ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್ಸ್ಟೇಬಲ್ಗಳಿಂದ ಗಾಂಜಾ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ತನಿಖಾಧಿಕಾರಿಗಳು ಇಬ್ಬರು ಪೇದೆಗಳ ಮೊಬೈಲ್ ರಿಟ್ರೀವ್ ಮಾಡಲು ಮುಂದಾಗಿದ್ದಾರೆ.
ಆರೋಪಿ ಕಾನ್ಸ್ಟೇಬಲ್ಗಳಾದ ಶಿವಕುಮಾರ್ ಹಾಗೂ ಸಂತೋಷ್ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕದ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಮಾತ್ರವಲ್ಲದೇ ಇನ್ನೂ ಸಾಕಷ್ಟು ಪೆಡ್ಲರ್ ಗಳ ಜೊತೆ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ
ಸದ್ಯ ಇಬ್ಬರ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಲು ಮುಂದಾದ ಪೊಲೀಸರು, ಆರೋಪಿಗಳು ಪೆಡ್ಲರ್ಗಳ ಜೊತೆ ಯಾವಾಗಿನಿಂದ ಸಂಪರ್ಕ ಹೊಂದಿದ್ದರು..? ಇವರೆಗೂ ಎಷ್ಟು ಬಾರಿ ಡ್ರಗ್ಸ್ ತರಿಸಿಕೊಂಡಿದ್ರೂ ಎನ್ನುವುದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.? ಯಾರಿಗೆಲ್ಲ ಇವರು ಗಾಂಜಾ ಸರಬರಾಜು ಮಾಡ್ತಿದ್ದರು ಜೊತೆಗೆ ಇವರ ಜೊತೆ ನಿಕಟ ಸಂಪರ್ಕ ಹೊಂದಿದವರು ಯಾರು ಎನ್ನುವುದರ ಬಗ್ಗೆಯೂ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.