ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಲಾಗಿದ್ದು ಜನರ ಅನಗತ್ಯ ಓಡಾಟ ನಿರ್ಬಂಧಿಸಲಾಗಿದೆ. ಆದರೂ ಜನ ಓಡಾಟ ಮಾತ್ರ ನಿಲ್ಲಿಸಿಲ್ಲ. ನಗರದ ಅಂಬೇಂಡ್ಕರ್ ವೃತ್ತದಲ್ಲಿ ಆಸ್ಪತ್ರೆ ಕಾರಣ ಹೇಳಿಕೊಂಡು ಓಡಾಡುತ್ತಿದ್ದ ಮಹಿಳೆ ಸೂಕ್ತ ದಾಖಲೆ ಒದಗಿಸಲು ಕೇಳಿದ್ದಕ್ಕೆ ಪೊಲೀಸರ ಮುಂದೆ ಕಣ್ಣೀರಿಟ್ಟು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.

ಪೊಲೀಸರು ಬೈಕ್ ನಿಲ್ಲಿಸಲು ಸೂಚಿಸಿದರು ನಿಲ್ಲಿಸದೇ ಮುಂದೆ ಬಂದಿದ್ದ ಮಹಿಳೆ, ದಾಖಲೆ ತೋರಿಸುವಂತೆ ಕೇಳಿದಾಗ ಯಾವ ದಾಖಲೆಗಳು ಇಲ್ಲದೆ ನಾಟಕ ಶುರುಮಾಡಿದ್ದಾಳೆ. ಆಸ್ಪತ್ರೆ ಹೋಗಲು ಸಂಬಂಧಪಟ್ಟ ದಾಖಲೆ ನೀಡದ್ದಕ್ಕೆ ಪೊಲೀಸರು ಬೈಕ್ ಕೀ ಕೊಡಿ ಎಂದು ಕೇಳಿದ್ರೂ ಕೊಡದೇ ವಾಗ್ವಾದ ಮಾಡಿದ್ದಾಳೆ.

ಪೊಲೀಸರು ಗಾಡಿ ಕೀ ಕಿತ್ತುಕೊಂಡಾಗ ಬಿಕ್ಕಿ ಬಿಕ್ಕಿ ಅತ್ತು, ಗಾಬರಿಗೊಂಡವರಂತೆ ವರ್ತಿಸುವ ಮೂಲಕ ಪೊಲೀಸರೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾಳೆ. ಇದರಿಂದ ವಿಚಲಿತರಾದ ಪೊಲೀಸರು ದಂಡ ಕಟ್ಟಿಸಿಕೊಂಡು ಬೈಕ್ ಬಿಟ್ಟಿದ್ದಾರೆ.

The post ಪೊಲೀಸ್ ತಪಾಸಣೆ ವೇಳೆ ಕಣ್ಣೀರಿಟ್ಟು ಮಹಿಳೆ ಹೈಡ್ರಾಮಾ appeared first on Public TV.

Source: publictv.in

Source link