ಪೊಲೀಸ್​​ ವಿಚಾರಣೆ ಬಳಿಕ ಸಂಗೀತ ನಿರ್ದೇಶಕ ಹಂಸಲೇಖ ರಿಯಾಕ್ಷನ್ ಏನು?

ಬೆಂಗಳೂರು: ಪೇಜಾವರ ಶ್ರೀ ಕುರಿತು ಹೇಳಿಕೆ ನೀಡಿದ್ದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ವಿಚಾರಣೆಗಾಗಿ ಬಸವನಗುಡಿ ಪೊಲೀಸ್​​ ಠಾಣೆಗೆ ಆಗಮಿಸಿದ್ದರು. ಬಂದ ಕೆಲವೇ ಸಮಯದಲ್ಲಿಯೇ ವಿಚಾರಣೆ ಮುಗಿಸಿ ಹೊರಟ ಹಂಸಲೇಖ ಅವರು ಮಾಧ್ಯಮಗಳಿಗೆ ರಿಯಾಕ್ಟನ್​​​ ಕೊಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಹಂಸಲೇಖ ಅವರು, ಏನು ಇಲ್ಲಮ್ಮ, ಏನು ಇಲ್ಲ ತಾಯಿ, ಎಲ್ಲರಿಗೂ ನಮಸ್ಕಾರ ಎಂದು ಕೈ ಮುಗಿದು ಹೊರಟರು. ಇನ್ನು, ಬಸವನಗುಡಿ ಪೊಲೀಸ್​​ ಠಾಣೆ ಮುಂಭಾಗ ಹಂಸಲೇಖ ಅವರನ್ನು ಬೆಂಬಲಿಸಿ ನಟ ಚೇತನ್​​ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿದ್ದರು. ಬಂಜರಂಗ ದಳ ಹಂಸಲೇಖ ಅವರ ವಿರುದ್ಧ ಪ್ರತಿಭಟನೆ ಮಾಡಿತ್ತು.

News First Live Kannada

Leave a comment

Your email address will not be published. Required fields are marked *