ಪೈಪೋಟಿಯ ನಡುವೆ ದುಬಾರಿ ಮೊತ್ತಕ್ಕೆ ಪಂಜಾಬ್​ ಪಾಲಾದ U-19 ವಿಶ್ವಕಪ್​ ಹೀರೋ


ಇತ್ತೀಚಿಗೆ ಮುಕ್ತಾಯಗೊಂಡ ಅಂಡರ್​-19 ವಿಶ್ವಕಪ್​ನಲ್ಲಿ ಮಿಂಚಿದ ಯುವ ಆಟಗಾರರು ಐಪಿಎಎಲ್​ನಲ್ಲಿ ಬಂಪರ್​ ಹೊಡೆದಿದ್ದಾರೆ. ಈ ಮಿನಿ ಸಮರದಲ್ಲಿ ಮಿಂಚಿದ್ದ ಹಲವು ಆಟಗಾರರು ಕೋಟಿ ಮೊತ್ತಕ್ಕೆ ಲಿಲಾವಿನಲ್ಲಿ ಬಿಕರಿಯಾಗಿದ್ದಾರೆ. ಆ ಸಾಲಿಗೆ ಇದೀಗ ವಿಶ್ವಕಪ್ ವಿಜೇತ ತಂಡದ​ ಹೀರೋ ಎನ್ನಿಸಿಕೊಂಡಿರುವ ರಾಜ್​ ಬಾವಾ ಸೇರ್ಪಡೆಯಾಗಿದ್ದಾರೆ.

60 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ರಾಜ್​ ಬಾವಾರನ್ನು ಹರಾಜಿನಲ್ಲಿ ಪ್ರಕಟಿಸಿಲಾಗಿತ್ತು. ಯುವ ಆಟಗಾರರನ್ನು ಪಡೆಯೋಕೆ ಹಲವಾರು ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ನಡುವೆ ರಾಜ್​ ಬಾವಾ 2 ಕೋಟಿ ರೂಪಾಯಿ ಮೌಲ್ಯಕ್ಕೆ ಪಂಜಾಬ್​ ಕಿಂಗ್ಸ್​ ಎಲವೆನ್​ ಪಾಲಾಗಿದ್ದಾರೆ. ಈ ಯುವ ಆಲ್​ರೌಂಡರ್​ ಅಂಡರ್​-19 ವಿಶ್ವಕಪ್​ನಲ್ಲಿ 10 ಮ್ಯಾಚ್​ಗಳಿಂದ 252 ರನ್​ ಕಲೆ ಹಾಕಿದ್ದರು. ಅಷ್ಟೇ ಅಲ್ಲದೆ 63 % ಎವರೇಜ್​ನೊಂದಿಗೆ, ಬರೋಬ್ಬರಿ 100 % ರೇಟ್​ ಹೊಂದಿದ್ದರು.

News First Live Kannada


Leave a Reply

Your email address will not be published.