ಪೇದೆಗಳಿಂದ ಗಾಂಜಾ ಮಾರಾಟ ಆರೋಪ: ಪ್ರಕರಣ ಸಿಸಿಬಿ ತೆಕ್ಕೆಗೆ


ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ ಆರೋಪ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಸಿಎಂ ಖಾಸಗಿ ನಿವಾಸದ ಬಳಿ ಭದ್ರತೆಗೆಂದು ನಿಯೋಜಿಸಲಾಗಿದ್ದ ಕೋರಮಂಗಲ ಠಾಣೆಯ ಶಿವಕುಮಾರ್ ಮತ್ತು ಸಂತೋಷ್ ಎಂಬ ಕಾನ್ಸ್‌ಟೇಬಲ್​ಗಳು ಗಾಂಜಾ ಡೀಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆರೋಪಿಗಳನ್ನು ಆರ್​ಟಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಆರ್.ಟಿ.ನಗರ ಇನ್ಸ್​ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್ಐ ವೀರಭದ್ರ ಇಬ್ಬರು ​​ ಗಾಂಜಾ ಮಾರಾಟದ ಕೇಸ್​​​ ತನಿಖೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ.

ಗಾಂಜಾ ಮಾರಾಟದ ಆರೋಪ ಹೊತ್ತಿದ್ದ ಇಬ್ಬರು ಪೇದೆಗಳು ಅರೆಸ್ಟ್​ ಆದ ಎರಡೇ ದಿನಗಳಲ್ಲಿ ಬೇಲ್​ ಪಡೆದು ಹೊರಬಂದಿದ್ದರು. ಇದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ವಿದ್ಯಮಾನಗಳ ಬೆನ್ನಲ್ಲೇ ಆಯುಕ್ತರು ತನಿಖಾ ಲೋಪದಡಿ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್​ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *