ಪೊಲೀಸ್​​ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಕಂಪ್ಯೂಟರ್​​ ಕೊಟ್ಟಿದ್ದು ಯಾರು..? ಖರ್ಗೆ ಪ್ರಶ್ನೆ


ಬೆಂಗಳೂರು: ಯೂಥ್​ ಕಾಂಗ್ರೆಸ್​​ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಹ್ಯಾಕಿಂಗ್​​ ಮೂಲಕ ಅಕ್ರಮ ನಡೆಸಲಾಗಿದೆ ಎಂದು ಕಾಂಗ್ರೆಸ್​ ನಾಯಕರೇ ನನಗೆ ಹೇಳಿದ್ರು. ಈ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಲು ಸಿದ್ಧ ಎಂದು ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ, ಚುನಾವಣೆ ಸಮಯದಲ್ಲಿ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಕಂಪ್ಯೂಟರ್​ ಕೊಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಕಿ ಬಳಸಿ ಯೂಥ್​ ಕಾಂಗ್ರೆಸ್​ ಚುನಾವಣೆ ಹ್ಯಾಕ್; ನಲಪಾಡ್​​ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ 

ನ್ಯೂಸ್​​ಫಸ್ಟ್​ ಸಂದರ್ಶನದಲ್ಲಿ ಗೃಹ ಸಚಿವರು ನೀಡಿದ್ದ ಹೇಳಿಕೆಯನ್ನು ಕುರಿತಂತೆ ಟ್ವೀಟ್​​ ಮಾಡಿರುವ ಪ್ರಿಯಾಂಕ್​ ಖರ್ಗೆ ಅವರು, ಇಂಡಿಯನ್​​ ಯೂಥ್​ ಕಾಂಗ್ರೆಸ್​​ನ ರಾಜ್ಯ ಅಧ್ಯಕ್ಷರ ಚುನಾವಣೆಯ 2021ರ ಜನವರಿ 10,11 ಮತ್ತು 12 ರಂದು ನಡೆದಿತ್ತು. ಫಲಿತಾಂಶ 2021ರ ಫೆಬ್ರವರಿ 04 ರಂದು ಪ್ರಕಟವಾಗಿತ್ತು. ಈ ಅವಧಿಯಲ್ಲಿ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಸರ್ಕಾರ ಕಂಪ್ಯೂಟರ್ ಕೊಟ್ಟಿತ್ತೇ? ಬಿಜೆಪಿ ಸ್ಪಷ್ಟಪಡಿಸಲಿ, ಇಲ್ಲವೇ ಸುಳ್ಳು ಹೇಳುವುದನ್ನ ಬಿಡಲಿ ಎಂದು ಸವಾಲು ಹಾಕಿದ್ದಾರೆ.

ಅಲ್ಲದೇ, ನಲಪಾಡ್ ಮೇಲಿನ ಅರ್ಧದಷ್ಟು ಆಸಕ್ತಿ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಪ್ರಕರಣದ ತನಿಖೆಗೆ ತೋರಿದರೆ ಸರ್ಕಾರದ ಮಾನ ಉಳಿಸಬಹುದು ಎಂದು ಸಲಹೆ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *