ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಷ್ಟು ದಿನ ನೀವು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ ಬೈಕ್ ಕಳುವಾಗಿರುವ ಬಗ್ಗೆ ಅಥವಾ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿದ್ದ ಬಗ್ಗೆ ಕೇಳಿರ್ತೀರಿ.. ಆದ್ರೆ ಇಲ್ಲಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಬೈಕ್ ಮಂಗಮಾಯವಾಗಿದೆ.. ಅದೂ ಯಾರೋ ಜನ ಸಾಮಾನ್ಯರು ನಿಲ್ಲಿಸಿದ್ದ ಬೈಕ್ ಅಲ್ಲ.. ಸರ್ಕಾರ ಪೊಲೀಸ್ ಠಾಣೆಗೆ ನೀಡಿದ್ದ ಬೈಕ್.. ಆ ಬೈಕ್​ನ್ನ ಈಗ ಚಾಲಕಿ ಕಳ್ಳರು ಎಗರಿಸಿದ್ದಾರೆ..

ಹೌದು.. ಬೆಂಗಳೂರು ದಂಡು ರೈಲ್ವೆ ಪೊಲೀಸ್ ಠಾಣೆಯ ಮುಂದೆಯೇ ನಿಲ್ಲಿಸಿದ್ದ KA-03-G-0520 ನಂಬರ್ ನ ಹೀರೋ ಹೋಂಡಾ ಬೈಕ್ ಕಳ್ಳತನವಾಗಿದೆ ಎಂದು ಪಿಎಸ್ ಐ ಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಬೈಕಿಗೆ ಸೆಫ್ಟಿ ಇಲ್ವಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಠಾಣೆಯ ಆವರಣದಲ್ಲಿ ಬೈಕ್​ನ್ನ ಪಾರ್ಕ್ ಮಾಡಲಾಗಿತ್ತು.. ಠಾಣೆಯಲ್ಲಿ ಸಬ್ ಇನ್ಸ್​ಪೆಕ್ಟರ್, ಸಿಬ್ಬಂದಿ ಎಲ್ಲರೂ ಇದ್ರು.. ಆದ್ರೆ ಬೈಕ್ ಮಾತ್ರ ಇರಲಿಲ್ಲ ಎನ್ನಲಾಗಿದೆ.

ಎಷ್ಟೋ ಜನ ಊರಿಗೆ ಹೋಗ ಬೇಕಿದ್ರೆೇ ಅಥಾವ ಬೇರೆ ಕೆಲಸಕ್ಕೆ ಹೋಗೋ ಸಮಯದಲ್ಲಿ ಠಾಣೆ ಎದುರು ಬೈಕ್ ನಿಲ್ಲಿಸಿ ಹೋಗ್ತಾರೆ.. ಯಾಕಂದ್ರೆ ಪೊಲೀಸ್ ಠಾಣೆ ಮುಂದೆ ಬೈಕ್ ನಿಲ್ಲಿಸಿದ್ದೀನಿ ನಮ್ಮ ಬೈಕ್ ಸೇಫ್ ಅಂತಾ ಭಾರೀ ಧೈರ್ಯ.. ಠಾಣೆಯ ಮುಂದೆ ಕಳ್ಳತನ ಮಾಡೋ ಧೈರ್ಯ ಯಾರು ಮಾಡ್ತಾರೆ ಹೇಳಿ ಅಲ್ವಾ..? ಅದರೆ ಠಾಣೆ ಮುಂದೆ ನಿಲ್ಲಿಸಬೇಕಿದ್ರೆ ಒಮ್ಮೆ ಯೋಚಿಸೋದು ಒಳ್ಳೇದು. ಯಾಕಂದ್ರೆ ಕಳ್ಳತನ ವಾಗಿರೋದು ಪೊಲೀಸ್ ಬೈಕ್.

ಈ ಕುರಿತು ಹೇಳಿಕೆ ನೀಡಿರುವ ರೈಲ್ವೆ ಎಸ್​ಪಿ ಸಿರಿ ಗೌರಿ ಅವರು.. 15 ವರ್ಷದ ಹಿಂದಿನ ಬೈಕ್ ಒಂದನ್ನ ಕಳ್ಳತನ ಮಾಡಿದ್ದಾರೆ. ಲಾಕ್ ಡೌನ್ ಇರೋ ಕಾರಣ ಮಿಸ್ ಯೂಸ್ ಮಾಡುವ ಉದ್ದೇಶದಿಂದ ಕದ್ದಿರುವ ಅನುಮಾನವಿದೆ. ತನಿಖೆ ನಡೀತಿದೆ. ಅದಷ್ಟ ಬೇಗ ಬೈಕ್​​ ಅನ್ನ ಪತ್ತೆ ಮಾಡಲಾಗುವುದು ಎಂದಿದ್ದಾರೆ.

ಕಳ್ಳತನ ವಾಗಿರುವ ಬೈಕ್ ಅನ್ನ ಪೊಲೀಸರು ಹುಡುಕ್ತಿದ್ದಾರೆ. ಠಾಣೆಯ ಮುಂದೆ ನಿಲ್ಲಿಸಿದ್ದ ಪೊಲೀಸ್ ಬೈಕ್ ಅನ್ನ ಕದ್ದ ಆ ಐನಾತಿ ಕಳ್ಳ ಯಾರು ಎನ್ನುವ ಬಗ್ಗೆ ತನಿಖೆ ಮುಂದುವರೆದಿದೆ. ಅದಷ್ಟು ಬೇಗ ಪೊಲೀಸರ ಬೈಕ್ ದೊರಕಲಿ ಹಾಗೇ ಕಳ್ಳತನವಾಗಿರುವ ಜನ ಸಾಮಾನ್ಯರ ಬೈಕ್​ನ್ನ ಇವರು ಆದಷ್ಟು ಬೇಗ ಹುಡುಕಿ ಕೊಡುವಂತಾಗಲಿ.

The post ಪೊಲೀಸ್ ಠಾಣೆಯ ಮುಂದೆ ಪೊಲೀಸರ ಬೈಕೇ ಕಳ್ಳತನವಾಯ್ತು ಅಂದ್ರೆ ನಂಬ್ತೀರಾ..? appeared first on News First Kannada.

Source: newsfirstlive.com

Source link