ಬೆಂಗಳೂರು: ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿ ತಿಂತಾರಾ? ಕುರಿ ರಕ್ತ ಹುರಿದು ಕೊಟ್ಟರೆ ತಿಂತಾರಾ? ಎಂದು ಪ್ರಶ್ನಿಸಿದ್ದ ಹಂಸಲೇಖಾ ಇಂದು ಪೊಲೀಸ್ ಠಾಣೆಗೆ ಹಾಜರಾಗುವ ಸಾಧ್ಯತೆ ಇದೆ. ಹೀಗಾಗಿ ವಿಚಾರಣೆ ವೇಳೆ ನಾನೂ ಕೂಡ ಹಂಸಲೇಖ ಜೊತೆ ಹೋಗುತ್ತೇನೆ ಅಂತ ನಟ ಚೇತನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಎರಡು ಬಾರಿ ವಿಚಾರಣೆ ತಪ್ಪಿಸಿಕೊಂಡಿದ್ದ ಹಂಸಲೇಖ, ಇಂದು ನಗರದ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಇನ್ನು ಹಂಸಲೇಖ ಪರ ಹಾಗೂ ವಿರೋಧ ಪ್ರತಿಭಟನೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ
ಇನ್ನು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಹಂಸಲೇಖ ಪೇಜಾವರ ಶ್ರೀಗಳು ಮಾಂಸ ತಿಂತಾರಾ? ಅಂತ ಪ್ರಶ್ನಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರನ್ನು ಕೂಡ ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಹಂಸಲೇಖ ಹಾಜರಾಗುತ್ತಿದ್ದು, ಅವರೊಂದಿಗೆ ನಾನೂ ವಿಚಾರಣೆಗೆ ಹೋಗ್ತಿನಿ ಅಂತ ನಟ ಚೇತನ್ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಲೇಖಕಿ ಅರುಂಧತಿ ರಾಯ್ ಅವರ ಮಾತನ್ನು ಉಲ್ಲೇಖಿಸಿದ್ದು, ಬರಹಗಾರರು ತಮ್ಮ ಮನಸಿನ ಮಾತಾಡಲು ತಡೆ ಒಡ್ಡುವ ರಾಷ್ಟ್ರಗಳ ಬಗ್ಗೆ ಅಯ್ಯೋ ಅನಿಸುತ್ತೆ ಅಂತಾನೂ ಉಲ್ಲೇಖಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) November 25, 2021