ಪೊಲೀಸರಿಗೆ ಹಾಫ್ ಡೋಸ್ ಹಾಕಿ ಡಾಕ್ಟ್ರಮ್ಮ ದೋಖಾ- ಲಸಿಕೆ ಹಾಕಿಸಿಕೊಂಡವರಿಗೆ ಆತಂಕ

ಪೊಲೀಸರಿಗೆ ಹಾಫ್ ಡೋಸ್ ಹಾಕಿ ಡಾಕ್ಟ್ರಮ್ಮ ದೋಖಾ- ಲಸಿಕೆ ಹಾಕಿಸಿಕೊಂಡವರಿಗೆ ಆತಂಕ

ಕೊರೊನಾ ವ್ಯಾಕ್ಸಿನ್ ಅನ್ನ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯೆ ಪುಷ್ಪಿತಾಳ ಇನ್ನೊಂದು ಕರ್ಮಕಾಂಡ ಬಯಲಾಗಿದೆ. ಮಂಜುನಾಥ ನಗರ ಆರೋಗ್ಯಕೇಂದ್ರದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡ ಕೊರೊನಾ ವಾರಿಯರ್ ಗಳಿಗೆ ಮತ್ತು ನಾಗರೀಕರಿಗೆ ಭಯ ಅವರಿಸಿದೆ.

ಬೆಂಗಳೂರಿನಲ್ಲಿ ಹಾಫ್ ಡೋಸ್ ಇಂಜೆಕ್ಷನ್ ಕರ್ಮಕಾಂಡ ಬಯಲಾಗಿದೆ. ಕೊರೊನಾ ವಾರಿಯರ್ಸ್ ಪೊಲೀಸರಿಗೂ ಹಾಫ್ ಡೋಸ್ ವ್ಯಾಕ್ಸಿನ್ ಹಾಕಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹಗಲಿರುಳೆನ್ನದೇ ಜೀವ ಒತ್ತೆಯಿಟ್ಟು ಕೆಲಸ ಮಾಡೋ ಕೊರೊನಾ ವಾರಿಯರ್ಸ್​​​ಗೆ ದೋಖಾ ಮಾಡಲಾಗಿದೆ. ಹಾಫ್ ಡೋಸ್ ವ್ಯಾಕ್ಸಿನ್ ಹಾಕಿ ಅಬೇಸ್ ಮಾಡ್ತಿದ್ದ ಡಾ.ಎಂ.ಕೆ.ಪುಷ್ಪಿತಾ ಕಳ್ಳಾಟ ಒಂದೊಂದಾಗಿ ರಿವೀಲ್ ಆಗಿದೆ.

ತನಿಖೆ ವೇಳೆ ಹಾಫ್ ಡೋಸ್ ಇಂಜೆಕ್ಷನ್ ಕರ್ಮಕಾಂಡ ಬಯಲು

ಬಸವೇಶ್ವರ ನಗರ ಪೊಲೀಸ್ ಠಾಣೆಯ ಬಹುಪಾಲು ಪೊಲೀಸರು ವ್ಯಾಕ್ಸಿನ್ ಪಡೆದಿರೋದು ಮಂಜುನಾಥ ನಗರ ಆರೋಗ್ಯ ಕೇಂದ್ರದಲ್ಲಿ ಎನ್ನಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಂಡ ಪೋಲಿಸರಲ್ಲೂ ಆತಂಕ ಶುರುವಾಗಿದೆ. ವ್ಯಾಕ್ಸಿನ್ ಪಡೆದ ಫ್ರಂಟ್ ಲೈನ್ ವಾರಿಯರ್ಸ್​​ಗಳಾದ ಪೊಲೀಸರು, ನಾಗರೀಕರ ಪಾಡು ಕೇಳುವವರಿಲ್ಲ. ಹಣಕ್ಕಾಗಿ ಅಕ್ರಮವಾಗಿ ಕೋವಿಡ್ ವ್ಯಾಕ್ಸಿನ್ ನೀಡ್ತಿದ್ದವರ ಕಳ್ಳಾಟ ಬಯಲಾಗಿದೆ.

