ಪೊಲೀಸ್ ಕಸ್ಟಡಿಗೆ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಸಾಕ್ಷಿ ಕಿರಣ್ ಗೋಸಾವಿ | Kiran Gosavi NCB witness in Aryan Khan drugs on cruise case, sent to police custody till Nov 8


ಪೊಲೀಸ್ ಕಸ್ಟಡಿಗೆ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಸಾಕ್ಷಿ ಕಿರಣ್ ಗೋಸಾವಿ

ಆರ್ಯನ್ ಖಾನ್​ನೊಂದಿಗೆ ಸೆಲ್ಫಿ ತೆಗೆದುಕೊಂಡ ಕಿರಣ್ ಗೋಸಾವಿ (ಎಡಚಿತ್ರ), ಪುಣೆ ಪೊಲೀಸರ ಕಸ್ಟಡಿಯಲ್ಲಿ ಕಿರಣ್ ಗೋಸಾವಿ

ಪುಣೆ: ಖ್ಯಾತ ಬಾಲಿವುಡ್ ನಟ ಶಾರೂಖ್​ ಖಾನ್ ಮಗ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಪರ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯನ್ನು ನವೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಪುಣೆ ನ್ಯಾಯಾಲಯ ಆದೇಶಿಸಿದೆ. ತಲೆಮರೆಸಿಕೊಂಡಿದ್ದ ಎನ್ನಲಾದ ಗೋಸಾವಿಯನ್ನು ಅಕ್ಟೋಬರ್ 28ರಂದು ಪೊಲೀಸರು ಬಂಧಿಸಿದ್ದರು. 2018ರಲ್ಲಿ ಚಿನ್ಮಯ್ ದೇಶ್​ಮುಖ್ ಎನ್ನುವವರಿಗೆ ಮಲೇಷ್ಯಾದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ₹ 18 ಲಕ್ಷ ವಂಚಿಸಿದ್ದ ಆರೋಪವನ್ನು ದೇಸಾಯಿ ಎದುರಿಸುತ್ತಿದ್ದರು.

ದೇಶ್​ಮುಖ್ ಅವರ ಪ್ರವಾಸಿ ವೀಸಾವನ್ನು ಸಾಮಾನ್ಯ ವೀಸಾ ಆಗಿ ಬದಲಿಸಿಕೊಡುವುದಾಗಿ ಗೋಸಾವಿ ಭರವಸೆ ಕೊಟ್ಟಿದ್ದ. ಆದರೆ ಪ್ರವಾಸಿ ವೀಸಾದ ಅವಧಿ ಕೊನೆಗೊಂಡ ತಕ್ಷಣ ಚಿನ್ಮಯ್ ಅವರು ಅಲ್ಲಿಂದ ಹಿಂದಿರುಗಬೇಕಾಯಿತು. ಅಕ್ಟೋಬರ್ 29ರಂದು ನಾಲ್ಕು ಹೆಚ್ಚುವರಿ ಮೋಸದ ದೂರುಗಳು ಗೋಸಾವಿ ವಿರುದ್ಧ ದಾಖಲಾದವು. ಪುಣೆ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್​ಐಆರ್​ ಹಾಕಲಾಯಿತು.

ಚಿನ್ಮಯ್ ದೇಶ್​ಮುಖ್ ಅವರಂತೆ ಹಲವರಿಗೆ ವಿದೇಶಗಳಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದ ಗೋಸಾವಿ ಲಕ್ಷಾಂತರ ರೂಪಾಯಿ ವಂಚಿಸಿದ್ದು ಈ ವೇಳೆ ಪತ್ತೆಯಾಗಿತ್ತು. ಎನ್​ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆಗೆ ಗೋಸಾವಿ ತೆಗೆದುಕೊಂಡಿದ್ದ ಸೆಲ್ಫಿ ವೈರಲ್ ಅದ ನಂತರ ಪೊಲೀಸರ ಕಣ್ಣು ಅವನ ಮೇಲೆ ಬಿದ್ದಿತ್ತು. ಗೋವಾಕ್ಕೆ ಹೊರಟಿದ್ದ ಐಷಾರಾಮಿ ಕ್ರೂಸ್ ಹಡಗಿನ ಮೇಲೆ ಎನ್​ಸಿಬಿ ದಾಳಿ ನಡೆಸಿದ ನಂತರ ವ್ಯಕ್ತಿಯೊಬ್ಬರಿಂದ ಈತ ₹ 50 ಲಕ್ಷ ಪಡೆದುಕೊಂಡಿದ್ದಾನೆ ಎಂದು ಗೋಸಾವಿಯ ಮಾಜಿ ಸಹಚರ ಪ್ರಭಾಕರ್ ಸೈಲ್ ಆರೋಪಿಸಿದ್ದ.

ಈ ಪ್ರಕಣದಲ್ಲಿ ಸೈಲ್ ಸಹ ಸಾಕ್ಷಿಯಾಗಿದ್ದಾರೆ. ಸ್ಯಾಮ್ ಡಿಸೋಜಾ ಎನ್ನುವವರೊಂದಿಗೆ ಗೋಸಾವಿ ಮಾತನಾಡುತ್ತಿದ್ದುದು ನನ್ನ ಕಿವಿಗೆ ಬಿತ್ತು. ಈ ವೇಳೆ ಅವರು ಆರ್ಯನ್ ಖಾನ್ ಪ್ರಕರಣವನ್ನು ₹ 18 ಲಕ್ಷ ಪಡೆದು ಮುಚ್ಚಿ ಹಾಕಲು ಮುಂದಾಗಿದ್ದ ಸಂಗತಿ ಅರಿವಾಯಿತು. ಈ ಹಣದಲ್ಲಿ ₹ 8 ಕೋಟಿಯನ್ನು ಎನ್​ಸಿಬಿಯ ಮುಂಬೈ ವಲಯ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ನೀಡಬೇಕಾಗುತ್ತೆ ಎಂಬ ವಿಚಾರವೂ ಕಿವಿಯ ಮೇಲೆ ಬಿದ್ದಿತ್ತು ಎಂದು ಸೈಲ್ ಹೇಳಿದ್ದರು.

ಇದನ್ನೂ ಓದಿ: Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?
ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ

TV9 Kannada


Leave a Reply

Your email address will not be published. Required fields are marked *