ಪೊಲೀಸರ ಸೋಗಿನಲ್ಲಿ ಬಂದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಅಂದರ್​

ತುಮಕೂರು: ಪೊಲೀಸ್​ ಅಧಿಕಾರಿಯೆಂದು ಹೇಳಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಅಮೃತೂರು ಠಾಣೆ ಪೋಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಮಮಂಗಲ ತಾಲೂಕು ದೊಡ್ಡನಾಗನಹಳ್ಳಿ ಗ್ರಾಮದ ನಿವಾಸಿ ಪ್ರದೀಪ @ ಕೆಂಚ (37) ಬಂಧಿತ ಆರೋಪಿ. ಕಳೆದ ಆಗಸ್ಟ್ 1 ರಂದು ಪೊಲೀಸರ ಸೋಗಿನಲ್ಲಿ ಬಂದಿದ್ದ ಆರೋಪಿ ಮಹಿಳೆಯೋರ್ವರನ್ನ ಸಾಹೇಬ್ರು ನಿನ್ನ ಕರಿತಿದ್ದಾರೆ ಬಾ ಅಂತಾ ಹೇಳಿ ಕುಣಿಗಲ್ ತಾಲೂಕಿನ ಶ್ರೀನಿವಾಸ ದೇವರ ಬೆಟ್ಟಕ್ಕೆ ಕರೆದೊಯ್ದು.. ಈ ವೇಳೆ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು 40 ಗ್ರಾಂ ಚಿನ್ನದ ಸರ, ಮೊಬೈಲ್, ಎಟಿಎಮ್ ಕಾರ್ಡ್ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಮೃತೂರು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಪ್ರಕರಣ ನಡೆದು ಒಂದು ತಿಂಗಳ ನಂತರ ಆರೋಪಿಯನ್ನು ಖೆಡ್ಡಾಗೆ ಬೀಳಿಸುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

News First Live Kannada

Leave a comment

Your email address will not be published. Required fields are marked *