
ಪ್ರೀತಿಸಿ ಮದುವೆಯಾಗಿದ್ದ ಗಂಗಾಧರ್ ಮತ್ತು ಜಲಜ
ಮದುವೆಯಾದ ನಂತರ ವರನ ಅಕ್ಕನ ಮನೆಯಲ್ಲಿ ನವಜೋಡಿ ಇದ್ದರು. ಈ ವೇಳೆ 20 ಜನರ ಗುಂಪೊಂದು ಬಂದು ವಧುವನ್ನು ಅಪಹರಿಸಿದ್ದಾರೆ.
ನೆಲಮಂಗಲ: ಪ್ರೀತಿಸಿ (Love) ಮದುವೆಯಾದ ವಧುವನ್ನ ಪೋಷಕರು ಕಿಡ್ನಾಪ್ (Kidnap) ಮಾಡಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ. ಪೋಷಕರ ವಿರೋಧದ ನಡುವೆ ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳಾದ ಗಂಗಾಧರ್ ಮತ್ತು ಜಲಜ ವಿವಾಹವಾಗಿದ್ದರು. ಮದುವೆಯಾದ ನಂತರ ವರನ ಅಕ್ಕನ ಮನೆಯಲ್ಲಿ ನವಜೋಡಿ ಇದ್ದರು. ಈ ವೇಳೆ 20 ಜನರ ಗುಂಪೊಂದು ಬಂದು ವಧುವನ್ನು ಅಪಹರಿಸಿದ್ದಾರೆ. ಮನೆಯವರಿಗೆಲ್ಲ ಥಳಿಸಿ ಹುಡುಗಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.