ಧಾರವಾಡ: ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಪೆರೋಲ್ ಸಿಕ್ಕರೂ ಮನೆಗೆ ಹೋಗಲು ನಿರಾಕರಿಸುತ್ತಿದ್ದಾರೆ ಎಂಬ ಅಚ್ಚರಿ ಮಾಹಿತಿ ಲಭಿಸಿದೆ.

ಕಾರಾಗೃಹದಲ್ಲಿರುವ ಒಟ್ಟು 33 ಕೈದಿಗಳಿಗೆ ಕೋರ್ಟ್ ಮೂಲಕ ಪೆರೋಲ್​​ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಪೆರೋಲ್ ಪಡೆದು ಇದುವರೆಗೂ ಕೇವಲ 13 ಮಂದಿ ಮಾತ್ರ ಮನೆಗೆ ತೆರಳಿದ್ದಾರೆ. ಉಳಿದವರು ಪೆರೋಲ್ ಸಿಕ್ಕರೂ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಕೈದಿಗಳು ಮನೆಗೆ ಹೋಗಲು ಹಿಂದೇಟು ಹಾಕಲು ಕೊರೊನಾವೇ ಪ್ರಮುಖ ಕಾರಣ ಎನ್ನಲಾಗಿದೆ. ಜೈಲೇ ನಮಗೆ ಸುರಕ್ಷಿತವಾಗಿದೆ ಎಂದು 20 ಜನ ಖೈದಿಗಳು 90 ದಿನಗಳ ಪೆರೋಲ್​​​ ಅವಧಿಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೊರಗೆ ಕೊರೊನಾ ಇದೆ ನಾವು ಹೋಗಲ್ಲ ಎಂದು ಕೊರೊನಾ ಭಯದ ನಡುವೆಯೇ ಪೆರೋಲ್ ತಿರಸ್ಕರಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೂಡ ಕೊರೊನಾ ಸೋಂಕಿನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗದ ಕಾರಣ ಲಾಕ್​​ಡೌನ್ ಅವಧಿಯನ್ನು ಜೂನ್ 14ರವರೆಗೂ ವಿಸ್ತರಿಸಿದೆ.

The post ಪೆರೋಲ್ ಸಿಕ್ಕರೂ ಮನೆಗೆ ಹೋಗಲ್ಲ ಅಂತಿದ್ದಾರೆ ಕೈದಿಗಳು.. ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link