ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ


ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿಯ ರಕ್ತವನ್ನ ಕುಡೀತಾರಾ? ಲಿವರ್​ನ ತಿನ್ನುತ್ತಾರಾ?  ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮುಂದುವರೆದು ಮಾತನಾಡುತ್ತಿದ್ದ ಅವರು, ಡೆಮಾಕ್ರಸಿ ಇಂದು ಧರ್ಮಾಕ್ರಸಿ ಆಗುತ್ತಿದೆ. ಪೇಜಾವರ ಶ್ರೀಗಳು ದಲಿತರ ಮನೆಗೋಗುವುದು ಹೆಚ್ಚುಗಾರಿಕೆಯಲ್ಲ
ಅವರ ಮನೆಯಲ್ಲಿ ಕೊಡುವ ಕೋಳಿಯನ್ನ ತಿನ್ನುವುದಕ್ಕೆ ಆಗುತ್ತದಾ? ಅವರುಗಳು ಕುರಿಯ ರಕ್ತವನ್ನ ಕೊಟ್ಟರೆ ಕುಡಿಯುವುದಕ್ಕೆ ಆಗುತ್ತಾ? ಕುರಿಯ ಲಿವರ್ ಕೊಟ್ಟರೆ ತಿನ್ನಲು ಆಗುತ್ತಾ ಅಂತ ಪ್ರಶ್ನಿಸಿದ್ದಾರೆ.

ಹಿನ್ನೆಲೆ ಏನು?

ಜಾತೀಯತೆಯ ಜಾಡ್ಯ ನಮ್ಮ ಸಮಾಜದಲ್ಲಿ ಬಿಟ್ಟರೂ ಬಿಡದೀ ಮಾಯೆ ಅನ್ನೋ ಹಾಗೆ ತುಂಬಿಕೊಳ್ಳುತ್ತಲೇ ಇದೆ.. ಬಡವರ ಮೇಲೆ ದಲಿತರ ಮೇಲೆ ಸೋಷಣೆ, ಅಸ್ಪೃಷ್ಯತೆ ಇಂದಿಗೂ ನಮ್ಮ ಸಮಾಜವನ್ನ ಕಾಡುತ್ತಿರುವ ಪಿಡುಗೇ ಸರಿ. ಇಂಥ ಪಿಡುಗನ್ನ ಕಿತ್ತು ಹಾಕಲು ಸಾಕಷ್ಟು ಮಹಾತ್ಮರು, ಹೋರಾಟಗಾರರು ನಿರಂತರ ಪ್ರಯತ್ನವನ್ನ ನಡೆಸಿಕೊಂಡು ಬರುತ್ತಿದ್ದಾರೆ. ಅದ್ರಲ್ಲೂ ತೀರ್ಥ ಸ್ವರೂಪರಾದ ಶ್ರೀ ವಿಶ್ವೇಷ ತೀರ್ಥ ಪಾದಂಗಳರು 60ರ ದಶಕದಲ್ಲಿ ದಲಿತ ಕೇರಿಗೆ ಭೇಟಿ ನೀಡಿ, ದೀಕ್ಷೆ ನೀಡುವ ಕಾರ್ಯಕ್ರಮವನ್ನ ಆರಂಭಿಸಿದ್ರು. ಅದು ಸಾಕಷ್ಟು ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣವಾಗಿತ್ತು. ಅವರು ದೀಕ್ಷೆ ನೀಡಿದ ಪ್ರಮುಖ ಹಿಂದುಳಿದ ನಾಯಕಿ ಉಮಾ ಭಾರತಿ ಅವರು ಆಗಿದ್ದರು ಅನ್ನೋದು ವಿಶೇಷ. ಅದರ ಮುಂದುವರೆದ ಭಾಗದಲ್ಲಿಯೇ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳನ್ನು ಅಗ್ರಹಾರಕ್ಕೆ ಆಹ್ವಾನಿಸಿ ಅವರ ಪಾದ ಪೂಜೆಯನ್ನ ಬ್ರಾಹ್ಮಣರೂ ನಡೆಸಿದ್ದರು. ಸದ್ಯ ಅದೇ ಸಂಪ್ರದಾಯವನ್ನ ಈಗಿನ ಪೇಜಾವರ ಶ್ರೀಗಳೂ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ಹಂಸ ಲೇಖ ವಿವಾದದ ಕಿಡಿಯನ್ನ ಹಚ್ಚಿದ್ದಾರೆ.

ಇತ್ತೀಚೆಗೆ ದಲಿತರ ಮನೆಯಲ್ಲಿ ಶ್ರೀ ಕೃಷ್ಣನ್ನನ್ನ ಪೂಜಿಸಿ ದೀಪಾವಳೀ ಆಚರಿಸಿದ್ದ ಈಗಿನ ಪೇಜಾವರ ಶ್ರೀ

ಆಹಾರ ಪದ್ಧತಿ ವೈಯಕ್ತಿಕ ಆಯ್ಕೆ ಅಲ್ಲವೇ? 

