ಪೈಪ್​ನಲ್ಲಿ ಹಣ ಇಟ್ಟಿದ್ದ ಶಾಂತಗೌಡರ ಬಳಿ ಸಿಕ್ಕಿದ್ದು 54.5 ಲಕ್ಷ ಹಾರ್ಡ್ ಕ್ಯಾಷ್; ಸಂಪೂರ್ಣ ಆಸ್ತಿ ವಿವರ ಎಷ್ಟು? | ACB Raid at Kalaburagi Shantha Gowda House and many places of Karnataka details here

ಪೈಪ್​ನಲ್ಲಿ ಹಣ ಇಟ್ಟಿದ್ದ ಶಾಂತಗೌಡರ ಬಳಿ ಸಿಕ್ಕಿದ್ದು 54.5 ಲಕ್ಷ ಹಾರ್ಡ್ ಕ್ಯಾಷ್; ಸಂಪೂರ್ಣ ಆಸ್ತಿ ವಿವರ ಎಷ್ಟು?

ACB ಕಚೇರಿ

ಬೆಂಗಳೂರು: ರಾಜ್ಯದಲ್ಲಿ ನಡೆದ ಎಸಿಬಿ ದಾಳಿಯ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ರಾಜ್ಯದ 15 ಸರ್ಕಾರಿ ನೌಕರರ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ಮಾಡಿದೆ. 68 ಸ್ಥಳಗಳಲ್ಲಿ 503 ಎಸಿಬಿ ಅಧಿಕಾರಿಗಳ 68 ತಂಡದಿಂದ ದಾಳಿ ಮಾಡಲಾಗಿದೆ. ಈ ಬಗ್ಗೆ ವಿವರ ನೀಡಲಾಗಿದೆ. ಕಿರಿಯ ಇಂಜಿನಿಯರ್, ಪಿಡಬ್ಲ್ಯುಡಿ ಎಸ್.ಎಂ.ಬಿರಾದರ್ ಬಳಿ 54 ಲಕ್ಷ 50 ಸಾವಿರ ರೂಪಾಯಿ, 100 ಗ್ರಾಂ ಚಿನ್ನಾಭರಣ, 36 ಎಕರೆ ಕೃಷಿ ಜಮೀನು, 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಬಿರಾದರ್‌ಗೆ ಸೇರಿದ ಕಲಬುರಗಿಯಲ್ಲಿ 2 ವಾಸದ ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, 3 ವಿವಿಧ ಕಂಪನಿ ಕಾರು, ಒಂದು ಬೈಕ್, ಶಾಲಾ ವಾಹನ, 2 ಟ್ರ್ಯಾಕ್ಟರ್ ಇರುವುದು ಪತ್ತೆ ಆಗಿದೆ. ಎಸ್.ಎಂ.ಬಿರಾದರ್ ಮನೆಯಲ್ಲಿ ಎಸಿಬಿ ತನಿಖೆ ಮುಂದುವರಿದಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಉಪ ವಿಭಾಗ ಕಾರ್ಯಪಾಲಕ ಅಭಿಯಂತರ ಕೆ.ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಲಾಗಿದೆ. ಎಸಿಬಿ ದಾಳಿಯ ವೇಳೆ ಸಿಕ್ಕ ವಸ್ತುಗಳ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಕೆ.ಶ್ರೀನಿವಾಸ್ ಮನೆಯಲ್ಲಿ 9 ಲಕ್ಷ 85 ಸಾವಿರ ನಗದು, 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 22 ಲಕ್ಷ ರೂಪಾಯಿ ಠೇವಣಿ, 1 ಕೆಜಿ ಚಿನ್ನಾಭರಣ, 8 ಕೆಜಿ 840 ಗ್ರಾಂ ಬೆಳ್ಳಿ ವಸ್ತುಗಳು, ಮೈಸೂರಿನಲ್ಲಿ ಒಂದು ವಾಸದ ಮನೆ, ಫ್ಲ್ಯಾಟ್, 2 ನಿವೇಶನ, ಮೈಸೂರು ಜಿಲ್ಲೆಯ ವಿವಿಧೆಡೆ 4 ಎಕರೆ 34 ಗುಂಟೆ ಜಮೀನು, ನಂಜನಗೂಡಿನಲ್ಲಿ ಫಾರ್ಮ್‌ಹೌಸ್, 2 ಕಾರು, 2 ಬೈಕ್ ಪತ್ತೆ ಆಗಿದೆ.

ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರ, ಮಂಗಳೂರು ಇದರ ಇಇ ಲಿಂಗೇಗೌಡ ಮನೆ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಈ ವೇಳೆ, 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, 1 ಕೆಜಿ ಬೆಳ್ಳಿ ವಸ್ತು, ಮಂಗಳೂರು ನಗರದಲ್ಲಿ ಒಂದು ಮನೆ, ಚಾಮರಾಜನಗರ ಜಿಲ್ಲೆ, ಮಂಗಳೂರಿನಲ್ಲಿ 3 ನಿವೇಶನಗಳು, 2 ಕಾರು, 1 ಬೈಕ್ ಇರುವುದು ಎಸಿಬಿ ದಾಳಿಯ ವೇಳೆ ಪತ್ತೆ ಆಗಿದೆ.

ಸಕಾಲ, ಬೆಂಗಳೂರು ಆಡಳಿತಾಧಿಕಾರಿ, ಎಲ್.ಸಿ.ನಾಗರಾಜ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಎಲ್.ಸಿ.ನಾಗರಾಜ್ ಮನೆಯಲ್ಲಿ 43 ಲಕ್ಷ ರೂಪಾಯಿ, 14 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, 1.76 ಕೆಜಿ ಚಿನ್ನಾಭರಣ, 7 ಕೆಜಿ 284 ಗ್ರಾಂ ಬೆಳ್ಳಿ ವಸ್ತುಗಳು, ಬೆಂಗಳೂರು ನಗರದಲ್ಲಿ ಒಂದು ವಾಸದ ಮನೆ, ನಿವೇಶನ, ನೆಲಮಂಗಲ ಪಟ್ಟಣದಲ್ಲಿ ಒಂದು ವಾಸದ ಮನೆ, ನೆಲಮಂಗಲ ತಾಲೂಕಿನಲ್ಲಿ 11 ಎಕರೆ 26 ಗುಂಟೆ ಕೃಷಿ ಭೂಮಿ, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, ಎಲ್.ಸಿ.ನಾಗರಾಜ್ ಬಳಿ 3 ಕಾರುಗಳು ಇರುವುದು ಪತ್ತೆ ಆಗಿದೆ.

ಬಿಬಿಎಂಪಿ ಡಿ ಗ್ರೂಪ್ ನೌಕರ ಜಿ.ವಿ.ಗಿರೀಶ್ ಆಸ್ತಿ ವಿವರ ಹೀಗಿದೆ. ಜಿ.ವಿ.ಗಿರೀಶ್ ಮನೆಯಲ್ಲಿ 1 ಲಕ್ಷ 18 ಸಾವಿರ ನಗದು, 8 ಕೆಜಿ ಬೆಳ್ಳಿ, ಬೆಂಗಳೂರು ನಗರದಲ್ಲಿ 6 ವಾಸದ ಮನೆ, 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, 4 ಕಾರು, 4 ಬೈಕ್‌ಗಳನ್ನು ಹೊಂದಿರುವುದು ತಿಳಿದುಬಂದಿದೆ.

