ಪೊಲೀಸರ ವಿಚಾರಣೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆ; ಪೊಲೀಸ ಠಾಣೆ ಎದುರು ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ | A Youth Committed Suicide because of Police Torcher


ಪೊಲೀಸರ ವಿಚಾರಣೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆ; ಪೊಲೀಸ ಠಾಣೆ ಎದುರು ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

ಪ್ರಾತಿನಿಧಿಕ ಚಿತ್ರ

ಪೊಲೀಸರ ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಶಹಬಾದ್  ಪೊಲೀಸ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.

ಕಲಬುರಗಿ: ಪೊಲೀಸರ ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಶಹಬಾದ್  ಪೊಲೀಸ ಠಾಣೆ (Police Station) ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಪೊಲೀಸರು ಚಾರ್ಚರ್ ನೀಡಿದ್ದಾರೆ. ಜೈಲಿಗೆ ಹಾಕೋ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬಸ್ಥರು  ಆರೋಪಿಸುತ್ತಿದ್ದಾರೆ.

ಇದನ್ನು ಓದಿ: ಆಂಬುಲೆನ್ಸ್ ಸಿಗದೆ ನಡುರಾತ್ರಿ ಸ್ಟ್ರೆಚರ್ ಮೂಲಕ ರೋಗಿಯನ್ನ ಮತ್ತೊಂದು ಆಸ್ಪತ್ರೆಗೆ ಶಿಪ್ಟ್ ಮಾಡಿದ ಸಂಬಂಧಿಕರು

ಮನೋಜ್ ಪತ್ನಿ ಸೀತಾಬಾಯಿ ಸಹೋದರ ನಾಗೇಶ್ ಪುಣಾದಲ್ಲಿ ಚಾಲಕ ನಾಗಿ ಕೆಲಸ ಮಾಡುತ್ತಿದ್ದಾನೆ.  ನಾಗೇಶ್ ಮತ್ತು ಪ್ರತಿಭಾ ದಂಪತಿಗಳು. ದಂಪತಿಗಳಿಗೆ  ಒಂದು ಗಂಡು ಮಗುವಿತ್ತು. ಆದ್ರೆ ನಾಗೇಶ್ ಮತ್ತು ಪ್ರತಿಭಾ ಇಬ್ಬರು ವರ್ಷದ ಹಿಂದೆ ಜಗಳವಾಡಿಕೊಂಡು ದೂರವಾಗಿದ್ದರು. ಆದ್ರೆ ಪ್ರತಿಭಾ, ಮಗುವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಳು. ವಿವಾಹಕ್ಕೆಂದು ನಾಗೇಶ್ ಮತ್ತು ಪ್ರತಿಭಾ ಮರ್ತೂರು ಗ್ರಾಮಕ್ಕೆ ಬಂದಿದ್ದರು.  ಮೇ 24 ರಂದು ತನ್ನ ಮಗನನ್ನು ಕರೆದುಕೊಂಡು ನಾಗೇಶ್ ಪುಣಾಗೆ ಹೋಗಿದ್ದನು.  ನಾಗೇಶ್ ಮಗುವನ್ನು ತಗೆದುಕೊಂಡು ಹೋಗಲು ಮನೋಜ್ ಸಹಾಯ ಮಾಡಿದ್ದಾನೆ ಅಂತ ದೂರು ನೀಡಿದ್ದ ಪ್ರತಿಭಾ ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ನಾಗೇಶ್ ನನ್ನು ತಂದು ಒಪ್ಪಿಸುವಂತೆ ಮನೋಜ್ ಗೆ ಪೊಲೀಸರು ಹೇಳಿದ್ದರು.

ಇದನ್ನು ಓದಿ: ಭಾರತ ಜಾಗತಿಕ ಡ್ರೋನ್ ಹಬ್ ಆಗುವ ಸಾಮರ್ಥ್ಯ ಹೊಂದಿದೆ; ಅತಿ ದೊಡ್ಡ ಡ್ರೋನ್ ಉತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ

ಪೊಲೀಸರ ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮರತೂರ ಗ್ರಾಮದ ನಿವಾಸಿ  ಮನೋಜ ಸಿಂದೆ(32) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಜ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಮನೋಜ್​ನ ಹೆಂಡತಿಯ ಅಣ್ಣನ ಮಗು ಕಾಣೆಯಾಗಿತ್ತು. ಹೀಗಾಗಿ ಆ ಮಗುವನ್ನು ಮನೋಜನೇ ತೆಗೆದುಕೊಂಡು ಹೋಗಿದ್ದಾನೆ ಎಂದು ಶಹಬಾದ್ ಠಾಣೆ ಪೊಲೀಸ್ ರು ಕಿರುಕುಳ ನಿಡುತ್ತಿದ್ದಾರೆಂದು ಆರೋಪಿಸಲಾಗಿತ್ತು. ಎರಡು ದಿನ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಮನೋಜನಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.  ಇವತ್ತು ಬಿಟ್ಟಿದ್ದೇವೆ, ನಾಳೆ ನಿನ್ನ ಹೆಂಡತಿಯನ್ನೂ ಕೂಡ ಕರೆದುಕೊಂಡು ಬಂದು ಇಬ್ಬರಿಗೂ ಜೈಲಿಗೆ ಹಾಕುತ್ತೇವೆ ಅಂತ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *