ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ | After Listing Paytm Former And Current Employees 350 People Will Become Millionaires


ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ

ಸಾಂದರ್ಭಿಕ ಚಿತ್ರ

ಪೇಟಿಎಂ ಕಂಪೆನಿಯ 250 ಕೋಟಿ ಅಮೆರಿಕನ್ ಡಾಲರ್​ನ ಐಪಿಒಗೆ ಕೆಲವರು ಧನ್ಯವಾದಗಳು ಅಂತ ಹೇಳಲೇಬೇಕಿದೆ. ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಪ್ಲಾಟ್​ಫಾರ್ಮ್​ ಪೇಟಿಎಂನ ಸುಮಾರು 350 ಮಾಜಿ ಹಾಗೂ ಸದ್ಯದ ಉದ್ಯೋಗಿಗಳು ಕೋಟ್ಯಧಿಪತಿಗಳಾಗಲು ಸಿದ್ಧರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಈ ಪ್ರತಿಯೊಬ್ಬ ಪೇಟಿಎಂ ಉದ್ಯೋಗಿ ಈಗ ಕನಿಷ್ಠ 1 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಲಿದ್ದಾರೆ. ಗಮನಾರ್ಹ ಅಂಶ ಏನೆಂದರೆ, ರೂ. 18,300 ಕೋಟಿ ಷೇರು ಮಾರಾಟದೊಂದಿಗೆ ಪೇಟಿಎಂ ಐಪಿಒ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಅತಿದೊಡ್ಡ ಫಿನ್‌ಟೆಕ್ ಐಪಿಒ ಆಗಿದೆ.

ತಂದೆಯ ಆಕ್ಷೇಪಣೆ ಹೊರತಾಗಿಯೂ ಒಂಬತ್ತು ವರ್ಷಗಳ ಹಿಂದೆ ಪೇಟಿಎಂಗೆ ಸೇರಿದ್ದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಸಿದ್ಧಾರ್ಥ್ ಪಾಂಡೆ, ಮುಂದಿನ ವಾರ ಕಂಪೆನಿಯು ಲಿಸ್ಟಿಂಗ್ ಮಾಡಿದ ನಂತರ ಕೋಟ್ಯಧಿಪತಿ ಆಗಲು ಸಿದ್ಧರಾಗಿರುವವರಲ್ಲಿ ಒಬ್ಬರು. ಆ ಸಮಯದಲ್ಲಿ ಪೇಟಿಎಂ 1,000ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಪೇಮೆಂಟ್ ಕಂಪೆನಿಯಾಗಿತ್ತು. 2013ರಲ್ಲಿ ತನ್ನ ತಂದೆಯೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾ,: “ನನ್ನ ತಂದೆ ತುಂಬ ನಿರುತ್ಸಾಹಗೊಳಿಸಿದರು. ಅವರು ಹೇಳಿದಂತೆ, ‘ಈ ಪೇಟೈಮ್ ಎಂದರೇನು?!’ ‘ಒಮ್ಮೆ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಗೊತ್ತು,’” ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

“ಈಗ ಅವರು (ನನ್ನ ತಂದೆ) ನಿಸ್ಸಂದೇಹವಾಗಿ ತುಂಬಾ ಸಂತೋಷವಾಗಿದ್ದಾರೆ. ಅವರು ನನ್ನನ್ನು ನೆಲದ ಮೇಲೆ ಇರುವಂತೆ ಹೇಳಿದ್ದಾರೆ,” ಎಂದಿದ್ದಾರೆ. 39 ವರ್ಷದ ಪಾಂಡೆ ಅವರು ಪೇಟಿಎಂನಲ್ಲಿ ಕೆಲಸ ಮಾಡುತ್ತಿಲ್ಲ (ಅವರು ಮತ್ತೊಂದು ಸ್ಟಾರ್ಟ್‌ಅಪ್‌ಗೆ ಸೇರಿಕೊಂಡಿದ್ದಾರೆ). ಅವರು ಕಂಪನಿಯಲ್ಲಿದ್ದ ಏಳು ವರ್ಷಗಳಲ್ಲಿ ಅವರು ಹತ್ತು ಸಾವಿರ ಷೇರುಗಳನ್ನು ಸಂಗ್ರಹಿಸಿರುವುದಾಗಿ ಹೇಳಿದ್ದಾರೆ. ನವೆಂಬರ್ 12ರಂದು ಆ ಷೇರುಗಳ ಬೆಲೆ 2,150 ರೂಪಾಯಿ. ಅಂದರೆ, ಶೀಘ್ರದಲ್ಲೇ ಅವರು 75 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿರುತ್ತಾರೆ. ಕಂಪೆನಿಯ ಸಂಸ್ಥಾಪಕರ ಬಗ್ಗೆ ಮಾತನಾಡುತ್ತಾ ಪಾಂಡೆ: “ಪೇಟಿಎಂ ಯಾವಾಗಲೂ ಉದಾರ ಪಾವತಿದಾರ. ವಿಜಯ್ (ಪೇಟಿಎಂ ಸಂಸ್ಥಾಪಕ ಶರ್ಮಾ) ಯಾವಾಗಲೂ ಜನರು ಹಣ ಸಂಪಾದಿಸಬೇಕು, ಅವರು ಜೀವನದಲ್ಲಿ ಮೇಲಕ್ಕೆ ಬರಬೇಕು ಎಂದು ಬಯಸುತ್ತಾರೆ,” ಎನ್ನುತ್ತಾರೆ.

ಇದನ್ನೂ ಓದಿ: Paytm IPO: ಪೇಟಿಎಂ ಐಪಿಒಗೆ ದೊರೆಯದ ಹೂಡಿಕೆದಾರರ ನಿರೀಕ್ಷಿತ ಸ್ವಾಗತ; ಸಮಸ್ಯೆ ಏನಂತ?

TV9 Kannada


Leave a Reply

Your email address will not be published. Required fields are marked *