ಬೆಂಗಳೂರಿನ ಯಲಹಂಕ ಸರ್ಕಾರಿ ಆಸ್ಪತ್ರೆ ಫಿಸಿಯೋಥೆರಪಿಸ್ಟ್ ರಾಜಶೇಖರ್ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜಶೇಖರ್ ಮನೆಯಲ್ಲಿ ದಾಳಿ ವೇಳೆ ಪತ್ತೆಯಾದ ಆಸ್ತಿ ವಿವರ ಹೀಗಿದೆ. 4 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ ಒಂದು ಫ್ಲ್ಯಾಟ್, ಯಲಹಂಕದ ಶಿವನಹಳ್ಳಿಯಲ್ಲಿ 1 ಫ್ಲ್ಯಾಟ್, ಒಂದು ಆಸ್ಪತ್ರೆ, ಮೈಲನಹಳ್ಳಿಯಲ್ಲಿ ನಿವೇಶನ, ಕಾರು, ಒಂದು ಬೈಕ್ ಪತ್ತೆ ಆಗಿದೆ.

BBMP ಕೇಂದ್ರ ಕಚೇರಿ ಪ್ರಥಮ ದರ್ಜೆ ಸಹಾಯಕ ಎಫ್‌ಡಿಎ ಮಾಯಣ್ಣ ಮನೆಯ ಮೇಲೆ ಎಸಿಬಿ ದಾಳಿ ಮಾಡಿದೆ. ಈ ವೇಳೆ, 59 ಸಾವಿರ ನಗದು, 10 ಲಕ್ಷ ರೂ. ಎಫ್‌ಡಿ ಇರುವುದು, ಉಳಿತಾಯ ಖಾತೆಯಲ್ಲಿ 1 ಲಕ್ಷ 50 ಸಾವಿರ ರೂ. ಠೇವಣಿ, 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಬೆಂಗಳೂರು ನಗರದಲ್ಲಿ 4 ವಾಸದ ಮನೆ, 6 ಕಡೆ ನಿವೇಶನ, 2 ಎಕರೆ ಕೃಷಿ ಜಮೀನು, 1 ಕಾರು, 2 ಬೈಕ್‌ಗಳು ಪತ್ತೆ ಆಗಿದೆ.

ನಿವೃತ್ತ ಉಪನೋಂದಣಾಧಿಕಾರಿ, ಬಳ್ಳಾರಿ, ಕೆ.ಎಸ್.ಶಿವಾನಂದ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಈ ಸಂದರ್ಭ 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಬಳ್ಳಾರಿ ಜಿಲ್ಲೆ ಮೋಕಾ ಗ್ರಾಮದಲ್ಲಿ 7 ಎಕರೆ ಜಮೀನು, ಮಂಡ್ಯದಲ್ಲಿ 1 ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, ಶಕ್ರಪುರದಲ್ಲಿ ಒಂದು ಕಾಂಪ್ಲೆಕ್ಸ್, 1 ಕಾರು, 2 ಬೈಕ್ ಪತ್ತೆ ಆಗಿದೆ.

ಕಂದಾಯ ನಿರೀಕ್ಷಕ, ದೊಡ್ಡಬಳ್ಳಾಪುರ ಲಕ್ಷ್ಮೀನರಸಿಂಹಯ್ಯ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. 1 ಲಕ್ಷ 13 ಸಾವಿರ ನಗದು ಪತ್ತೆ, 750 ಗ್ರಾಂ ಚಿನ್ನಾಭರಣ, 15 ಕೆಜಿ ಬೆಳ್ಳಿ ವಸ್ತುಗಳು, ವಿವಿಧ ಕಡೆ 5 ವಾಸದ ಮನೆಗಳು, 6 ನಿವೇಶನ, ದೊಡ್ಡಬಳ್ಳಾಪುರದಲ್ಲಿ 24 ಗುಂಟೆ ಜಮೀನು, 1 ಕಾರು, 2 ಬೈಕ್ ಹೊಂದಿರುವುದು ಪತ್ತೆಯಾಗಿದೆ.

