ಪೇಜಾವರ ಶ್ರೀ ಕುರಿತ ಹೇಳಿಕೆ; ಹಂಸಲೇಖರಿಗೆ ಮಾರ್ಮಿಕವಾಗಿ ತಿವಿದ್ರು ಜಗ್ಗೇಶ್​​


ಬೆಂಗಳೂರು:​​ ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ‘ನಾದಬ್ರಹ್ಮ’ ಡಾ. ಹಂಸಲೇಖ ಅವರು ನೀಡಿರುವ ಹೇಳಿಕೆಗೆ ನಟ ಜಗ್ಗೇಶ್​​ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಜಗ್ಗೇಶ್​​, ಮಾತು ಬಲ್ಲವನಿಗೆ ಚಪ್ಪಾಳೆ ಮೃಷ್ಟಾನ್ನದಂತೆ ಆದರು ಆ ಮಾತು ಹೊಟ್ಟೆತುಂಬಿಸದು. ಮಾತು ಕೆಟ್ಟರೆ ಆ ಮೃಷ್ಟಾನ್ನವೇ ವಿಷವಾಗಿ ಅಜೀರ್ಣ ಆಗುವುದು. ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ! ಪಡೆವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು ಎಂದು ಬರೆದುಕೊಳ್ಳುವ ಮೂಲಕ ಮಾರ್ಮಿಕವಾಗಿ ಹಂಸಲೇಖರಿಗೆ ತಿವಿದಿದ್ದಾರೆ.

ಇನ್ನು ಬಸವಣ್ಣನವರ ವಚನದ ಮೂಲತ ಹಂಸಲೇಖರಿಗೆ ಕಿವಿಮಾತು ಹೇಳಿರುವ ಜಗ್ಗೇಶ್​​​, ಲೋಕದ ಡೊಂಕ ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ! ಕೂಡಲಸಂಗಮದೇವ ಎಂಬ ವಚನ ಪೋಸ್ಟ್​ ಮಾಡಿದ್ದಾರೆ.

ಮುಂದುವರಿದು, ಗೀತವ ಬಲ್ಲಾತ ಜಾಣನಲ್ಲ. ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು. ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು. ಜಂಗಮಕ್ಕೆ ಸವೆಸುವಾತ ಆತ ಜಾಣನು. ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು ಎಂದು ಮತ್ತೊಂದು ವಚನ ಪೋಸ್ಟ್​ ಮಾಡಿದ್ದಾರೆ. ಕೊನೆಗೆ, ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ ಎಂದು ತಿರುಗೇಟು ನೀಡಿದ್ದಾರೆ.

ಏನಂದಿದ್ರು ಹಂಸಲೇಖ..?

ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ

ನಾದಬ್ರಹ್ಮ ಹಂಸಲೇಖ ಅವರನ್ನ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ..‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದರು..’ ಎಂದಿದ್ದರು.

ಇದನ್ನೂ ಓದಿ: ದಲಿತರ ಮನೆಯಲ್ಲಿ ಪೇಜಾವರ ಶ್ರೀ ಕೋಳಿ ತಿಂತಾರಾ ಹೇಳಿಕೆ; ಕ್ಷಮೆ ಕೇಳಿದ ಹಂಸಲೇಖ

News First Live Kannada


Leave a Reply

Your email address will not be published. Required fields are marked *