ಪೈನಲ್ ಟಚ್ನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪ್ರತಿಮೆ | The 108 feet tall statue of Nadaprabhu Kempegowder in the final touch


ಪೈನಲ್ ಟಚ್ನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪ್ರತಿಮೆ

ಕೆಂಪೆಗೌಡರ 108 ಅಡಿ ಪುತ್ತಳಿ

Image Credit source: Deccan Herald

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ 108 ಅಡಿಯ ಪುತ್ಥಳಿ ನಿರ್ಮಾಣ ಅಂತಿಮ ಹಂತದಲ್ಲಿದ್ದು,  ನಾಡಪ್ರಭು ಕೆಂಪೇಗೌಡರ ಜನ್ಮದಿನದಂದು ಉದ್ಘಾಟನೆಯಾಗಲಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegouda International Airport) ನೂತನ 108 ಅಡಿಯ ಪುತ್ಥಳಿ ನಿರ್ಮಾಣ ಅಂತಿಮ ಹಂತದಲ್ಲಿದ್ದು,  ನಾಡಪ್ರಭು ಕೆಂಪೇಗೌಡರ ಜನ್ಮದಿನದಂದು ಉದ್ಘಾಟನೆಯಾಗಲಿದೆ.

 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಆಗಮಿಸುತ್ತಿದ್ದಂತೆ ಎಡ ಭಾಗದಲ್ಲಿ ಪ್ರಯಾಣಿಕರಿಗೆ ರಸ್ತೆಯ ಬದಿಯಲ್ಲೆ 108 ಅಡಿಯ ಕಂಚಿನ ಬೃಹದಾಕಾರದ ಪುತ್ಥಳಿ ಕಾಣಿಸಲಿದೆ.  ನಿರ್ಮಾಣ ಕಾರ್ಯ ಸಹ ಭರದಿಂದ ನೆರವೇರುತ್ತಿದೆ. ಈ ಭಾರಿಯ ಕೆಂಪೇಗೌಡ ಜಯಂತಿಗೆ ಪುತ್ಥಳಿ ಮತ್ತು ಪಾರ್ಕ್ ಅನ್ನ ಉದ್ಘಾಟನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಕೆಲಸ ಮತ್ತಷ್ಟು ವೇಗ ಪಡಿದುಕೊಂಡಿದೆ.

ಇದನ್ನು ಓದಿ: ವಿದ್ಯಾರ್ಥಿಗಳೇ ಗಮನಿಸಿ; ಸಿಇಟಿ ಪರೀಕ್ಷೆಯ ಹಾಲ್ ​ಟಿಕೆಟ್ ಬಿಡುಗಡೆ; ಡೌನ್​ಲೋಡ್​ ಮಾಡುವ ವಿಧಾನ ಇಲ್ಲಿದೆ

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪುತ್ಥಳಿಯ ಶಿರ.

ಬೆಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೆಗೌಡರ 108 ಅಡಿ ಪುತ್ತಳಿ ನಿರ್ಮಾಣವಾಗುತ್ತಿದೆ. ಈ ಪ್ರತಿಮೆ ಅದಕ್ಕೆ 18 ಅಡಿ ಪೀಠ 90 ಅಡಿ ಎತ್ತರದ ಕಂಚಿನ ಪ್ರತಿಮೆ ಸೇರಿದಂತೆ 108 ಅಡಿ ಎತ್ತರದ ಬೃಹತ್ ಕೆಂಪೇಗೌಡರ ಪ್ರತಿಮೆ ಇದಾಗಿದೆ. ಕೆಐಎಬಿಯಿಂದ ದೇಶ ವಿದೇಶಗಳಿಂದ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರನ್ನ ಈ ಬೃಹತ್ ನಾಡಪ್ರಭುವಿನ ಪ್ರತಿಮೆ ಸೆಳೆಯಲಿದೆ‌‌. ಇನ್ನೂ ಈಗಾಗಲೆ ಪ್ರತಿಮೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಪಾದಗಳಿಂದ ಕತ್ತಿನವರೆಗೂ ನಿರ್ಮಾಣ ಕಾರ್ಯವು ಮುಕ್ತಾಯವಾಗಿದೆ.

ಹೀಗಾಗಿ 2 ದಿನಗಳಿಂದೆ ದೆಹಲಿಯಿಂದ ಕೆಂಪೇಗೌಡ ಏರ್ಪೋಟ್ ಬಳಿ ನಿರ್ಮಾಣವಾಗ್ತಿರೂ ಪ್ರತಿಮೆ ಬಳಿಗೆ ಕೆಂಪೇಗೌಡರ ಶಿರವು ಸಹ ಆಗಮಿಸಿದ್ದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: ಹೊಸ ಹೇರ್ ಸ್ಟೈಲ್​ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್

ನಿರ್ಮಾಣ ಹಂತದ ಪ್ರತಿಮೆ ಶಿರ ಸೇರಿದಂತೆ ಪಾರ್ಕ್ ನ ಬ್ಲೂ ಪ್ರಿ‌ಂಟ್ ವೀಕ್ಷಣೆ ಮಾಡಿ ಹೋಗಿದ್ದು ಈ ಭಾರಿಯ ಕೆಂಪೇಗೌಡ ಜಯಂತಿಗೆ ಸಿಎಂ ಸೇರಿದಂತೆ ಗಣ್ಯರಿಂದ ಬೃಹತ್ ಪ್ರತಿಮೆ ಅನಾವರಣವಾಗಲಿದೆ‌.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *