ಪೊಲೀಸ್ ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿ ಸರಳತೆ ಮೆರೆದ ಕಮಿಷನರ್​ ಕಮಲ್​ ಪಂತ್​

ಪೊಲೀಸ್ ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿ ಸರಳತೆ ಮೆರೆದ ಕಮಿಷನರ್​ ಕಮಲ್​ ಪಂತ್​

ಬೆಂಗಳೂರು: ಪೊಲೀಸ್​ ಪೇದೆಯೊಬ್ಬರ ಕಾರ್ಯವೈಖರಿಯನ್ನು ಮೆಚ್ಚಿದ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಅವರು ಕೆ.ಜೆ.ಹಳ್ಳಿ ಠಾಣೆಯ ಪೇದೆಯೊಬ್ಬರಿಗೆ ಸನ್ಮಾನ ಮಾಡಿ ಶ್ಲಾಘಿಸಿದ್ದಾರೆ.

ಬಕ್ರೀದ್ ಹಬ್ಬದ ಹಿನ್ನೆಲೆ ನಿನ್ನೆ ರಾತ್ರಿ ಸಿಟಿ ರೌಂಡ್ಸ್ ನಡೆಸಿದ್ದ ಕಮಿಷನರ್ ಕಮಲ್ ಪಂತ್ ಶಿವಾಜಿನಗರ, ಡಿಜೆ ಹಳ್ಳಿ, ಗೋವಿಂದಪುರ, ಕೆಜೆ ಹಳ್ಳಿ, ಬಾಣಸವಾಡಿ, ಚಾಮರಾಜಪೇಟೆ, ಕೋರಮಂಗಲ ಸೇರಿ ಹಲವು ಠಾಣೆಗೆ ಭೇಟಿ ನೀಡಿದ್ದಾರೆ.

ಈ ವೇಳೆ ಕೆಜೆ ಹಳ್ಳಿಯ ಠಾಣೆಗೆ ಭೇಟಿ ನೀಡಿದಾಗ ಅಲ್ಲಿಯ ಮುಸಲ್ಮಾನ್​ ಬಾಂಧವರು ಸನ್ಮಾನ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸನ್ಮಾನ ನಿರಾಕರಿಸಿದ ಕಮಿಷನರ್​ ಕಮಲ್​ ಪಂತ್ ಸನ್ಮಾನ ಮಾಡಬೇಕಿರೋದು ನನಗಲ್ಲ ಸದಾಕಾಲ ಫೀಲ್ಡ್ ನಲ್ಲಿದ್ದು ಸಾರ್ವಜನಿಕರ ಸೇವೆ ಮಾಡುವ ಪೊಲೀಸ್​ ಕಾನ್ಸ್​ಟೇಬಲ್​ಗಳಿಗೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು -ರೌಡಿಶೀಟರ್ ಬಬ್ಲಿ ಕೊಲೆ ಆರೋಪಿಗಳ ಮೇಲೆ ಫೈರಿಂಗ್

ಈ ವೇಳೆ ಜೊತೆಗಿದ್ದ ಡಿಸಿಪಿ ಹಾಗೂ ಎಸಿಪಿಗೆ ಕೆಜಿಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಕೇಳಿದ್ದು ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ ಶಿವಕುಮಾರ್​ ಎಂಬ ಕಾನ್ಸ್​ಟೇಬಲ್ ಹೆಸರು ಸೂಚಿಸಿದ್ದಾರೆ.

ಈ ವೇಳೆ ನೈಟ್ ಬೀಟ್ ನಲ್ಲಿದ್ದ ಕಾನ್ಸ್​ಟೇಬಲ್  ಶಿವುಕುಮಾರ್​​ರನ್ನ ಕೆ.ಜಿ.ಹಳ್ಳಿ ಠಾಣೆಗೆ ಕರೆಸಿದ ಕಮಿಷನರ್ ಸಾರ್ವಜನಿಕರು ತಮಗೆ ಸನ್ಮಾನ ಮಾಡಲು ತಂದಿದ್ದ ಶಾಲು ಪೇಟ ಹಾರವನ್ನ ಸಾರ್ವಜನಿಕರ ಮುಂದೆ ಶಿವಕುಮಾರ್​ಗೆ ಸನ್ಮಾನ ಮಾಡಿ ಸರಳತೆ ಮೆರೆದಿದ್ದಾರೆ. ಈ ವೇಳೆ ಕೆಜಿ ಹಳ್ಳಿಯಲ್ಲಿ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಪೊಲೀಸ್ ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿ ಸರಳತೆ ಮೆರೆದ ಕಮಿಷನರ್​ ಕಮಲ್​ ಪಂತ್​ appeared first on News First Kannada.

Source: newsfirstlive.com

Source link