್ನು ಮಲತಾಯಿಯಂತೆ ನಡೆಸಿಕೊಳ್ಳುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಮಹಾರಾಷ್ಟ್ರ ಕಾರಣವಲ್ಲ ಎಂದು ಆರೋಪಿಸಿದರು.

“ಮೋದಿ ಜೀ, ಯಾವುದೇ ಟೀಕೆಗಳಿಲ್ಲ, ಗೊಂದಲವಿಲ್ಲ, ಜುಮ್ಲಾಗಳಿಲ್ಲ! ದಯವಿಟ್ಟು ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಸಂಗ್ರಹಿಸಿರುವ ₹27 ಲಕ್ಷ ಕೋಟಿ ಲೆಕ್ಕವನ್ನು ಕೊಡಿ   ಎಂದು ಸುರ್ಜೇವಾಲಾ ಹೇಳಿದರು.

ಮೇ 26, 2014 ರಂದು ಮೋದಿ ಅವರು ಅಧಿಕಾರ ವಹಿಸಿಕೊಂಡಾಗ, ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 108 ಅಮೆರಿಕನ್ ಡಾಲರ್ ಆಗಿತ್ತು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹71.41 ಮತ್ತು ₹ 55.49 ಇತ್ತು, ಆದರೆ ಇಂದು, ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಯುಎಸ್ ಡಿ 100.20 ಆಗಿದೆ, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೆಹಲಿಯಲ್ಲಿ ಕ್ರಮವಾಗಿ ₹105.41/ಲೀಟರ್ ಮತ್ತು ₹96.67/ಲೀಟರ್‌ಗೆ ಹೆಚ್ಚಿಸಲಾಗಿದೆ ಎಂದಿದ್ದಾರೆ ಸುರ್ಜೇವಾಲಾ.

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಜಕೀಯದ ಬಗ್ಗೆ ಕೊವಿಡ್ ಸಭೆಯನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಜಾರ್ಖಂಡ್‌ನ ಮುಖ್ಯಮಂತ್ರಿಗಳು ಬೂಟಾಟಿಕೆಯಿಂದ ಕೂಡಿದ್ದಾರೆ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published.