ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪೊಲೀಸ್ ಇಲಾಖೆ ಚುರುಕುಗೊಂಡಿದ್ದು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವವರನ್ನ ತಡೆದು ಗಾಡಿಗಳನ್ನ ಸೀಜ್ ಮಾಡ್ತಿದ್ದಾರೆ. ಈ ಮಧ್ಯೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಪೊಲೀಸರಿಗೆ ಸಾಥ್ ನೀಡಿದ್ದಾರೆ.

ಪೊಲೀಸರ ಜೊತೆ ರಸ್ತೆಗಿಳಿದಿರುವ ವಾಟಾಳ್ ನಾಗರಾಜ್ ಮಾಗಡಿರೋಡ್ ರಸ್ತೆಯಲ್ಲಿ ತಾವೂ ಸಹ ವೆಹಿಕಲ್​ಗಳನ್ನ ಚೆಕ್ ಮಾಡಲು ಮುಂದಾಗಿದ್ದಾರೆ. ವಾಹನ ಸವಾರರಿಗೆ ರಸ್ತೆಗೆ ಅನಗತ್ಯವಾಗಿ ಬಾರದಂತೆ ತಿಳಿಸಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು.. ಸರ್ಕಾರ ಲಾಕ್ ಡೌನ್ ಮಾಡಿದೆ.. ಪೊಲೀಸರು ರಸ್ತೆಯಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಜನರೂ ಕೂಡ ಪೊಲೀಸರಿಗೆ ಸಹಕಾರ ಕೊಡಬೇಕು. ಬಡವರಿಗೆ ಕೂಲಿ ಕಾರ್ಮಿಕರಿಗೆ ಸರ್ಕಾರ 10 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

 

The post ಪೊಲೀಸರಿಗೆ ವಾಟಾಳ್ ಸಾಥ್.. ಅನಗತ್ಯ ಓಡಾಡುವವರಿಗೆ​ ಪಾಠ ಮಾಡಿದ ಹೋರಾಟಗಾರ appeared first on News First Kannada.

Source: newsfirstlive.com

Source link