ಹಾಗೆ ನೋಡಿದ್ರೆ ಆಹಾರ ಆಯ್ದೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕು ಎಂದೇ ಪ್ರತಿಪಾದಿಸಲಾಗುತ್ತೆ. ಹೀಗಿದ್ದೂ ಅಲ್ಲದೇ, ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಷಯವೇನಲ್ಲ. ಉಳ್ಳವರ ಮನೆಗೆ ದಲಿತರು ಹೋಗುವಂತೆ ಆಗಬೇಕು. ಬಲಿತರು ದಲಿತರನ್ನ ತಮ್ಮ ಮನೆಗೆ ಕರೆದೊಯ್ದು ಊಟ ಬಡಿಸಬೇಕು, ಅವರು ಊಟವನ್ನ ಬಡಿಸಿದರೆ ಅದು ದೊಡ್ಡ ವಿಷಯವಾಗುತ್ತದೆ ಎಂದೂ ಮೈಸೂರಿನಲ್ಲಿ ತಮ್ಮ ಅಭಿಪ್ರಾಯವನ್ನ ಹಂಸಲೇಖ ವ್ಯಕ್ತಪಡಿಸಿದ್ದಾರೆ.

ಭಗವದ್ಗೀತೆ ಬಗ್ಗೆ ಪ್ರಶ್ನೆ
ಇಂದು ವಿಶ್ವಾದ್ಯಂತ ಭಗವದ್ಗೀತೆಯನ್ನ ಆಧ್ಯಾತ್ಮ ಗ್ರಂಥವಾಗಿ, ಮ್ಯಾನೇಜ್​ಮೆಂಟ್ ಕೋರ್ಸ್​ ಆಗಿ, ಪರ್ಸನಾಲಿಟಿ ಡೆವೆಲಪ್​ಮೆಂಟ್ ಸೂತ್ರವಾಗಿ ಹಲವಾರು ಧಾರ್ಮಿಕ ಕ್ಷೇತ್ರಗಳು, ಮ್ಯಾನೇಜ್​ಮೆಂಟ್​ ಇನ್​ಸ್ಟೀಟ್ಯೂಟ್​​ಗಳಲ್ಲಿ ಬಳಸಲಾಗುತ್ತಿದೆ ಅನ್ನೋದು ವಿಷಯ. ಆದ್ರೆ ಭಗವದ್ಗೀತೆ ಬಗ್ಗೆ ಸ್ವತಃ ಹಂಸಲೇಖ ಮಾರ್ಮಿಕವಾಗಿ ಮಾತನಾಡಿರುವ ಹಂಸಲೇಖ, ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ. ಅಂಬೇಡ್ಕರ್ ಕೊಟ್ಟ ಬಡವರ ಗೀತೆ ದಲಿತರಿಗೆ ಹೆಚ್ಚು ಸಹಾಯವಾಗಿದೆ. ಅದರಿಂದ ನಾವು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರ ಬಂದಿದ್ದೇವೆ, ಡೆಮಾಕ್ರಸಿ ಧರ್ಮಾಕ್ರಸಿ ಆಗುತ್ತೆ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ ಎಂದು ಃಏಳೀರುವ ಹಂಸಲೇಖ, ಆ ರೀತಿಯೇನಾದ್ರೂ ಆದರೆ ಹಳೆಯದಕ್ಕೇ ಮತ್ತೆ ಜಾರಿ ಬೀಳುತ್ತದೆ.. ಪ್ರಜಾಪ್ರಭುತ್ವವನ್ನ ಉಳಿಸಲು ನಾವು ಎಚ್ಚರದಿಂದ ಇರಬೇಕಾಗಿದೆ ಎಂದೂ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಚರ್ಚೆ
ಇನ್ನು ಹಂಸಲೇಖರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾವು ಇಷ್ಟು ದಿನ ಹಂಸಲೇಖ ಯಾವ ಜಾತಿ ಅಂತಾ ಎಂದೂ ಯೋಚಿಸಿರಲಿಲ್ಲ ಅವರ ಸಂಗೀತವನ್ನ ಆಸ್ವಾದಿಸಿದ್ದೆವು.. ಅವರು ಈ ರೀತಿ ಮಾತನಾಡಿ ಅಸಂಖ್ಯೆ ಜನರಿಗೆ ನೋವು ತಂದಿದ್ದಾರೆ ಎಂದು ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಹಾತ್ಮಾ ಗಾಂಧೀಜಿ ಕೂಡ ಅಂಹಿಸೆಯನ್ನ ಪ್ರತಿಪಾದಿಸುತ್ತಿದ್ದರು. ಜೊತೆಗೆ ಹಿಂದುಳಿದ ವರ್ಗಗಳ ಏಳ್ಗೆಗಾಗಿ ಸಾಕಷ್ಟು ಕಾರ್ಯವನ್ನೂ ಮಾಡಿದ್ರು.. ಅವರನ್ನೂ ಹೀಗೆ ಪ್ರಶ್ನಿಸಲಾಗುತ್ತದೆಯೇ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಜೊತೆಗೆ, ಅವರ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ ಅನ್ನೋ ಸಮರ್ಥನೆ ಕೂಡ ಸಾಕಷ್ಟು ವ್ಯಕ್ತವಾಗಿದೆ.

News First Live Kannada


Leave a Reply

Your email address will not be published. Required fields are marked *