ಬೆಂಗಳೂರು ನಿರ್ಮಿತಿ ಕೇಂದ್ರದ ನಿವೃತ್ತ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್ ಮನೆಯ ಮೇಲೆ ಎಸಿಬಿ ದಾಳಿ ಮಾಡಿದೆ. 98 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, 15 ಲಕ್ಷ ನಗದು, 850 ಗ್ರಾಂ ಚಿನ್ನಾಭರಣ, 9 ಕೆಜಿ 500 ಗ್ರಾಂ ಬೆಳ್ಳಿ ವಸ್ತುಗಳು, ಬೆಂಗಳೂರಿನಲ್ಲಿ 5 ಮನೆ, ನೆಲಮಂಗಲ ತಾಲೂಕಿನ ಸೋಂಪುರದಲ್ಲಿ 4 ಮನೆಗಳು, ಬೆಂಗಳೂರಿನಲ್ಲಿ 8 ನಿವೇಶನ, 10 ಎಕರೆ 20 ಗುಂಟೆ ಜಮೀನು, ನೆಲಮಂಗಲ, ಮಾಗಡಿ ತಾಲೂಕಿನಲ್ಲಿರುವ ಕೃಷಿ ಜಮೀನು ಪತ್ತೆಯಾಗಿದೆ.

ಶಾಂತಗೌಡ ಬಳಿ ಪೈಪ್‌ನಲ್ಲಿ ಕಂತೆಕಂತೆ ಹಣ ಪತ್ತೆ ಆಗಿದೆ. ಶಾಂತಗೌಡ ಮತ್ತು ಎಸ್.ಬಿ.ಬಿರಾದರ್‌ ಬಳಿ 54.5 ಲಕ್ಷ ಕ್ಯಾಷ್ ಸಿಕ್ಕಿದೆ. ಕಲಬುರಗಿ ಜಿಲ್ಲೆ ಜೇವರ್ಗಿಯ PWD ಕಚೇರಿ ಜೆಇ ಶಾಂತಗೌಡರ ಬಳಿ 54.50 ಲಕ್ಷ ಹಾರ್ಡ್‌ ಕ್ಯಾಷ್ ಪತ್ತೆ ಆಗಿದೆ. ಪೈಪ್‌ನಲ್ಲಿ ಹಣ ಇಟ್ಟಿದ್ದ ಶಾಂತಗೌಡರ ಬಳಿ ಹಾರ್ಡ್‌ ಕ್ಯಾಷ್ ಲಭಿಸಿದೆ. ದಾಳಿ ವೇಳೆ ಸಿಕ್ಕ ಆಸ್ತಿ ಬಗ್ಗೆ ACB ಮಾಧ್ಯಮ ಪ್ರಕಟಣೆ ಮಾಡಿದೆ. ಕಲಬುರಗಿಯಲ್ಲಿ 2 ವಾಸದ ಮನೆ, ಬೆಂಗಳೂರಿನಲ್ಲಿ ಸೈಟ್​, ಶಾಂತಗೌಡ ಬಳಿ 3 ಕಾರು, 1 ಟೂ ವ್ಹೀಲರ್, 1 ಸ್ಕೂಲ್ ಬಸ್, 2 ಟ್ರ್ಯಾಕ್ಟರ್ಸ್, 100 ಗ್ರಾಂ ಚಿನ್ನಾಭರಣ, ಬರೋಬ್ಬರಿ 36 ಎಕರೆ ಕೃಷಿ ಜಮೀನು ಪತ್ತೆ ಬಗ್ಗೆ ಮಾಹಿತಿ ಲಭಿಸಿದೆ. 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ನಿವಾಸದಲ್ಲಿ ಭಾರಿ ಪ್ರಮಾಣದ ಚಿನ್ನದ ಗಟ್ಟಿ ಪತ್ತೆ; ರುದ್ರೇಶಪ್ಪ ಎಸಿಬಿ ವಶಕ್ಕೆ

ಇದನ್ನೂ ಓದಿ: ಕರ್ನಾಟಕದ 68 ಕಡೆ ಎಸಿಬಿ ದಾಳಿ ಬಹುತೇಕ ಅಂತ್ಯ; ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ, ಹಣ ಪತ್ತೆ- ವಿವರ ಇಲ್ಲಿದೆ

TV9 Kannada

Leave a comment

Your email address will not be published. Required fields are marked *