ಪೋಕ್ಸೊ ಕಾಯ್ದೆಯಡಿಯಲ್ಲಿ ಮುಖ ಮೈಥುನ ಗಂಭೀರ ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್ | Allahabad High Court says as per POCSO oral sex does not fall in the category of aggravated sexual assault

ಪೋಕ್ಸೊ ಕಾಯ್ದೆಯಡಿಯಲ್ಲಿ ಮುಖ ಮೈಥುನ ಗಂಭೀರ ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ (Allahabad High Court) 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಜೈಲು ಶಿಕ್ಷೆಯನ್ನು 10 ವರ್ಷಗಳಿಂದ ಏಳು ವರ್ಷಕ್ಕೆ ಇಳಿಸಿದೆ.  ಪೋಕ್ಸೊ (POCSO) ಕಾಯ್ದೆಯ ನಿಬಂಧನೆಗಳ ಪ್ರಕಾರ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕಾರ ಮುಖ ಮೈಥುನ” ಗಂಭೀರ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ದೌರ್ಜನ್ಯ” ವರ್ಗಕ್ಕೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿ ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅನಿಲ್ ಕುಮಾರ್ ಓಜಾ ಅವರು “ಪೋಕ್ಸೊ ಕಾಯ್ದೆಯ ನಿಬಂಧನೆಗಳ ಪರಿಶೀಲನೆಯಿಂದ, ಮೇಲ್ಮನವಿದಾರರು ಮಾಡಿದ ಅಪರಾಧವು ಸೆಕ್ಷನ್ 5/6 ಅಡಿಯಲ್ಲಿ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. POCSO ಕಾಯ್ದೆಯ ಅಡಿಯಲ್ಲಿ ಅಥವಾ POCSO ಕಾಯ್ದೆಯ ಸೆಕ್ಷನ್ 9(M) ಅಡಿಯಲ್ಲಿ ಅಪರಾಧಿಯು ತನ್ನ ಗುಪ್ತಾಂಗವನ್ನು ಸಂತ್ರಸ್ತನ ಬಾಯಿಗೆ ಹಾಕಿರುವುದರಿಂದ ಪ್ರಸ್ತುತ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯವಿದೆ. ಗುಪ್ತಾಂಗವನ್ನು ಬಾಯಿಗೆ ಹಾಕಿಕೊಳ್ಳುವುದು ಗಂಭೀರ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ದೌರ್ಜನ್ಯದ ವರ್ಗಕ್ಕೆ ಬರುವುದಿಲ್ಲ. ಇದು ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಸೂಕ್ಷ್ಮ ಲೈಂಗಿಕ ದೌರ್ಜನ್ಯದ ವರ್ಗಕ್ಕೆ ಬರುತ್ತದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಕೆರಳಿಸಿ ಬಲವಂತವಾಗಿ ನಡೆಸುವ ಲೈಂಗಿಕ ಆಕ್ರಮಣದ ಬಗ್ಗೆ ಹೇಳಿದರೆ , ಸೆಕ್ಷನ್ 5 ಮತ್ತು 6 “ಗಂಭೀರ ಲೈಂಗಿಕ ಆಕ್ರಮಣ”ಗಳ ಬಗ್ಗೆ ಹೇಳುತ್ತದೆ. 2018 ರಲ್ಲಿ ಝಾನ್ಸಿಯ ಕೆಳ ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿತು ಮತ್ತು ಅವನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಈ ಘಟನೆಯು ಮಾರ್ಚ್ 22, 2016 ರಲ್ಲಿ ನಡೆದಿತ್ತು. ಆರೋಪಿಯು ಝಾನ್ಸಿಯಲ್ಲಿರುವ ತನ್ನ ಮನೆಗೆ ಬಂದು ತನ್ನ ಮಗನನ್ನು ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದಿದ್ದಾನೆ ಎಂದು 10 ವರ್ಷದ ಬಾಲಕನ ತಂದೆ ಆರೋಪಿಸಿದರು. ಆರೋಪಿಯು ತನ್ನ ಮಗನಿಗೆ 20 ರೂ.ಗಳನ್ನು ನೀಡಿದ್ದು, ಮುಖ ಮೈಥುನ ಮಾಡುವಂತೆ ಹೇಳಿದ್ದಾನೆ ಎಂದು ಸಂತ್ರಸ್ತ ಬಾಲಕನ ಅಪ್ಪ ಆರೋಪಿಸಿದ್ದಾರೆ.

ತಮ್ಮ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ವ್ಯಕ್ತಿಯನ್ನು ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು), 506 (ಕ್ರಿಮಿನಲ್ ಪಿತೂರಿ), ಮತ್ತು ಪೋಕ್ಸೊ ಕಾಯ್ದೆಯ 3/4 ಅಡಿಯಲ್ಲಿ ಆರೋಪ ಹೊರಿಸಿದ್ದರು. ಆದಾಗ್ಯೂ, ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮೇಲ್ಮನವಿದಾರರ ಮೇಲೆ ಐಪಿಎಸ್ ಸೆಕ್ಷನ್ 377 ಮತ್ತು 506 ಮತ್ತು POCSO ಕಾಯ್ದೆಯ ಸೆಕ್ಷನ್ 5/6 ಅಡಿಯಲ್ಲಿ ಆರೋಪ ಹೊರಿಸಿದ್ದಾರೆ.

ಕೆಳ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ, ವ್ಯಕ್ತಿ ತನ್ನ ವಕೀಲರ ಮೂಲಕ ಹೈಕೋರ್ಟ್‌ಗೆ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಅಪರಾಧವನ್ನು ಮಾಡಲಾಗಿಲ್ಲ ಮತ್ತು ಈ ಪೋಕ್ಸೊ ನಿಬಂಧನೆಯ ಅಡಿಯಲ್ಲಿ ತಪ್ಪಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.

ಪೋಕ್ಸೊ ಕಾಯ್ದೆ ದಾಖಲೆಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಧೀಶರು ತಮ್ಮ ಆದೇಶದಲ್ಲಿ  ” ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಿಸಬೇಕೆಂದು ನಾನು ಪರಿಗಣಿಸುತ್ತೇನೆ ಏಕೆಂದರೆ ಮೇಲ್ಮನವಿದಾರನು ಮಾಡಿದ ಕೃತ್ಯವು ಕೆರಳಿಸುವಿಕೆಯಿಂದ ಬಲವಂತವಾಗಿ ಮಾಡುವ ಲೈಂಗಿಕ ಆಕ್ರಮಣದಲ್ಲಿ ಬರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ತುಮಕೂರು: ಹೆರಿಗೆಯ ಬಳಿಕ ಬಾಲ್ಯವಿವಾಹ ಪತ್ತೆ; ಅಪ್ರಾಪ್ತೆ ಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

TV9 Kannada

Leave a comment

Your email address will not be published. Required fields are marked *