ಶ್ರೀಲೇಶ್ ಎಸ್ ನಾಯರ್ ಅವರ 'ಪೆಪೆ' ಹೊಸ ಚಿತ್ರದಲ್ಲಿ  ವಿನಯ್ ರಾಜ್ ಕುಮಾರ್ ಅವರಿಗೆ ಕಾಜಲ್ ಕುಂದರ್ ಜೋಡಿಯಾಗಲಿದ್ದಾರೆ. ಕೊಡಗಿನಲ್ಲಿ ನಡೆದ ಮೊದಲ ಶೆಡ್ಯೂಲ್ ನಲ್ಲಿ ನಟಿ ಭಾಗಿಯಾಗಿದ್ದರು. ಉದಯ್ ಶಂಕರ್, ನಿಜಗುಣಗುರುಸ್ವಾಮಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಅವರ ಫಸ್ಟ್ ಲುಕ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಪೋಸ್ಟರ್‌ನಲ್ಲಿ ರಕ್ತಸಿಕ್ತ ಮತ್ತು ಭೀತಿ ಸೃಷ್ಟಿಸುವ ಅವತಾರದಲ್ಲಿ ನಾಯಕ ನಟ ಕಾಣಿಸಿಕೊಂಡಿದ್ದಾರೆ.

ಸಧ್ಯವೇ ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದ್ದು ಸೋಮವಾರ ವಿನಯ್ ಹಾಗೂ ಕಾಜಲ್ ಡಬ್ಬಿಂಗ್ ಸ್ಟುಡಿಯೊದಲ್ಲಿದ್ದರು. "ಪೆಪೆ" ಚಿತ್ರಕ್ಕೆ ಸಮರ್ಥ್ ಉಪಾಧ್ಯಾಯ ಕ್ಯಾಮೆರಾ ಕೆಲಸ ಮಾಡಿದ್ದು ಸಂಗೀತ ನಿರ್ದೇಶಕರಾರು ಎನ್ನುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

ಮುಂಬೈ ಮೂಲದ ಕಾಜಲ್ ತುಳು ಮತ್ತು ಮರಾಠಿ ಚಿತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಜಾಹೀರಾತುಗಳು ಮತ್ತು ಹಿಂದಿ ಧಾರಾವಾಹಿಗಳ ಭಾಗವಾಗಿದ್ದ ಅವರು "ಮಾಯಾ ಕನ್ನಡಿ" ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. "ಪೆಪೆ" ಜತೆಗೆ ಕಾಜಲ್ ದೀಕ್ಷಿ ಶೆಟ್ಟಿಯವರ "ಕೆಟಿಎಂ" ಚಿತ್ರದ ಭಾಗವಾಗಿ ಸಹ ಅಭಿನಯಿಸಿದ್ದಾರೆ.

ವಿನಯ್ ಪ್ರಸ್ತುತ ತಮ್ಮ "10" ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ "ಅಂದೊಂದಿತ್ತು ಕಾಲ" ಚಿತ್ರದ ಶೂಟಿಂಗ್ ನಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More