ಕಡಿಮೆ ಸಂಖ್ಯೆಯಲ್ಲಿ ಲಭ್ಯತೆಯಿದ್ದ ವ್ಯಾಕ್ಸಿನ್ ಅಕ್ರಮವಾಗಿ ಮಾರಾಟ ಮಾಡ್ತಿದ್ರು. ಡಾ. ಪುಷ್ಪಿತಾ ಸೇರಿದಂತೆ ವ್ಯವಸ್ಥಿತ ಜಾಲ ಕಳ್ಳಾಟದಲ್ಲಿ ಸಕ್ರಿಯವಾಗಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವ್ಯಾಕ್ಸಿನ್ ಕಳ್ಳಾಟ ಪ್ರಕರಣದಲ್ಲಿ ಇನ್ನೂ ನಾಲ್ವರ ಪಾತ್ರದ ಶಂಕೆ ವ್ಯಕ್ತವಾಗಿದೆ. ಹಣಕ್ಕಾಗಿ ವ್ಯಾಕ್ಸಿನ್ ನೀಡಲು ಖತರ್ನಾಕ್​​​ಗಳು ಹಿಡಿದ ಮಾರ್ಗವೇ ಹೀನಾತೀಹೀನಾ ಎನ್ನಲಾಗಿದೆ.

ಮಾಸ್ಕ್​​, ಕೋವಿಡ್​​ ಟೆಸ್ಟ್​ ಕಿಟ್​​ಗಳನ್ನು ಮಾರಾಟ ಮಾಡಿದ್ರು..

ಮಂಜುನಾಥ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಪಡೆದವರಲ್ಲಿ ಆತಂಕ ಶುರುವಾಗಿದೆ. ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನ್ ಡೋಸೆಜ್ ನೀಡಿ ಅಕ್ರಮ ಮಾರಾಟಕ್ಕೆ ಹವಣಿಸಿರುವ ಡಾ.ಪುಷ್ಪಿತಾ, ಪ್ರೇಮಾ ಜೊತೆಗೆ ವ್ಯಾಕ್ಸಿನ್ ಅಕ್ರಮದಲ್ಲಿ ಮತ್ತಿಬ್ಬರು ನರ್ಸ್​​ಗಳ ಸಾಥ್ ನೀಡಿದ್ದಾರೆ ಎನ್ನಲಾಗ್ತಿದೆ. ಆರೋಗ್ಯ ಕೇಂದ್ರಕ್ಕೆ ಬರ್ತಿದ್ದ ಪಿಪಿಇ ಕಿಟ್, ಎನ್ 95 ಮಾಸ್ಕ್, ಱಪಿಡ್ ಕಿಟ್, ಆರ್​ಟಿಪಿಸಿಆರ್ ಕಿಟ್, ಸರ್ಜಿಕಲ್ ಮಾಸ್ಕ್ ಗಳು ಅಕ್ರಮ ಮಾರಾಟ ಮಾಡ್ತಿದ್ರು.

0.5 ML ಕೋವಿಡ್ ವ್ಯಾಕ್ಸಿನ್ ಓರ್ವ ವ್ಯಕ್ತಿಗೆ ಕೊಡಲಾಗುತ್ತೆ. ಹೀಗೆ 0.5 ML ಕೊಡಮಾಡುವ ವ್ಯಾಕ್ಸಿನ್ ಪ್ರಮಾಣದಲ್ಲಿ ಕಳ್ಳಾಟ ನಡೆಸಿ ವ್ಯಾಕ್ಸಿನ್ ವಯಲ್ ಗಳ ಅಕ್ರಮ ಶೇಕರಣೆ ಮಾಡಿದ್ದಾರೆ. ಆ ಬಳಿಕ ಡಾ.ಪುಷ್ಪಿತಾ ಗ್ಯಾಂಗ್ ಅನ್ನಪೂರ್ಣೇಶ್ವರಿ ನಗರದ ಪ್ರೇಮಾ ಮನೆಗೆ ಉಳಿಸಿದ ವ್ಯಾಕ್ಸಿನ್ ಅಕ್ರಮ ಸರಬರಾಜು ಮಾಡಿದ್ದಾರೆ. ಪೊಲೀಸರು ಪ್ರೇಮಾ ಮನೆ ಬಳಿ ಹೋದಾಗ ಹಣಕ್ಕೆ ವ್ಯಾಕ್ಸಿನ್ ಹಾಕ್ತಿದ್ದು ಕಂಡು ಬಂದಿತ್ತು. ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.

The post ಪೊಲೀಸರಿಗೆ ಹಾಫ್ ಡೋಸ್ ಹಾಕಿ ಡಾಕ್ಟ್ರಮ್ಮ ದೋಖಾ- ಲಸಿಕೆ ಹಾಕಿಸಿಕೊಂಡವರಿಗೆ ಆತಂಕ appeared first on News First Kannada.

Source: newsfirstlive.com

Source link