ಬೀದರ್: ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಮೊನ್ನೆ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ರೋಗಿಗಳು ಪರದಾಡಿದ್ದರು. ಇದರ ಬೆನ್ನಲ್ಲೇ ಬೆಳಗ್ಗೆ ಹೊತ್ತಿಗೆ 24 ರೋಗಿಗಳು ಮೃತಪಟ್ಟಿದ್ದರು. ಈ ದುರಂತ ರಾಜ್ಯಾದ್ಯಂತ ಜನರಲ್ಲಿ ಕಳವಳ ಉಂಟು ಮಾಡಿದೆ.  ಬೀದರ್​ನಲ್ಲಿ ಸಂಭವಿಸಬಹುದಾಗಿದ್ದ ಇಂಥದ್ದೇ ಘಟನೆಯೊಂದು ಅದೃಷ್ಟವಶಾತ್ ತಪ್ಪಿದೆ.

ವೈದ್ಯರು ಹಾಗೂ ಸಿಬ್ಬಂದಿಯ ನಿಷ್ಕಾಳಜಿಯಿಂದ ಬೀದರ್ ನಗರದ ಬಿಬಿಎಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಈ ಆಸ್ಪತ್ರೆಯಲ್ಲಿ 14 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಹಾಸ್ಪಿಟಲ್​ನಲ್ಲಿ ಆಕ್ಸಿಜನ್ ಕೊರತೆ ಎದುರಾಗಿತ್ತು. ಆಕ್ಸಿಜನ್ ಖಾಲಿಯಾಗುತ್ತಾ ಬಂದರು ಆಸ್ಪತ್ರೆ ಸಿಬ್ಬಂದಿ ಗಮನಿಸಿರಲಿಲ್ಲ ಎನ್ನಲಾಗಿದೆ.

ಈ ವೇಳೆ ಪೊಲೀಸರು ಸಮಯಪ್ರಜ್ಜೆ ಮೆರೆದಿದ್ದರಿಂದ ಒಂದೇ ‌ಗಂಟೆಯಲ್ಲಿ ಆಕ್ಸಿಜನ್ ಪೂರೈಕೆಯಾಗಿದೆ. ಇದರಿಂದ 15 ಜೀವಗಳು ಉಳಿದಿವೆ.

 

 

The post ಪೊಲೀಸರ‌ ಸಮಯಪ್ರಜ್ಜೆಯಿಂದ ಒಂದೇ ‌ಗಂಟೆಯಲ್ಲಿ ಆಕ್ಸಿಜನ್ ಪೂರೈಕೆ.. ಉಳೀತು 14 ಜನರ ಜೀವ appeared first on News First Kannada.

Source: newsfirstlive.com

Source link