ಪೊಲೀಸರ ಕಿರುಕುಳ ಆರೋಪ; ದಯಮಾರಣಕ್ಕೆ ಅರ್ಜಿ ಹಾಕಿದ ಹಿಂದೂ ಸಂಘಟನೆ ಮುಖಂಡ

ಪೊಲೀಸರ ಕಿರುಕುಳ ಆರೋಪ; ದಯಮಾರಣಕ್ಕೆ ಅರ್ಜಿ ಹಾಕಿದ ಹಿಂದೂ ಸಂಘಟನೆ ಮುಖಂಡ

ತುಮಕೂರು: ನನಗೆ ಪೊಲೀಸರಿಂದ ಕಿರುಕುಳ ಆಗುತ್ತಿದೆ, ಹೀಗಾಗಿ ದಯಾಮರಣಕ್ಕೆ ಅವಕಾಶ ನೀಡಿ ಅಂತ ಕೋರಿ ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್ ಧರ್ಮಸೇನೆಯ ರಾಜ್ಯಾಧ್ಯಕ್ಷ ಅತುಲ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ.

ಅತುಲ್ ಕುಮಾರ್ ಅಲಿಯಾಸ್​ ಮಧುಗಿರಿ ವಿರುದ್ಧ ರಾಜ್ಯದ ಹಲವೆಡೆ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ತುಮಕೂರು ಜಿಲ್ಲಾ ಪೋಲಿಸರು ಪದೇ ಪದೇ ವಿಚಾರಣೆ ನೆಪದಲ್ಲಿ ಮಾನಸಿಕ ಕಿರುಕುಳ ನೀಡ್ತಿದ್ದಾರೆ ಅಂತ ಅತುಲ್ ಕುಮಾರ್ ಆರೋಪ ಮಾಡಿದ್ದಾರೆ.

ಅನೇಕ ಬಾರಿ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದು ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿರೋದ್ರಿಂದ ನನಗೆ ಇವರಿಂದ ಮುಕ್ತಿಗೊಳಿಸಿ. ಈಗಿನ ನನ್ನ ಆರ್ಥಿಕ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಕಾನೂನಿನ ಅಡಿಯಲ್ಲಿ ಬದುಕುವುದೇ ಕಷ್ಟವಾಗಿದೆ. ಹಾಗಾಗಿ ದಯಾ ಮರಣಕ್ಕೆ ಅವಕಾಶ ಮಾಡಿ ಕೊಡಿ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಅಂದ್ಹಾಗೆ ಅತುಲ್ ಕುಮಾರ್ ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಲವ್ ಜಿಹಾದ್, ಗೋಹತ್ಯೆಯ ವಿರುದ್ಧ ಹೋರಾಟ ಮಾಡುತ್ತಿದ್ದವರು.

 

The post ಪೊಲೀಸರ ಕಿರುಕುಳ ಆರೋಪ; ದಯಮಾರಣಕ್ಕೆ ಅರ್ಜಿ ಹಾಕಿದ ಹಿಂದೂ ಸಂಘಟನೆ ಮುಖಂಡ appeared first on News First Kannada.

Source: newsfirstlive.com

Source link